For Quick Alerts
  ALLOW NOTIFICATIONS  
  For Daily Alerts

  ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಗಿದೆ ನವೆಂಬರ್ 18 ರ ನಂಟು.! ಏನದು.?

  |

  2017 ರಲ್ಲಿ ವಿಶ್ವ ಸುಂದರಿ ಕಿರೀಟ ತೊಟ್ಟು ಮುಗುಳುನಗೆ ಬೀರಿದ ಸುಂದರಿ ಮಾನುಷಿ ಚಿಲ್ಲರ್. ಮಿಸ್ ವರ್ಲ್ಡ್ ಪಟ್ಟಕ್ಕೆ ಏರಿದ ಎರಡು ವರ್ಷಗಳ ಬಳಿಕ ಮಾನುಷಿ ಚಿಲ್ಲರ್ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಬಾಲಿವುಡ್ ಗೆ ಮಾನುಷಿ ಚಿಲ್ಲರ್ ಅಧಿಕೃತವಾಗಿ ಅಡಿಯಿಟ್ಟಿದ್ದಾರೆ.

  ಖತರೋಂಕೆ ಖಿಲಾಡಿ ಅಕ್ಷಯ್ ಕುಮಾರ್ ಜೊತೆಗೆ ಮಾನುಷಿ ಚಿಲ್ಲರ್ ಅಭಿನಯಿಸುತ್ತಿದ್ದಾರೆ. ಐತಿಹಾಸಿಕ ಸಿನಿಮಾ 'ಪೃಥ್ವಿರಾಜ್' ಚಿತ್ರದಲ್ಲಿ ಅಕ್ಷಯ್ ಕುಮಾರ್ ಗೆ ಮಾನುಷಿ ಚಿಲ್ಲರ್ ಜೋಡಿಯಾಗಿದ್ದಾರೆ.

  ಡಾ.ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶನ ಮಾಡುತ್ತಿರುವ 'ಪೃಥ್ವಿರಾಜ್' ಚಿತ್ರದ ಚಿತ್ರೀಕರಣ ಶುರುವಾಗಿದೆ. ಈ ನಡುವೆ ಮಾನುಷಿ ಚಿಲ್ಲರ್ ಗೆ ನವಂಬರ್ 18 ರ ನಂಟಿದೆ. ಅದೇನು ಅಂತೀರಾ.. ಸಂಪೂರ್ಣ ಮಾಹಿತಿ ಇಲ್ಲಿದೆ, ಓದಿರಿ..

  ಮೊಟ್ಟ ಮೊದಲ ಶಾಟ್

  ಮೊಟ್ಟ ಮೊದಲ ಶಾಟ್

  ಪೃಥ್ವಿರಾಜ್ ಚೌಹಾಣ್ ಜೀವನಚರಿತ್ರೆ ಸಾರುವ 'ಪೃಥ್ವಿರಾಜ್' ಚಿತ್ರ ಸೆಟ್ಟೇರಿದೆ. ನಿನ್ನೆಯಷ್ಟೇ ಮಾನುಷಿ ಚಿಲ್ಲರ್ 'ಪೃಥ್ವಿರಾಜ್' ಚಿತ್ರದ ಮೊಟ್ಟ ಮೊದಲ ಶಾಟ್ ನೀಡಿದರು. ಬಣ್ಣ ಹಚ್ಚಿ ಕ್ಯಾಮರಾ ಮುಂದೆ ಮಾನುಷಿ ಚಿಲ್ಲರ್ ಫಸ್ಟ್ ಟೈಮ್ ಅಭಿನಯ ಮಾಡಿದ್ದು ನಿನ್ನೆ.. ಅಂದ್ರೆ ನವೆಂಬರ್ 18 ರಂದು. ಇದೇ ಎರಡು ವರ್ಷಗಳ ಹಿಂದಿನ ನವೆಂಬರ್ 18 ರಂದು ಮಾನುಷಿ ಚಿಲ್ಲರ್ ಜೀವನದಲ್ಲಿ ಸಂತಸ ಮುಗಿಲು ಮುಟ್ಟಿತ್ತು.

  'ಪೃಥ್ವಿರಾಜ'ನ ರಾಣಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ವಿಶ್ವ ಸುಂದರಿ ಮಾನುಷಿ ಚಿಲ್ಲರ್'ಪೃಥ್ವಿರಾಜ'ನ ರಾಣಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ವಿಶ್ವ ಸುಂದರಿ ಮಾನುಷಿ ಚಿಲ್ಲರ್

  2017 ನವೆಂಬರ್ 18

  2017 ನವೆಂಬರ್ 18

  2017 ನವೆಂಬರ್ 18 ರಂದು ಮಾನುಷಿ ಚಿಲ್ಲರ್ ಚೀನಾದಲ್ಲಿದ್ದರು. 'ಮಿಸ್ ವರ್ಲ್ಡ್ 2017'ರ ಗ್ರ್ಯಾಂಡ್ ಈವೆಂಟ್ ಚೀನಾದಲ್ಲಿ ನಡೆಯುತ್ತಿತ್ತು. ಅಲ್ಲಿ, ಇಂಗ್ಲೆಂಡ್, ಫ್ರಾನ್ಸ್, ಕೀನ್ಯಾ ಮತ್ತು ಮೆಕ್ಸಿಕೋದ ಸುಂದರಿಯರನ್ನು ಮಣಿಸಿ 'ವಿಶ್ವ ಸುಂದರಿ' ಕಿರೀಟ ತೊಟ್ಟವರು ಭಾರತದ ಸುಂದರಿ, ಹರಿಯಾಣ ಮೂಲದ ಮೆಡಿಕಲ್ ವಿದ್ಯಾರ್ಥಿನಿ ಮಾನುಷಿ ಚಿಲ್ಲರ್.

  ಐಶ್ವರ್ಯ ರೈ, ಪ್ರಿಯಾಂಕಾರಂತೆ 'ಮಾನುಷಿ ಚಿಲ್ಲರ್'ಗೂ ಅದೃಷ್ಟ.!ಐಶ್ವರ್ಯ ರೈ, ಪ್ರಿಯಾಂಕಾರಂತೆ 'ಮಾನುಷಿ ಚಿಲ್ಲರ್'ಗೂ ಅದೃಷ್ಟ.!

  ಎರಡು ಸಂತಸದ ಕ್ಷಣಗಳು ಒಂದೇ ದಿನ.!

  ಎರಡು ಸಂತಸದ ಕ್ಷಣಗಳು ಒಂದೇ ದಿನ.!

  ''ಸಿನಿ ಜಗತ್ತಿನಲ್ಲಿ ನಾನು ಮೊಟ್ಟ ಮೊದಲ ಶಾಟ್ ನೀಡಿದ್ದು ನವೆಂಬರ್ 18 ರಂದು. ಎರಡು ವರ್ಷಗಳ ಹಿಂದೆ ನಾನು ವಿಶ್ವ ಸುಂದರಿ ಆಗಿದ್ದು ನವೆಂಬರ್ 18 ರಂದು. ಎಂತಹ ಸುಂದರ ಕಾಕತಾಳೀಯ ಇದು. ನನ್ನ ಜೀವಮಾನದ ಎರಡು ದೊಡ್ಡ ಮೈಲಿಗಲ್ಲು ಒಂದೇ ದಿನಾಂಕ ನಡೆದಿರುವುದು ಅಚ್ಚರಿಯೇ ಸರಿ. ನವೆಂಬರ್ 18 ನಿಜಕ್ಕೂ ನನ್ನ ಜೀವನದಲ್ಲಿ ತುಂಬಾ ಸ್ಪೆಷಲ್'' ಎಂದಿದ್ದಾರೆ ಮಾನುಷಿ ಚಿಲ್ಲರ್.

  ಮಾನುಷಿ ಚಿಲ್ಲರ್ ಗೆ ಒಲಿಯುತ್ತಾ ಅದೃಷ್ಟ.?

  ಮಾನುಷಿ ಚಿಲ್ಲರ್ ಗೆ ಒಲಿಯುತ್ತಾ ಅದೃಷ್ಟ.?

  ಈ ಹಿಂದೆ ವಿಶ್ವ ಸುಂದರಿ ಪಟ್ಟಕ್ಕೇರಿದ್ದ ಐಶ್ವರ್ಯ ರೈ ಬಚ್ಚನ್ ಮತ್ತು ಪ್ರಿಯಾಂಕಾ ಛೋಪ್ರಾ ಬಾಲಿವುಡ್ ನಲ್ಲಿ ಬಹುಬೇಡಿಕೆ ಕಂಡುಕೊಂಡರು. ಮದುವೆ ಆಗಿದ್ದರೂ ಈಗಲೂ ಐಶ್ವರ್ಯ ರೈ ಮತ್ತು ಪ್ರಿಯಾಂಕಾ ಛೋಪ್ರಾಗೆ ಬಿಟೌನ್ ನಲ್ಲಿ ಡಿಮ್ಯಾಂಡ್ ಇದೆ. ಇವರಿಬ್ಬರಂತೆ ಮಾನುಷಿ ಚಿಲ್ಲರ್ ಕೂಡ ಬಾಲಿವುಡ್ ನಲ್ಲಿ ರಾಣಿಯಾಗಿ ಮೆರೆಯುತ್ತಾರಾ.? ಮಾನುಷಿ ಚಿಲ್ಲರ್ ಗೆ ಹಿಂದಿ ಚಿತ್ರರಂಗದಲ್ಲಿ ಅದೃಷ್ಟ ಖುಲಾಯಿಸುತ್ತಾ ಅಂತ ಕಾದು ನೋಡಬೇಕು.

  English summary
  Miss World Manushi Chillar has a connection with November 18th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X