ಬಾಲಿವುಡ್‌ನಲ್ಲಿ ಖುಲಾಯಿಸದ ಅದೃಷ್ಟ ; ದ್ವೀಪದಲ್ಲಿ ಬಿಕಿನಿ ಮಾರಲು ಮುಂದಾದ ವಿಶ್ವ ಸುಂದರಿ...!
ವಿಶ್ವ ಸುಂದರಿ ಕಿರೀಟವನ್ನ ಮುಡಿಗೇರಿಸಿಕೊಂಡು ಆ ನಂತರ ಸೀದಾ ಬಾಲಿವುಡ್‌ಗೆ ಬಂದವರಲ್ಲಿ ಮಾನುಷಿ ಚಿಲ್ಲರ್ ಕೂಡ ಒಬ್ಬರು. ಆದರೆ ಐಶ್ವರ್ಯ ರೈ ಮತ್ತು ಪ್ರಿಯಾಂಕ ಚೋಪ್ರಾ ಅವರನ್ನ ಹೊತ್ತು ಮೆರೆಸಿದ ಜನ ಇವರನ್ನ ಮೆರೆಸಲಿಲ್ಲ. ಅವರಿಗೆ ಸಿಕ್ಕ ಗೆಲುವು ಇವರಿಗೆ ಸಿಗಲಿಲ್ಲ.
ಹಾಗಂಥ ಮಾನುಷಿ ಇನ್ನೂ ಸಂಪೂರ್ಣವಾಗಿ ಕುಗ್ಗಿಲ್ಲ. ಸೋಲು ಒಪ್ಪಿಲ್ಲ. ಬಣ್ಣದ ಪ್ರಪಂಚದಿಂದ ಮರೆಯಾಗಿಲ್ಲ. ಇವತ್ತು ಕೂಡ ಮಾನುಷಿ ತಮ್ಮ ಪ್ರಯತ್ನವನ್ನ ಮುಂದುವರೆಸಿದ್ದಾರೆ. ಕೆಲವೊಂದಿಷ್ಟು ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಆದರೂ.. ಮಾನುಷಿ ಅವರಲ್ಲಿ ಚಿಕ್ಕ ಆತಂಕ ಇದ್ದಂತೆ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ಮಾನುಷಿ ಸೈಡ್ ಬಿಸಿನೆಸ್‌ನ ಆರಂಭಿಸಿದ್ದಾರೆ

ಹೌದು. ಬಣ್ಣದ ಪ್ರಪಂಚದಲ್ಲಿ ಬದುಕು ಕಟ್ಟಿಕೊಂಡ ಅನೇಕರು ಈ ಹಿಂದೆ ಕೂಡ ಭವಿಷ್ಯದ ದೃಷ್ಟಿಯಿಂದ ಬೇರೆ ಬೇರೆ ವ್ಯಾಪಾರಕ್ಕಿಳಿದಿದ್ದಾರೆ. ಉದಾಹರಣೆಗೆ.. ಅನುಷ್ಕಾ ಶರ್ಮಾ ನುಶ್ ಎಂಬ ಸ್ವಂತ ಬಟ್ಟೆ ಬ್ರ್ಯಾಂಡ್ ನ ಆರಂಭ ಮಾಡಿದ್ದರೆ, ಕತ್ರಿನಾ ಕೈಫ್ ಕೆ ಬ್ಯೂಟಿ ಎಂಬ ಸ್ಕಿನ್ ಕೇರ್ ಮತ್ತು ಮೇಕಪ್‌ನ ಸಂಸ್ಥೆಯನ್ನ ಹುಟ್ಟು ಹಾಕಿದ್ದಾರೆ.
ಈ ಸಾಲಿಗೆ ಈಗ ಸೇರ್ಪಡೆಯಾಗಿರುವ ಮಾನುಷಿ ಚಿಲ್ಲರ್ ಬಿಕಿನಿಯನ್ನ ಮಾರಲು ಮುಂದಾಗಿದ್ದಾರೆ. ಶೀಫಾ ಗಿಲಾನಿ ಅವರ ಜೊತೆ ಸೇರಿ ಮಾನುಷಿ ಚಿಲ್ಲರ್ ದ್ವೀಪ್ ಎಂಬ ಬ್ರ್ಯಾಂಡ್‌ನ ಶುರು ಮಾಡಿದ್ದಾರೆ. ಈಜುಕೋಳಕ್ಕೆ ಇಳಿಯುವ ಮುನ್ನ ಅಥವಾ ಬೀಚ್ ನಲ್ಲಿ ಮೋಜು-ಮಸ್ತಿ ಮಾಡುವ ಮುನ್ನ ಮಹಿಳೆಯರು ಮಾನುಷಿ ಚಿಲ್ಲರ್ ಅವರ ಈ ಡ್ವೀಪ್ ನಿಂದ ಉಡುಗೆಯನ್ನ ಖರಿದೀಸಬಹುದು.
ಮರುಬಳಕೆಯ ಪಾಲಿಯೆಸ್ಟರ್ ಮತ್ತು ಸಾವಯವ ಹತ್ತಿಯಂತಹ ಪರಿಸರ ಸ್ನೇಹಿ ವಸ್ತುಗಳ ಬಳಕೆಯಿಂದ ಮಾಡಲಾಗುವ ಈ ಈಜುಡುಗೆಗಳಿಗೆ ₹ 1,099 ರಿಂದ ₹ 19,999ರವರೆಗೆ ಮಾನುಷಿ ಚಿಲ್ಲರ್ ದರಗಳನ್ನ ನಿಗದಿ ಮಾಡಿದ್ದಾರೆ.
ಇನ್ನೂ ದ್ವೀಪ್‌ನೊಂದಿಗೆ ಉದ್ಯಮಿಯಾಗಿ ಪಾದಾರ್ಪಣೆ ಮಾಡುತ್ತಿರುವುದು ನನ್ನ ಬದುಕಿನ ಪ್ರಯಾಣದ ಹೊಸ ಅಧ್ಯಾಯ ಎಂದಿರುವ ಮಾನುಷಿ ಚಿಲ್ಲರ್ ರೋಹ್ಟಾಂಗ್‌ನ ಸಾಮಾನ್ಯ ಹುಡುಗಿಯಾದ ನಾನು ವಿಶ್ವ ಸುಂದರಿಯಾಗ್ತೀನಿ ಎಂದು ಅಂದುಕೊಂಡಿರಲಿಲ್ಲ. ಬಾಲಿವುಡ್ ನಟಿಯಾಗಿ, ವಿವಿಧ ಪ್ರತಿಷ್ಠಿತ ಬ್ರಾಂಡ್‌ಗಳ ರಾಯಭಾರಿಯಾಗಿ ನನ್ನದೇ ಬ್ರ್ಯಾಂಡ್‌ನ ಉದ್ಯಮ ಆರಂಭ ಮಾಡುತ್ತೇನೆ ಎಂದು ನಾನು ಕನಸು ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ ಅಂದಿದ್ದಾರೆ.

ಇದು ಕೇವಲ ಬ್ರ್ಯಾಂಡ್ ಅಲ್ಲ ಇದು ಸುಸ್ಥಿರತೆ, ಒಳಗೊಳ್ಳುವಿಕೆ ಮತ್ತು ಸಬಲೀಕರಣದ ನನ್ನ ಮೌಲ್ಯಗಳನ್ನು ಸಾಕಾರಗೊಳಿಸುವ ದಿಸೆಯಲ್ಲಿ ಇಡಲಾದ ಒಂದು ಹೆಜ್ಜೆ ಎಂದಿರುವ ಮಾನುಷಿ ನಮ್ಮ ಈ ಬ್ರ್ಯಾಂಡ್ ಪರಿಸರವನ್ನು ಬೆಂಬಲಿಸುವ ಮತ್ತು ಉಳಿಸಿಕೊಳ್ಳುವ ಗುರಿಯನ್ನು ಹೊಂದಿದೆ ಎಂದು ಕೂಡ ಮಾನುಷಿ ಚಿಲ್ಲರ್ ಹೇಳಿದ್ದಾರೆ.


Click it and Unblock the Notifications











