For Quick Alerts
  ALLOW NOTIFICATIONS  
  For Daily Alerts

  ಅಕ್ಷಯ್ ಕುಮಾರ್ ಖಾತೆಗೆ ಮತ್ತೊಂದು ದಾಖಲೆ

  |

  ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯಲ್ಲಿ ಮೂಡಿಬಂದಿದ್ದ ಮಿಷನ್ ಮಂಗಲ್ ಸಿನಿಮಾ 200 ಕೋಟಿಯ ಕ್ಲಬ್ ಸೇರಿದೆ. ಬಿಡುಗಡೆಯಾದ ನಾಲ್ಕು ವಾರಗಳಲ್ಲಿ ಈ ದಾಖಲೆ ಮಾಡಿದ್ದು, ಸ್ವಾತಂತ್ರ್ಯ ದಿನಾಚರಣೆಯಂದು ತೆರೆಕಂಡ ಚಿತ್ರಗಳ ಪೈಕಿ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಇದು ಎನಿಸಿಕೊಂಡಿದೆ.

  ಅಕ್ಷಯ್ ಕುಮಾರ್, ವಿದ್ಯಾ ಬಾಲನ್, ತಾಪ್ಸಿ ಪೆನ್ನು, ಸೋನಾಕ್ಷಿ ಸಿನ್ಹಾ, ಕೃತಿ ಕುಲ್ಹಾರಿ, ನಿತ್ಯಾ ಮೆನನ್, ಶರ್ಮಾನ್ ಜೋಶಿ ನಟಿಸಿದ್ದ ಈ ಚಿತ್ರ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿತ್ತು.

  ಮಿಷನ್ ಮಂಗಲ್ 200 ಕೋಟಿ ಗಳಿಸಿರುವ ಬಗ್ಗೆ ಚಿತ್ರ ವಿಶ್ಲೇಶಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದು ''ಅಕ್ಷಯ್ ಕುಮಾರ್ ಅವರ ಮೊದಲ ಡಬಲ್ ಸೆಂಚುರಿ ಬಾರಿಸಿದ್ದಾರೆ. ಒಟ್ಟು 200.16 ಕೋಟಿ ಗಳಿಕೆ ಕಂಡಿದೆ'' ಎಂದು ಮಾಹಿತಿ ನೀಡಿದ್ದಾರೆ.

  2020ಕ್ಕೆ ಮೂರು ದೊಡ್ಡ ಚಿತ್ರಗಳನ್ನ ಘೋಷಿಸಿದ ಅಕ್ಷಯ್ ಕುಮಾರ್

  ಹೊರದೇಶದಲ್ಲೂ ಮಿಷನ್ ಮಂಗಲ್ ಅತ್ಯುತ್ತಮ ಗಳಿಕೆ ಕಂಡಿದ್ದು, ವಿದೇಶಗಳಲ್ಲಿ 7.2 ಮಿಲಿಯನ್ ಡಾಲರ್ ಬಾಚಿಕೊಂಡಿದೆಯಂತೆ. ಇದು ಅಕ್ಷಯ್ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರವಾಗಿದೆಯಂತೆ.

  ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಪಟ್ಟಿಯಲ್ಲಿ ಜಾಕಿಚಾನ್ ಹಿಂದಿಕ್ಕಿದ ಅಕ್ಷಯ್

  ಮಿಷನ್ ಮಂಗಲ್ ಸಿನಿಮಾ 200 ಕೋಟಿ ಗಳಿಸಲು 29 ದಿನ ತೆಗೆದುಕೊಂಡಿದೆ. ಈ ವರ್ಷ ತೆರೆಕಂಡ ಕಬೀರ್ ಸಿಂಗ್ ಸಿನಿಮಾ 13 ದಿನ, ಭಾರತ್ 14 ದಿನ, ಉರಿ 28 ದಿನಗಳಲ್ಲಿ 200 ಕೋಟಿ ಗಳಿಸಿತ್ತು.

  English summary
  Akshay kumar starrer Mission Mangal movie crossed 200 crores in 29 days. its is the first movie to reach 200 crore of akshay kumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X