Mission Mangal box office : ಅಕ್ಷಯ್ ಕುಮಾರ್ ಕೆರಿಯರ್ ನ ಬಿಗೆಸ್ಟ್ ಓಪನಿಂಗ್

ನಿನ್ನೆ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನದ ವಿಶೇಷವಾಗಿ ಬಾಲಿವುಡ್ ನಲ್ಲಿ ಬಿಡುಗಡೆಯಾದ ಸಿನಿಮಾ 'ಮಿಷನ್ ಮಂಗಲ್'. ಭಾರತದ ಚಂದ್ರಯಾನದ ಕಥೆ ಹೊತ್ತ ಈ ಸಿನಿಮಾಗೆ ಮೊದಲ ದಿನ ದೊಡ್ಡ ಮಟ್ಟದ ಪ್ರತಿಕ್ರಿಯೆ ಸಿಕ್ಕಿದೆ.

'ಮಿಷನ್ ಮಂಗಲ್' ಮೊದಲ ದಿನ 27 ರಿಂದ 29 ಕೋಟಿ ಗಳಿಕೆ ಮಾಡಿದೆ ಎಂದು ಅಂದಾಜು ಮಾಡಲಾಗಿದೆ. ವಿಶೇಷ ಅಂದರೆ, ಈ ಹಿಂದೆ ಬಂದ ಅಕ್ಷಯ್ ಕುಮಾರ್ ನಟನೆಯ ಎಲ್ಲ ದಾಖಲೆಯನ್ನು ಈ ಸಿನಿಮಾ ಉಡೀಸ್ ಮಾಡಿದೆ.

ಅಕ್ಷಯ್ ಕುಮಾರ್ ನಟನೆಯ ಇತ್ತೀಚಿಗಿನ ಸಿನಿಮಾಗಳಾದ 'ಗೋಲ್ಡ್' 25 ಕೋಟಿ, 'ಕೇಸರಿ' 21 ಕೋಟಿ, 'ಟಾಯ್ಲೆಟ್ ಏಕ್ ಪ್ರೇಮ್ ಕಥಾ' 13 ಕೋಟಿ ಗಳಿಕೆ ಮಾಡಿತ್ತು. ಈ ಎಲ್ಲ ಸಿನಿಮಾಗಳನ್ನು 'ಮಿಷನ್ ಮಂಗಲ್' ಮೀರಿಸಿದೆ.

mission mangal movie first day box office collection

ಸ್ವಾತಂತ್ರ್ಯ ದಿನಾಚರಣೆ ಹಾಗೂ ರಕ್ಷಾ ಬಂಧನದ ರಜೆ ಸಿನಿಮಾಗೆ ಸಹಾಯ ಆಗಿದೆ. ಮೊದಲ ದಿನ ಒಳ್ಳೆಯ ಪ್ರತಿಕ್ರಿಯೆ ಸಿಕ್ಕ ಕಾರಣ ಶುಕ್ರವಾರ, ಶನಿವಾರ ಮತ್ತು ಭಾನುವಾರ ಸಿನಿಮಾದ ಕಲೆಕ್ಷನ್ ಮತ್ತಷ್ಟು ಜಾಸ್ತಿಯಾಗಬಹುದು.

3000ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ 'ಮಿಷನ್ ಮಂಗಲ್' ವಾರಾಂತ್ಯದ ಗಳಿಕೆ ದೊಡ್ಡ ಮಟ್ಟದಲ್ಲಿ ಆಗುವ ಸಾಧ್ಯತೆ ಇದೆ.

'ಮಿಷನ್ ಮಂಗಲ್' ಸಿನಿಮಾದಲ್ಲಿ ಅಕ್ಷಯ್ ಕುಮಾರ್, ವಿದ್ಯಾ ಬಾಲನ್, ಕನ್ನಡದ ದತ್ತಣ್ಣ, ಸೋನಾಕ್ಷಿ ಸಿನ್ಹಾ, ನಿತ್ಯಾ ಮೆನನ್, ತಾಪ್ಸಿ ಪನ್ನು ಮತ್ತು ಇತರರು ನಟಿಸಿದ್ದಾರೆ.

More from Filmibeat

English summary
Actor Akshay Kumar's 'Mission Mangal' movie collects 27 to 29 crore in first day.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X