ಜಪಾನ್‌ನಲ್ಲಿ 'ಮಿಷನ್ ಮಂಗಲ್' ರಿಲೀಸ್: ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ
ಅಕ್ಷಯ್ ಕುಮಾರ್, ವಿದ್ಯಾ ಬಾಲನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ 'ಮಿಷನ್ ಮಂಗಲ್' ಸಿನಿಮಾ ಜಪಾನ್‌ನಲ್ಲಿ ತೆರೆಕಂಡಿದೆ. ಕೊರೊನಾದಿಂದ ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡಿರುವ ಜಪಾನ್ ಚಿತ್ರಮಂದಿರಗಳಿಗೆ ಅವಕಾಶ ಮಾಡಿಕೊಂಡಿದೆ.
ಈ ಹಿನ್ನೆಲೆಯಲ್ಲಿ ಬಾಲಿವುಡ್‌ನ ಸೂಪರ್ ಹಿಟ್ ಚಿತ್ರದ ಜಪಾನ್ ವರ್ಷನ್ ಸಿನಿಮಾ ಜನವರಿ 8 ರಂದು ಬಿಡುಗಡೆಯಾಗಿದೆ.
ಜಪಾನ್‌ನಲ್ಲಿ ಮಿಷನ್ ಮಂಗಲ್ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಗಳಿಕೆಯಲ್ಲೂ ಭರ್ಜರಿ ಬಿಸಿನೆಸ್ ಮಾಡಿದೆ ಎಂದು ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

ತರಣ್ ಆದರ್ಶ್ ಅವರ ಟ್ವೀಟ್ ಪ್ರಕಾರ, ಮಿಷನ್ ಮಂಗಲ್ ಸಿನಿಮಾ ಜಪಾನ್‌ನ ಸುಮಾರು 40 ಸ್ಕ್ರೀನ್‌ನಗಳಲ್ಲಿ ತೆರೆಕಂಡಿದ್ದು, 29.24 ಲಕ್ಷ ಗಳಿಕೆ ಕಂಡಿದೆಯಂತೆ.
2019ರ ಆಗಸ್ಟ್ ತಿಂಗಳಲ್ಲಿ ವರ್ಲ್ಡ್ ವೈಡ್ ರಿಲೀಸ್ ಆಗಿದ್ದ ಮಿಷನ್ ಮಂಗಲ್ ಸಿನಿಮಾ 32 ಕೋಟಿ ವೆಚ್ಚದಲ್ಲಿ ಸಿದ್ಧವಾಗಿತ್ತು. ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿದ್ದ ಈ ಚಿತ್ರ 290 ಕೋಟಿಗೂ ಹೆಚ್ಚು ಹಣ ಗಳಿಸಿತ್ತು ಎಂದು ವರದಿಗಳು ಹೇಳಿವೆ.
ಜಗನ್ ಶಕ್ತಿ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್, ವಿದ್ಯಾ ಬಾಲನ್, ಸೋನಾಕ್ಷಿ ಸಿನ್ಹಾ, ನಿತ್ಯಾ ಮೆನನ್, ತಾಪ್ಸಿ ಪನ್ನು, ಕೃತಿ ಕುಲಕರ್ಣಿ, ಶರ್ಮನ್ ಜೋಶಿ, ಕನ್ನಡದ ಹಿರಿಯ ನಟ ದತ್ತಣ್ಣ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದರು.


Click it and Unblock the Notifications











