For Quick Alerts
  ALLOW NOTIFICATIONS  
  For Daily Alerts

  ತಂದೆಯನ್ನು ಕಳೆದುಕೊಂಡ ನಟ ಮಿಥುನ್ ಚಕ್ರವರ್ತಿ: ಅಪ್ಪನ ಅಂತಿಮ ದರ್ಶನ ಪಡೆಯಲು ಪರದಾಟ

  |

  ಬಾಲಿವುಡ್ ನ ಖ್ಯಾತ ನಟ ಮಿಥುನ್ ಚಕ್ರವರ್ತಿ ತಂದೆಯನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ. ತೀವ್ರ ಆನಾರೋಗ್ಯದಿಂದ ಬಳಲುತ್ತಿದ್ದ ಮಿಥುನ್ ಚಕ್ರವರ್ತಿ ತಂದೆ ಬಸಂತಕುಮಾರ್ ಚಕ್ರವರ್ತಿ ಮುಂಬೈ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

  95 ವರ್ಷದ ಬಸಂತಕುಮಾರ್ 21ರಂದು ಕೊನೆಯುಸಿರೆಳೆದಿದ್ದಾರೆ. ತಂದೆಯನ್ನು ಕಳೆದುಕೊಂಡಿರುವ ನಟ ಮಿಥುನ್ ಬೆಂಗಳೂರಿನಲ್ಲಿ ಸಿಲುಕಿಕೊಂಡಿದ್ದಾರೆ. ಅಪ್ಪನ ಅಂತಿಮ ದರ್ಶನ ಪಡೆಯಲು ಮಿಥುನ್ ಚಕ್ರವರ್ತಿ ಪರದಾಡುತ್ತಿದ್ದಾರೆ. ಅಂತಿಮ ವಿಧಿವಿಧಾನ ಕ್ರೀಯೆ ಮಾಡಲು ಮಿಥುನ್ ಮುಂಬೈಗೆ ತೆರಳಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

  ಮಿಥುನ್ ಚಕ್ರವರ್ತಿ ಚಿತ್ರೀಕರಣಕ್ಕೆಂದು ಬೆಂಗಳೂರಿಗೆ ಬಂದಿದ್ದರು. 21ದಿನಗಳ ಚಿತ್ರೀಕರಣದ ಪ್ಲಾನ್ ಮಾಡಿಕೊಂಡು ಬೆಂಗಳೂರಿಗೆ ಬಂದಿದ್ದ ಮಿಥುನ್ ಚಕ್ರವರ್ತಿ ಅಂಡ್ ಟೀಂ ಕೊರೊನಾ ಲಾಕ್ ಡೌನ್ ಪರಿಣಾಮ ಮುಂಬೈಗೆ ವಾಪಸ್ ಆಗಲು ಸಾಧ್ಯವಾಗದೆ ಬೆಂಗಳೂರಿನಲ್ಲಿಯೇ ಸಿಲುಕ್ಕಿದ್ದಾರೆ.

  ಮಿಥುನ್ ಚಕ್ರವರ್ತಿ ತಂದೆ ನಿಧನಕ್ಕೆ ಸಾಕಷ್ಟು ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಬಂಗಳಾದ ಮೂಲದವರಾದ ಬಸಂತಕುಮಾರ್ ಮುಂಬೈನಲ್ಲಿ ನೆಲೆಸಿದ್ದರು.

  English summary
  Actor Mithun Chakraborty Father Basantakumar Chakraborty dies at 95.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X