ಮಿಥುನ್ ಚಕ್ರವರ್ತಿಗೆ ಎದೆ ನೋವಲ್ಲ, ಆಗಿದ್ದೇ ಬೇರೆ ; ಆಸ್ಪತ್ರೆ ವೈದ್ಯರು ಹೇಳಿದ್ದೇನು..?

ಎದೆ ನೋವಿನ ಹಿನ್ನೆಲೆಯಲ್ಲಿ ನಿನ್ನ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್ ನ ಹಿರಿಯ ನಟ ಮಿಥುನ್ ಚಕ್ರವರ್ತಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಮಿಥುನ್ ಚಕ್ರವರ್ತಿ ಅವರ ಆರೋಗ್ಯದ ಬಗ್ಗೆ ಆಸ್ಪತ್ರೆಯು ಮಾಹಿತಿ ಹಂಚಿಕೊಂಡಿದೆ. ಆಸ್ಪತ್ರೆಯ ಮಾಹಿತಿ ಪ್ರಕಾರ, ಮಿಥುನ್ ಚಕ್ರವರ್ತಿ ಅವರಿಗೆ ಮೆದುಳಿನ ಇಸ್ಕೆಮಿಕ್‌ ಸೆರೆಬ್ರೋವಾಸ್ಕುಲರ್‌ ಸ್ಟ್ರೋಕ್ ಆಗಿರುವುದು ಪತ್ತೆಯಾಗಿದೆ.

ಮಿಥುನ್ ಚಕ್ರವರ್ತಿ ಅವರಿಗೆ ಬ್ರೈನ್ ಸ್ಟ್ರೋಕ್ ಆಗಿತ್ತು

ಮಿಥುನ್ ಚಕ್ರವರ್ತಿ ಅವರನ್ನ ನಿನ್ನೆ ಬೆಳ್ಳಿಗ್ಗೆ 09-40ಕ್ಕೆ ತುರ್ತು ವಿಭಾಗಕ್ಕೆ ಕರೆ ತರತಂದಾಗ, ಬಲಭಾಗದ ಅಂಗಗಳಲ್ಲಿ ದೌರ್ಬಲ್ಯದ ಸಮಸ್ಯೆ ಇರುವುದಾಗಿ ತಿಳಿಸಿದರು ಎಂದಿರುವ ಆಸ್ಪತ್ರೆಯ ವೈದ್ಯರು, ಆ ನಂತರ ಅವರಿಗೆ MRI ಅನ್ನು ಸಹ ಮಾಡಲಾಯಿತು, ಅದರಲ್ಲಿ ಮಿಥುನ್ ಚಕ್ರವರ್ತಿ ಅವರಿಗೆ ಮೆದುಳಿನ ಸ್ಟ್ರೋಕ್ ಆಗಿರುವುದು ಪತ್ತೆಯಾಗಿದೆ ಅಂದಿದ್ದಾರೆ.

 Mithun Chakraborty Health Update

ಈಗ ಮಿಥುನ್ ಚಕ್ರವರ್ತಿ ಆರೋಗ್ಯವಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಪ್ರಸ್ತುತ, ನಟನ ಇನ್ನೂ ಅನೇಕ ಪರೀಕ್ಷೆಗಳನ್ನು ಸಹ ಮಾಡಲಾಗುತ್ತಿದೆ. ಇದಲ್ಲದೆ, ಹೃದಯರಕ್ತನಾಳದ ಮತ್ತು ಗ್ಯಾಸ್ಟ್ರೋ ವೈದ್ಯರ ಮೇಲ್ವಿಚಾರಣೆಯಲ್ಲಿ ಮಿಥುನ್ ಚಕ್ರವರ್ತಿ ಅವರ ತಪಾಸಣೆ ಮಾಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ

ಇನ್ನೂ ಸದ್ಯಕ್ಕೆ ಮಿಥುನ್ ಚಕ್ರವರ್ತಿ ಸಂಪೂರ್ಣವಾಗಿ ಪ್ರಜ್ಞಾ ಸ್ಥಿತಿಯಲ್ಲಿದ್ದಾರೆ ಎಂದಿರುವ ವೈದ್ಯರು, ಚೆನ್ನಾಗಿ ಮಾತನಾಡುತ್ತಿದ್ದಾರೆ ಮತ್ತು ಮೃದುವಾದ ಆಹಾರವನ್ನು ಸೇವಿಸುತ್ತಿದ್ದಾರೆ ಎಂಬ ಮಾಹಿತಿಯನ್ನೂ ನೀಡಿದ್ದಾರೆ. ಮಿಥುನ್ ಚಕ್ರವರ್ತಿ ಅವರನ್ನ ತಜ್ಞ ವೈದ್ಯರ ತಂಡ ನಿಗಾ ವಹಿಸುತ್ತಿದೆ'' ಎಂದು ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆ ವೈದ್ಯರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

 Mithun Chakraborty Health Update

ಆಸ್ಪತ್ರೆಗೆ ದೇವಶ್ರೀ ರಾಯ್ ಭೇಟಿ

ನಟಿ ದೇವಶ್ರೀ ರಾಯ್​ ಅವರು ಆಸ್ಪತ್ರೆಗೆ ಭೇಟಿ ನೀಡಿ, ಮಿಥುನ್​ ಚಕ್ರವರ್ತಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. 'ಈಗ ಮಿಥುನ್​ ಚಕ್ರವರ್ತಿ ಅವರ ಆರೋಗ್ಯ ಸುಧಾರಿಸುತ್ತಿದೆ. ಅವರ ಶುಗರ್​ ಲೆವೆಲ್​ ಇಳಿಕೆ ಆಗಿತ್ತು. ಸದ್ಯಕ್ಕೆ ಅವರನ್ನು ಐಸಿಯುನಿಂದ ಬೇರೆ ವಾರ್ಡ್​ಗೆ ಶಿಫ್ಟ್​ ಮಾಡಲಾಗಿದ್ದು,. ಸುಧಾರಿಸಿಕೊಳ್ಳುತ್ತಿದ್ದಾರೆ' ಎಂದು ದೇವಶ್ರೀ ರಾವ್​ ಹೇಳಿದ್ದಾರೆ. ನಿರ್ದೇಶಕ ಪತಿಕೃತ್​ ಬಸು ಕೂಡ ಮಿಥುನ್​ ಚಕ್ರವರ್ತಿ ಅವರನ್ನು ಭೇಟಿ ಆಗಿ, ಅವರ ಜೊತೆ ಮಾತನಾಡಿದ್ದಾರೆ. ಆದಷ್ಟು ಬೇಗ ಚೇತರಿಕೆ ಕಂಡು ಶೂಟಿಂಗ್​ನಲ್ಲಿ ತಾವು ಭಾಗಿಯಾಗುವುದಾಗಿ ಮಿಥುನ್​ ಚಕ್ರವರ್ತಿ ಭರವಸೆ ನೀಡಿದ್ದಾರೆ ಎಂದು ಬಸು ಹೇಳಿದ್ದಾರೆ.

ಚಿತ್ರರಂಗಕ್ಕೆ ಅಪಾರ ಕೊಡುಗೆ

73ರ ಪ್ರಾಯದ ಮಿಥುನ್ ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. 1976ರಲ್ಲೇ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಮಿಥುನ್ ಮೊದಲ ಚಿತ್ರದಲ್ಲೇ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದರು. ಡಿಸ್ಕೋ ಡ್ಯಾನ್ಸರ್ ಚಿತ್ರದ ಮೂಲಕ ಜಗದ್ವಿಖ್ಯಾತಿಯನ್ನೂ ಗಳಿಸಿದರು. ಚಿತ್ರರಂಗದಲ್ಲಿ ಅಪಾರ ಸಾಧನೆಗೈದ ಅವರಿಗೆ ಇತ್ತೀಚೆಗೆ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಯನ್ನ ನೀಡಿ ಗೌರವಿಸಲಾಗಿದೆ.

More from Filmibeat

English summary
Veteran Bollywood actor Mithun Chakraborty has been admitted to a hospital in Kolkata.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X