»   » ರಸ್ತೆಯಲ್ಲಿ ಸಿಕ್ಕಿದ ಮಗುವನ್ನ ಸಾಕಿ ಹೀರೋಯಿನ್ ಮಾಡಿದ 'ನಟ'

ರಸ್ತೆಯಲ್ಲಿ ಸಿಕ್ಕಿದ ಮಗುವನ್ನ ಸಾಕಿ ಹೀರೋಯಿನ್ ಮಾಡಿದ 'ನಟ'

Posted By:
Subscribe to Filmibeat Kannada

ಬಾಲಿವುಡ್ ಸ್ಟಾರ್ ನಟ ಮಿಥುನ್ ಚಕ್ರವರ್ತಿ ಅವರ ಮುದ್ದು ಮಗಳು ದಿಶಾನಿ ಈಗ ಬಾಲಿವುಡ್ ಸಿನಿಲೋಕಕ್ಕೆ ಕಾಲಿಡಲು ಸಿದ್ದವಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಖ್ಯಾತಿ ಹೊಂದಿರುವ ದಿಶಾನಿ ಬಿಗ್ ಸ್ಕ್ರೀನ್ ಮೇಲೆ ಹೆಜ್ಜೆ ಇಡಲು ಕಾತುರರಾಗಿದ್ದಾರೆ.

ಖ್ಯಾತ ನಟ ಮಿಥುನ್ ಚಕ್ರವರ್ತಿ ಅವರಿಗೆ ಒಟ್ಟು ನಾಲ್ಕು ಜನ ಮಕ್ಕಳು. ಮಹಾಕ್ಷೆಯ್, ಉಶ್ಮೆಯ್, ನಮಾಶಿ ಹಾಗೂ ದಿಶಾನಿ. ಆದ್ರೆ, ಇಲ್ಲಿ ಗಮನಿಸಬೇಕಾದ ವಿಚಾರವೇನಪ್ಪಾ ಅಂದ್ರೆ, ಮಿಥುನ್ ಚಕ್ರವರ್ತಿಯ ಪ್ರೀತಿಯ ಮಗಳು ಎಂದು ಗುರುತಿಸಿಕೊಂಡಿರುವ ದಿಶಾನಿ, ಅವರ ನಿಜವಾದ ಪುತ್ರಿಯಲ್ಲ.

ಹಾಗಿದ್ರೆ, ದಿಶಾನಿ ಯಾರು? ಮಿಥುನ್ ಚಕ್ರವರ್ತಿಗೂ ದಿಶಾನಿಗೂ ಏನ್ ಸಂಬಂಧ ಅಂತ ಮುಂದೆ ಓದಿ.....

ದತ್ತು ಪುತ್ರಿ ದಿಶಾನಿ

ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಅವರು ದಿಶಾನಿ ಅವರನ್ನ ದತ್ತು ಪಡೆದುಕೊಂಡಿದ್ದಾರೆ. ಮೂರು ಮಕ್ಕಳಿದ್ದು ದಿಶಾನಿ ಅವರನ್ನ ದತ್ತು ಪಡೆದಿದ್ದೇಕೆ? ಎಂಬ ಕುತೂಹಲ ಕಾಡುವುದು ಸಹಜ. ಆದ್ರೆ, ಅದಕ್ಕೆ ಕಾರಣ ಬೇರೆ ಇದೆ.

ರಸ್ತೆಯಲ್ಲಿ ಸಿಕ್ಕಿದ ಮಗು

ಬೆಂಗಾಳಿಯಲ್ಲಿ ಕುಟುಂಬದ ಮಗುವೊಂದು ರಸ್ತೆಯಲ್ಲಿದ್ದ ಕಸದ ಬುಟ್ಟಿಯಲ್ಲಿ ಸಿಕ್ಕಿತ್ತು. ಆ ಮಗುವಿನ ತಂದೆ-ತಾಯಿಗಾಗಿ ಹುಡುಕಾಟ ನಡೆಸಿದರು ಯಾರು ಎಂದು ಪತ್ತೆಯಾಗಿಲ್ಲ. ಮರುದಿನ ಪತ್ರಿಕೆಗಳಲ್ಲಿ ಈ ಮಗು ಹೆಡ್ ಲೈನ್ ಆಗಿತ್ತು.

ದತ್ತು ಪಡೆದ ಮಿಥುನ್ ದಂಪತಿ

ಈ ಸುದ್ದಿಯನ್ನ ಓದಿದ ಮಿಥುನ್ ಚಕ್ರವರ್ತಿ ದಿಶಾನಿಯನ್ನ ದತ್ತು ಪಡೆಯಲು ನಿರ್ಧರಿಸಿದರು. ಅವರ ಪತ್ನಿ ಯೋಗಿತ ಅವರು ಕೂಡ ಇದಕ್ಕೆ ಸಮ್ಮಿತಿಸಿದರು. ನಂತರ ದಿಶಾನಿಯನ್ನ ಹೆತ್ತ ಮಗಳಂತೆ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿ ಬೆಳಸಿದರು.

ಅತಿ ಶೀಘ್ರದಲ್ಲಿ ಬಣ್ಣದ ಲೋಕಕ್ಕೆ ಹೆಜ್ಜೆ

ಸದ್ಯ, ಸಿನಿಮಾದಲ್ಲಿ ನಟಿಸುವ ಆಸೆ ಹೊಂದಿರುವ ದಿಶಾನಿ, ನಟನ ತರಬೇತಿ ಪಡೆದುಕೊಂಡಿದ್ದಾರೆ. ಹೀಗಾಗಿ, ತಮ್ಮ ಮೊದಲ ಸಿನಿಮಾ ತಯಾರಿ ಮಾಡಿಕೊಂಡಿರುವ ಮಿಥುನ್ ಮಗಳು ಆದಷ್ಟೂ ಬೇಗ ಇಂಡಸ್ಟ್ರಿಗೆ ಪರಿಚಯವಾಗಲಿದ್ದಾಳೆ

ಸಲ್ಮಾನ್ ಖಾನ್ ಫ್ಯಾನ್

ದಿಶಾನಿಗೆ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಂದ್ರೆ ತುಂಬ ಇಷ್ಟ. ಸಲ್ಲು ಅವರ ಅಪ್ಪಟ ಅಭಿಮಾನಿ ಈ ದಿಶಾನಿ.

English summary
Mithun Chakraborty’s Adopted Daughter Dishani Has Grown Up To Set Bollywood On Fire

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada