ಮಿಥುನ್ ಚಕ್ರವರ್ತಿ ಮೊದಲನೇ ಪತ್ನಿ ನಿಧನ, ನಾಲ್ಕೇ ತಿಂಗಳಿಗೆ ಮುರಿದು ಬಿದ್ದಿದ್ದೇಕೆ ದಾಂಪತ್ಯ..?

ಜೀವಗಳೆರಡು ಭಾವ ಒಂದೇ ಎನ್ನುವ ಪ್ರೀತಿಗೆ ಅನೇಕರು ಹೊತೊರೆಯುತ್ತಾರೆ. ಆದರೆ ಎಲ್ಲರಿಗೂ ಪ್ರೀತಿಯಲ್ಲಿರುವ ಸುಖ ಗೊತ್ತಾಗಲ್ಲ. ಬಹುತೇಕರಿಗೆ ನಿಜವಾದ ಪ್ರೀತಿ ಸಿಗುವುದಿಲ್ಲ. ಹದಿಹರೆಯದ ವಯಸ್ಸಿನಲ್ಲಿ ಬಾಹ್ಯ ಆಕರ್ಷಣೆಯನ್ನೇ ಪ್ರೀತಿ ಎಂದುಕೊಂಡು ಅನೇಕರು ನರಳುತ್ತಾರೆ. ಉಸಿರುಗಟ್ಟಿದಂತೆ ಭಾಸವಾಗಿ ಸಂಬಂಧ ಕಡಿದುಕೊಂಡು ಬಿಡುತ್ತಾರೆ. ಇದಕ್ಕೆ ಮಿಥುನ್ ಚಕ್ರವರ್ತಿ ಮತ್ತು ಹೆಲೆನಾ ಲ್ಯೂಕ್ ಸದ್ಯದ ಉದಾಹರಣೆ.

ಹೌದು, 80-90ರ ದಶಕದ ಸೂಪರ್ ಸ್ಟಾರ್. ಆ ಕಾಲದ ಅತ್ಯಂದ ದುಬಾರಿ ನಾಯಕ. ಕಂತೆ-ಕಂತೆಯ ಹಣ ಕೈಯಲ್ಲಿ ಹಿಡಿದು ಇವರ ಮನೆಯ ಮುಂದೆ ನಿಲ್ಲುತ್ತಿದ್ದ ನಿರ್ಮಾಪಕರು ಅದೆಷ್ಟೋ ಜನ. ಅನೇಕರ ಬಣ್ಣದ ಕನಸುಗಳಿಗೆ ಅಂದಕಾಲತ್ತಿಲ್ ತನ್ನ ಅಭಿನಯದಿಂದ ಚಿನ್ನದ ಸ್ಪರ್ಶವನ್ನ ನೀಡಿದವರು ಇವರು. ಡಿಸ್ಕೋ ಡ್ಯಾನ್ಸರ್.. ಪ್ಯಾರ್ ಜುಕ್ತಾ ನಹೀ.. ಜಲ್ಲಾದ್.. ಕಸಮ್ ಪೈದಾ ಕರನೇ ವಾಲೇ ಕಿ.. ಪ್ಯಾರಿ ಬೆಹನಾ.. ಗುಲಾಮಿ..ಗಂಗಾ ಜಮುನಾ ಸರಸ್ವತಿ.. ಡ್ಯಾನ್ಸ್ ಡ್ಯಾನ್ಸ್.. ಅಗ್ನಿಪಥ್.. ಗುಲಾಮಿ. ಹೀಗೆ ಒಂದಾದ ಮೇಲೊಂದು ಹಿಟ್ ಚಿತ್ರಗಳನ್ನು ನೀಡಿದ ಮಿಥುನ್ ಚಕ್ರವರ್ತಿ ಇತ್ತೀಚೆಗಷ್ಟೇ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಕೂಡ ಮುಡಿಗೇರಿಸಿಕೊಂಡರು. ಇಂಥಾ ಮಿಥುನ್ ಚಕ್ರವರ್ತಿಯ ಮೊದಲ ಪತ್ನಿ ಹೆಲೆನಾ ಲ್ಯೂಕ್ ನಿನ್ನೆ ತಮ್ಮ 68ನೇ ವಯಸ್ಸಿನಲ್ಲಿ ಅಮೆರಿಕಾದಲ್ಲಿ ಕೊನೆಯುಸಿರೆಳೆದಿದ್ದಾರೆ.

Mithun Chakraborty s first wife Helena Luke who divorced him after four months has died

ಹೌದು, ಅಸಲಿಗೆ 1970ರ ದಶಕದಲ್ಲಿ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಮಿಥುನ್ ಚಕ್ರವರ್ತಿ ಅವರನ್ನು ಮೊದಲು ಭೇಟಿಯಾದ ಹೆಲೆನಾ ಲ್ಯೂಕ್ ಆ ನಂತರ ಮಿಥುನ್ ಜೊತೆ ಸ್ನೇಹ ಬೆಳೆಸಿದರು. ಸ್ನೇಹ ಆ ನಂತರ ಪ್ರೇಮಕ್ಕೆ ತಿರುಗಿತು. ಇನ್ನೂ ಈ ಸಮಯದಲ್ಲಿ ಆಗಷ್ಟೇ ಸಾರಿಕಾ ಅವರಿಂದ ದೂರವಾಗಿದ್ದ ಮಿಥುನ್ ಚಕ್ರವರ್ತಿ ಕೂಡ ಹೆಲೆನಾ ಅವರನ್ನು ಪ್ರೀತಿ ಮಾಡಿದರು. ಮದುವೆ ಕೂಡ ಆದರು. ಆದರೆ ದುರಾದೃಷ್ಟವಶಾತ್ ಮಿಥುನ್ ಚಕ್ರವರ್ತಿ ಮತ್ತು ಹೆಲೆನಾ ಲ್ಯೂಕ್ ದಾಂಪತ್ಯ ಕೇವಲ ನಾಲ್ಕೇ ನಾಲ್ಕು ತಿಂಗಳಿಗೆ ಮುರಿದು ಬಿತ್ತು.

ಮಿಥುನ್ ಚಕ್ರವರ್ತಿ ಅವರಿಂದ ದೂರವಾದ ನಂತರ ಸ್ಟಾರ್‌ ಡಸ್ಟ್‌ಗೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ಹೆಲೆನಾ, ನನ್ನ ಮದ್ವೆ ನನ್ನ ಬದುಕಿನ ಬಹುದೊಡ್ಡ ದುರಂತ ಎಂದು ಹೇಳಿದ್ದರು. ನನಗೇನಾಗಿತ್ತು ಅನ್ನುವುದು ನನಗೆ ಗೊತ್ತಿಲ್ಲ ಮಿಥುನ್ ಹೆಣೆದ ಬಲೆಯಲ್ಲಿ ನಾನು ಸಿಕ್ಕಿ ಹಾಕಿಕೊಂಡೆ ಎಂದಿದ್ದ ಹೆಲೆನಾ ನನಗಾಗಿ ಹೇಳಿ ಮಾಡಿಸಿದ ವ್ಯಕ್ತಿ ಎಂದು ಆತ ನನ್ನ ಬ್ರೈನ್ ವಾಶ್ ಮಾಡಿದ ಎಂದು ಹೇಳಿದ್ದರು.

Mithun Chakraborty s first wife Helena Luke who divorced him after four months has died

ಮುಂದುವರೆದು ಮಾತನಾಡಿದ್ದ ಹೆಲೆನಾ ಆ ವ್ಯಕ್ತಿಯಿಂದ ನನಗೆ ಎಷ್ಟು ನೋವಾಗಿದೆ ಎಂದರೆ ನಾನೇ ಆತನ ಬಳಿ ತೆರಳಿ ವಿಚ್ಛೇದನ ನೀಡುವಂತೆ ಕೇಳಿದ್ದೇ ಎಂದು ಹೇಳಿದ್ದರು. ಆತನಿಂದ ನಾನು ಯಾವ ಜೀವನಾಂಶ ಕೂಡ ಕೇಳಿಲ್ಲ ಎಂದು ಹೇಳಿದ್ದ ಹೆಲೆನಾ ಆ ವ್ಯಕ್ತಿ ಇವತ್ತು ಸ್ಟಾರ್ ಆಗಿರಬಹುದು ಆತನ ಬಳಿ ಹಣ ಇರಬಹುದು, ಆದರೆ ನಾನು ಮಾತ್ರ ಯಾವುದೇ ಕಾರಣಕ್ಕೂ ಆತನ ಬಳಿ ಮರಳಿ ಹೋಗಲಾರೆ ಎಂದು ಹೇಳಿದ್ದರು. ಇದೇ ಕೊನೆ ಇನ್ನೆಂದು ಆ ವ್ಯಕ್ತಿಯ ಕುರಿತು ನಾನು ಮಾತನಾಡುವುದಿಲ್ಲ ಎಂದು ಶಪಥವನ್ನು ಮಾಡಿದ್ದರು.

ಆ ನಂತರ ಅಮಿತಾಭ್ ಬಚ್ಚನ್ ಅಭಿನಯದ ಮರ್ದ್ ಚಿತ್ರದಲ್ಲಿ ಹೆಲೆನಾ ಲ್ಯೂಕ್ ನಟಿಸಿದ್ದರು. ಭಾಯ್ ಆಖೀರ್ ಭಾಯ್ ಹೋತಾ ಹೈ, ಮೇರೆ ಸಾಥ್ ಚಲ್, ಏಕ್ ನಯಾ ರಿಶ್ತಾ, ದೋ ಗುಲಾಬ್, ಸೇರಿ 09 ಚಿತ್ರಗಳಿಗೆ ಬಣ್ಣ ಹಚ್ಚಿದ್ದ ಹೆಲನಾ ಭಾರತವನ್ನು ತೊರೆದು ಅಮೆರಿಕಾಗೆ ತೆರಳಿ ವಾಸ ಮಾಡುತ್ತಿದ್ದರು.

ಹೀಗೆ ಮಿಥುನ್ ಚಕ್ರವರ್ತಿಯಿಂದ ದೂರವಾದ ಹೆಲೆನಾ ಲ್ಯೂಕ್ ಸಾಯುವ ಕೆಲ ಘಂಟೆ ಮುನ್ನ ಒಂದು ರೀತಿಯ ವಿಚಿತ್ರ ಅನುಭವವಾಗುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ನನಗೇನಾಗುತ್ತಿದೆ ಎಂದು ಅರ್ಥವಾಗುತ್ತಿಲ್ಲ ಎಂದಿದ್ದರು.

ಇನ್ನೂ ಹೆಲೆನಾ ಲ್ಯೂಕ್ ಅವರ ದೇಖಾರೇಖಿಯನ್ನು ಯಾರು ಮಾಡುತ್ತಿದ್ದರು ಎನ್ನುವುದು ಗೊತ್ತಿಲ್ಲವಾದರೂ ಖ್ಯಾತ ನಟಿ ಮತ್ತು ನೃತ್ಯಗಾರ್ತಿ ಕಲ್ಪನಾ ಐಯ್ಯರ್, ಹೆಲೆನಾ ಲ್ಯೂಕ್ ಅವರ ಅಗಲಿಕೆ ಸುದ್ದಿಯನ್ನು ಖಚಿತ ಪಡಿಸಿದ್ದಾರೆ. ಹೆಲೆನಾ ಅವರ ನಿಧನಕ್ಕೆ ಬಾಲಿವುಡ್‌ನ ಅನೇಕರು ಸಂತಾಪ ಸೂಚಿಸಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X