ಮುಂದಿನ ತಿಂಗಳು ನಡೆಯಲಿದೆ ಮಿಥುನ್ ಚಕ್ರವರ್ತಿ ಮಗನ ವಿವಾಹ.!
ಸಿನಿ ಲೋಕದಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಬಾಲಿವುಡ್ ನಟಿ ಸೋನಂ ಕಪೂರ್, ನಟಿ ನೇಹಾ ಧೂಪಿಯಾ ಇತ್ತೀಚೆಗಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈಗ ಇದೇ ಹಾದಿಯಲ್ಲಿ ಸಾಗಲು 'ಡಿಸ್ಕೋ ಡ್ಯಾನ್ಸರ್' ಮಿಥುನ್ ಚಕ್ರವರ್ತಿ ಪುತ್ರ ಮಿಮೋಹ್ ಸಜ್ಜಾಗಿದ್ದಾರೆ.
ಮಿಮೋಹ್-ಮಾದಲ್ಸಾ ಶರ್ಮಾ ವಿವಾಹ ಮಹೋತ್ಸವ ಜುಲೈ 7 ರಂದು ನಡೆಯಲಿದೆ. ಎರಡು ವರ್ಷಗಳಿಂದ ಪ್ರೇಮಿಸುತ್ತಿರುವ ಈ ಜೋಡಿಯ ಪ್ರೀತಿಗೆ ಮುಂದಿನ ತಿಂಗಳು ಅಧಿಕೃತ ಮುದ್ರೆ ಬೀಳಲಿದೆ.
ಯಾರೀ ಮಾದಲ್ಸಾ ಶರ್ಮಾ: 'ಹಮ್ರಾಝ್', 'ಅಜ್ನಬೀ', 'ಯಸ್ ಬಾಸ್' ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ಶೀಲಾ ಶರ್ಮಾ ರವರ ಪುತ್ರಿ ಮಾದಲ್ಸಾ ಶರ್ಮಾ.

ಶೀಲಾ ಶರ್ಮಾ ಕುಟುಂಬ ಹಾಗೂ ಮಿಥುನ್ ಚಕ್ರವರ್ತಿ ಫ್ಯಾಮಿಲಿ ನಡುವೆ ಆತ್ಮೀಯತೆ ಇದೆ. ಇದೇ ಆತ್ಮೀಯತೆ ಇದೀಗ ಎರಡೂ ಕುಟುಂಬಗಳನ್ನ ಸಂಬಂಧಿಗಳಾಗುವಂತೆ ಮಾಡಿದೆ.
ಕಳೆದ ಮಾರ್ಚ್ ತಿಂಗಳಿನಲ್ಲಿಯೇ ಮಿಮೋಹ್-ಮಾದಲ್ಸಾ ಶರ್ಮಾ ನಿಶ್ಚಿತಾರ್ಥ ನಡೆದಿತ್ತು. ಮುಂದಿನ ತಿಂಗಳು ವಿವಾಹ ಮಹೋತ್ಸವ ನಡೆಯಲಿದ್ದು, ಆಪ್ತೇಷ್ಟರು ಹಾಗೂ ಸ್ನೇಹಿತರಿಗಷ್ಟೇ ಆಹ್ವಾನ ಇರಲಿದೆ. ಅಂದ್ಹಾಗೆ, ಮದುವೆ ಎಲ್ಲಿ ನಡೆಯಲಿದೆ ಎಂಬುದರ ಬಗ್ಗೆ ಕುಟುಂಬಗಳು ಮಾಹಿತಿ ಬಿಟ್ಟುಕೊಟ್ಟಿಲ್ಲ.


Click it and Unblock the Notifications











