For Quick Alerts
  ALLOW NOTIFICATIONS  
  For Daily Alerts

  ಅಶ್ಲೀಲ ವಿಡಿಯೋ ಪ್ರಕರಣ: ಇಬ್ಬರು ನಟಿಯರ ಬಂಧನ

  |

  ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಬಂಧನ ಆಗಿರುವ ಸುದ್ದಿ ಭಾರಿ ಸದ್ದು ಮಾಡುತ್ತಿರುವ ಹೊತ್ತಿನಲ್ಲಿಯೇ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಇದೇ ಮಾದರಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ನಟಿ ಹಾಗೂ ಆಕೆಯ ಪಾಲುದಾರನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

  ಅಶ್ಲೀಲ ವಿಡಿಯೋ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೊಲ್ಕತ್ತ ಪೊಲೀಸರು ನಟಿ, ಮಾಡೆಲ್ ನಂದಿತಾ ದತ್ತಾ ಅನ್ನು ಬಂಧಿಸಿದ್ದಾರೆ ಆಕೆಯ ಜೊತೆ ಪಾಲುದಾರನಾಗಿದ್ದ ಮಾಣಿಕ್ ಘೋಷ್ ಎಂಬಾತನನ್ನೂ ಕೊಲ್ಕತ್ತ ಪೊಲೀಸರು ಬಂಧಿಸಿದ್ದಾರೆ.

  ನಂದಿತಾ ಹಾಗೂ ಮಾಣಿಕ್ ಕೊಲ್ಕತ್ತದ ಹೋಟೆಲ್ ಒಂದರಲ್ಲಿ ನೀಲಿ ವಿಡಿಯೋಗಳನ್ನು ಚಿತ್ರೀಕರಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದು, ಈ ನೀಲಿ ವಿಡಿಯೋ ರಾಕೆಟ್‌ನಲ್ಲಿ ಇನ್ನಷ್ಟು ಜನರಿದ್ದು ತನಿಖೆ ನಡೆಯುತ್ತಿದ್ದು, ಇನ್ನಷ್ಟು ಜನರ ಹೆಸರುಗಳು ಹೊರಗೆ ಬೀಳಲಿವೆ ಎಂದಿದ್ದಾರೆ.

  ಫೊಟೊಗ್ರಾಫರ್ ಆಗಿರುವ ಮಾಣಿಕ್ ಹಾಗೂ ನಟಿ, ಮಾಡೆಲ್ ಆಗಿರುವ ನಂದಿತಾ ಮಾಡೆಲ್‌ಗಳನ್ನು ಫೇಸ್‌ಬುಕ್ ಮೂಲಕ ಮಾಡೆಲ್‌ಗಳನ್ನು, ನಟಿಯರಾಗುವ ಆಸೆಯಲ್ಲಿರುವ ಯುವತಿಯರನ್ನು ಫೇಸ್‌ಬುಕ್ ಮೂಲಕ ಸಂಪರ್ಕ ಮಾಡಿ ಅವರನ್ನು ಒಪ್ಪಿಸಿ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿಕೊಳ್ಳುತ್ತಿದ್ದರು.

  ಹೀಗೆ ಚಿತ್ರೀಕರಿಸಿಕೊಂಡ ವಿಡಿಯೋಗಳನ್ನು ನಿಯೋಫ್ಲಿಕ್ಸ್, 'ರೆಡ್‌ವ್ಯಾಪ್ ಟು' ವೆಬ್‌ಸೈಟ್, ಅಪ್ಲಿಕೇಶನ್‌ಗಳಲ್ಲಿ ಪ್ರದರ್ಶನ ಮಾಡಿ ದೊಡ್ಡ ಮೊತ್ತದ ಹಣ ಸಂಪಾದನೆ ಮಾಡುತ್ತಿದ್ದರು. ವಿಡಿಯೋಗಳನ್ನು ವಿದೇಶದಿಂದ ಅಪ್‌ಲೋಡ್ ಮಾಡಿಸುತ್ತಿದ್ದರು ಈ ಗ್ಯಾಂಗ್‌. ಇವರು ಯಾವುದೇ ಸಾಫ್ಟ್ ಪಾರ್ನ್ ಚಿತ್ರೀಕರಣ ಮಾಡುತ್ತಿರಲಿಲ್ಲ ಬದಲಾಗಿ ನಗ್ನ ವಿಡಿಯೋಗಳನ್ನೇ ಚಿತ್ರೀಕರಿಸುತ್ತಿತ್ತು. ಈ ಗ್ಯಾಂಗ್‌ಗೂ ರಾಜ್‌ ಕುಂದ್ರಾಗೂ ಸಂಪರ್ಕ ಇದೆಯೇ ಎಂದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

  ಕೆಲವು ದಿನಗಳ ಹಿಂದಷ್ಟೆ ಕೊಲ್ಕತ್ತದಲ್ಲಿಯೇ ಜಯಶ್ರೀ ಮಿಶ್ರಾ ಮತ್ತು ಪ್ರತಾಪ್ ಘೋಷ್ ಎಂಬುವರನ್ನು ಇದೇ ಮಾದರಿಯ ಪ್ರಕರಣದಲ್ಲಿ ಬಂಧಿಸಿದ್ದರು. ಈ ಇಬ್ಬರೂ ಸೇರಿ ಕೆಲವು ಮಾಡೆಲ್‌ಗಳ ಅರೆ ಬೆತ್ತಲೆ ಚಿತ್ರಗಳನ್ನು ಕ್ಲಿಕ್ಕಿಸಿ ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

  ಕೊಲ್ಕತ್ತದಲ್ಲಿ ಹಲವು ಮಾಡೆಲ್‌ಗಳು ಹಣಕ್ಕಾಗಿ ಹೀಗೆ ಪಾರ್ಕ್‌ನಲ್ಲಿ, ಹೊರ ಪ್ರದೇಶದಲ್ಲಿ ಅರೆ ಬೆತ್ತಲೆಯಾಗಿ ಕುಳಿತು ಚಿತ್ರಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

  ಬಂಧಿಸಲಾಗಿರುವ ಮಾಡೆಲ್ ನಂದಿತಾ ಹಾಗೂ ಫೊಟೊಗ್ರಾಫರ್ ಮಾಣಿಕ್ ಘೋಷ್ ಅನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಇಬ್ಬರನ್ನೂ ಪೊಲೀಸರ ವಶಕ್ಕೆ ನ್ಯಾಯಾಲಯವು ನೀಡಿದೆ. ತನಿಖೆ ಜಾರಿಯಲ್ಲಿದ್ದು ಪ್ರಕರಣದಲ್ಲಿರುವ ಇನ್ನೂ ಕೆಲವರ ಹೆಸರುಗಳು ಹೊರಗೆ ಬರಲಿದೆ.

  English summary
  Model, Actress Nanditha Dutta arrested in indecent videos case by Kolkata police. Photographer Manik Ghosh also arrested.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X