ಕೊಲ್ಕತ್ತ: ಎರಡು ವಾರದಲ್ಲಿ ನಾಲ್ಕು ಸಾವು, ಮತ್ತೊಬ್ಬ ಮಾಡೆಲ್ ಶವವಾಗಿ ಪತ್ತೆ

ಕೊಲ್ಕತ್ತದ ಮಾಡೆಲಿಂಗ್ ಜಗತ್ತು ಹೌಹಾರಿದೆ. ಸತತವಾಗಿ ಮಾಡೆಲ್‌ಗಳು ಸಾವನ್ನಪ್ಪುತ್ತಿದ್ದಾರೆ. ಕಳೆದ ಎರಡು ವಾರದಲ್ಲಿ ಬರೋಬ್ಬರಿ ನಾಲ್ಕು ಮಂದಿ ಮಾಡೆಲ್ ಕಮ್ ನಟಿಯರು ಶವವಾಗಿ ಪತ್ತೆಯಾಗಿದ್ದಾರೆ.

ಎರಡು ವಾರದ ಹಿಂದೆ ಬೆಂಗಾಲಿ ಟಿವಿ ಲೋಕದಲ್ಲಿ ಚಿರಪರಿಚಿತ ನಟಿಯಾಗಿದ್ದ ಪಲ್ಲವಿ ಡೇ ಸಾವನ್ನಪ್ಪಿದರು. ಕೊಲ್ಕತ್ತದ ಗರ್ಫಾದಲ್ಲಿರುವ ಅವರ ಅಪಾರ್ಟ್‌ಮೆಂಟ್‌ನಲ್ಲಿ ಪಲ್ಲವಿ ಡೇಯ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಯಿತು. ನಟಿಯ ಸಾವಿನ ಬಗ್ಗೆ ಬೆಂಗಾಳಿ ಸಿನಿಮಾ ಹಾಗೂ ಟಿವಿ ಲೋಕ ಶೋಕ ವ್ಯಕ್ತಪಡಿಸಿತ್ತು.

ಅದಾದ ಕೆಲವು ದಿನಗಳ ಬಳಿಕ ಜನಪ್ರಿಯ ಮಾಡೆಲ್ ಬಿದಿಶಾ ಡಿ ಮಜುಂಧಾರ್ ಸಾವನ್ನಪ್ಪಿದರು. ಕೊಲ್ಕತ್ತದ ಡಂಡಂ ಬಳಿಯ ನಗೇರ್ ಬಜಾರ್‌ನಲ್ಲಿದ್ದ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಅವರ ಮೃತದೇಹ ಪತ್ತೆಯಾಯಿತು. ಬಿದಿಶಾ ಡಿ ಮಜುಂಧಾರ್ ಶವದ ಬಳಿ ಆತ್ಮಹತ್ಯೆ ಪತ್ರವೊಂದು ಪತ್ತೆಯಾಗಿತ್ತಾದರೂ, ಆ ಪತ್ರ ಗೊಂದಲಮಯವಾಗಿದೆ ಎಂದು ಪೊಲೀಸರು ಹೇಳಿದ್ದರು.

Model Saraswati Das Found Dead In Kolkatta, Fourth Death In Last Two Weeks

ಎರಡು ದಿನದ ಹಿಂದೆ (ಮೇ 28) ರಂದು ಬಂಗಾಳದ ಮತ್ತೊಬ್ಬ ಪ್ರಖ್ಯಾತ ಮಾಡೆಲ್ ಮಂಜುಶಾ ನಿಯೋಗಿ ಸಾವನ್ನಪ್ಪಿದ್ದಾರೆ. ಕೋಲ್ಕತ್ತದ ಪುತೌಲಿ ಏರಿಯಾದಲ್ಲಿನ ಅವರ ನಿವಾಸದಲ್ಲಿ ಮಂಜುಶಾ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಿದಿಶಾ ಡಿ ಮಜುಂಧಾರ್ ಸಾವನ್ನಪ್ಪಿದ ಎರಡೇ ದಿನದ ಅಂತರದಲ್ಲಿ ಮಂಜುಶಾ ನಿಯೋಗಿ ಸಾವನ್ನಪ್ಪಿದ್ದಾರೆ.

ಈಗ ಮತ್ತೊಬ್ಬ ಬೆಂಗಾಳಿ ಮಾಡೆಲ್ ಸರಸ್ವತಿ ದಾಸ್ ಕೊಲ್ಕತ್ತದ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕೊಲ್ಕತ್ತದ ಬೇಡಿಯಾದಂಗ ಎಂಬಲ್ಲಿ ವಾಸವಿದ್ದ ಸರಸ್ವತಿ ದಾಸ್ ಮೇ 29 ರಂದು ತಮ್ಮದೇ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಘಟನೆ ಕುರಿತು ಸ್ಥಳೀಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಅಧಿಕಾರಿ, ''ಮೇಲ್ನೋಟಕ್ಕೆ ಇದು ಸಹ ಆತ್ಮಹತ್ಯೆಯಂತೆಯೇ ಕಾಣುತ್ತಿದೆ. ಸರಸ್ವತಿಯ ಶವವನ್ನು ಆಕೆಯ ಅಜ್ಜಿ ಮೊದಲಿಗೆ ನೋಡಿದ್ದಾರೆ. ಚಾಕುವಿನಿಂದ ಹಗ್ಗ ಕತ್ತರಿಸಿ, ಸರಸ್ವತಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಆ ವೇಳೆಗಾಗಲೆ ಜೀವ ಹೋಗಿರುವುದಾಗಿ ಆಸ್ಪತ್ರೆಯವರು ಹೇಳಿದ್ದಾರೆ. ನಾವೀಗ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ'' ಎಂದು ಮಾಹಿತಿ ನೀಡಿದ್ದಾರೆ.

Model Saraswati Das Found Dead In Kolkatta, Fourth Death In Last Two Weeks

ಕಳೆದ ಎರಡು ವಾರದಲ್ಲಿ ನಿಧನ ಹೊಂದಿದ ಮೂವರು ಮಾಡೆಲ್‌ಗಳೊಟ್ಟಿಗೆ ಸರಸ್ವತಿ ದಾಸ್‌ಗೆ ಯಾವುದೇ ರೀತಿಯ ಸಂಬಂಧ ಇದೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ. ಸರಸ್ವತಿಯ ಮೊಬೈಲ್ ವಶಪಡಿಸಿಕೊಂಡಿದ್ದೇವೆ. ತನಿಖೆಯ ಬಳಿಕ ಇನ್ನಷ್ಟು ಮಾಹಿತಿ ಹೊರಬೀಳಲಿದೆ ಎಂದಿದ್ದಾರೆ.

ಮಾಡೆಲ್ ಆಗಿದ್ದ ಸರಸ್ವತಿ ದಾಸ್, ಮೇಕಪ್ ಕಲಾವಿದೆ ಸಹ ಆಗಿದ್ದರು. ತಾಯಿ ಮತ್ತು ಚಿಕ್ಕಮ್ಮನ ಆರೈಕೆಯಲ್ಲಿ ಬೆಳೆದ ಸರಸ್ವತಿಗೆ ತಂದೆ ಇರಲಿಲ್ಲ. ಭಾನುವಾರ ರಾತ್ರಿ ತನ್ನ ತಾಯಿ ಹಾಗೂ ಚಿಕ್ಕಮ್ಮ ಕೆಲಸಕ್ಕೆಂದು ಹೋದ ಬಳಿಕ ಸರಸ್ವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.

ಕೊಲ್ಕತ್ತದಲ್ಲಿ ನಡೆಯುತ್ತಿರುವ ಮಾಡೆಲ್‌ಗಳ ಸರಣಿ ಸಾವಿನ ಬಗ್ಗೆ ಟಿವಿ, ಸಿನಿಮಾ ಹಾಗೂ ಮಾಡೆಲ್ ರಂಗದವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಪೊಲೀಸರು ಸಹ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಈ ಸರಣಿ ಸಾವಿನ ತನಿಖೆಯಲ್ಲಿ ನಿರತರಾಗಿದ್ದಾರೆ. ಈ ಸಾವುಗಳಿಗೆ ಸಂಬಂಧ ಇದೆಯೇ ಎಂಬುದನ್ನು ಪತ್ತೆ ಹಚ್ಚುವಲ್ಲಿ ನಿರತರಾಗಿದ್ದಾರೆ.

More from Filmibeat

English summary
Bengali model and make up artist Saraswati Das found dead in Kolkatta. Fourth death in last two weeks.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X