ಮೋದಿ ಚಿತ್ರದ ಹಿಂದೆಯೇ ಬರ್ತಿವೆ ಮತ್ತಷ್ಟು ರಾಜಕಾರಣಿಗಳ ಬಯೋಪಿಕ್

ಲೋಕಸಭಾ ಚುನಾವಣೆ ಕಾವು ರಂಗೇರುತ್ತಿದ್ದಂತೆ ಮತದಾರರ ಗಮನ ಸೆಳೆಯುವ ಹಲವು ರೀತಿ ಯೋಜನೆಗಳು ನಡೆಯುತ್ತಿದೆ. ಅಭ್ಯರ್ಥಿಗಳ ಮತಬೇಟೆ ಭರದಿಂದ ನಡೆಯುತ್ತಿದೆ. ಮನೆ ಮನೆ ಪ್ರಚಾರ ಮಾಡುತ್ತಿದ್ದರೂ, ಮತದಾರರನ್ನು ಸೆಳೆಯಲು ದೊಡ್ಡ ದೊಡ್ಡ ಈಗ ರಾಜಕಾರಣಿಗಳು ಸಿನಿಮಾಗಳ ಮೊರೆ ಹೋಗಿದ್ದಾರೆ.

ಸಿನಿಮಾ ಜನರ ಮನಸ್ಸನ್ನ ಬಹುಬೇಗ ತಲುಪುವಂತ ದೊಡ್ಡ ಮಾಧ್ಯಮ. ಹಾಗಾಗಿಯೇ ಸಿನಿಮಾವನ್ನೇ ಅಸ್ತ್ರವಾಗಿಸಿಕೊಂಡು ಬಯೋಪಿಕ್ ನೆಪದಲ್ಲಿ ಜೀವನಾಧಾರಿತ ಕಥೆಯನ್ನು ಜನರ ಮುಂದೆ ಇಡುವ ಪ್ರಯತ್ನ ಮಾಡುತ್ತಿದ್ದಾರೆ ಕೆಲವು ರಾಜಕಾರಣಿಗಳು. ಕೆಲವು ಬಯೋಪಿಕ್ ಈಗಾಗಲೇ ಚಿತ್ರೀಕರಣ ಮುಗಿಸಿ ರಿಲೀಸ್ ಗೆ ರೆಡಿ ಇದ್ರೆ, ಇನ್ನ ಕೆಲವು ಚಿತ್ರೀಕರಣ ಹಂತದಲ್ಲಿವೆ.

ಸದ್ಯ ಪ್ರಧಾನಿ ನರೇಂದ್ರ ಮೋದಿ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ದೇಶಾದ್ಯಂತ ಭಾರಿ ಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೆ ಈಗ ಸಾಕಷ್ಟು ರಾಜಕಾರಣಿಗಳ ಬಯೋಪಿಕ್ ರೆಡಿಯಾಗಿದ್ದು ಮುಂದಿನ ತಿಂಗಳೆ ತೆರೆಗೆ ಬರಲು ತುದಿಗಾಲಲ್ಲಿ ನಿಂತಿವೆ. ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಮೋದಿ ಸಿನಿಮಾದ ಜೊತೆಗೆ ವೆಬ್ ಸಿರೀಸ್ ಕೂಡ ರಿಲೀಸ್ ಗೆ ರೆಡಿಯಾಗಿದೆ. ಮುಂದೆ ಓದಿ..

ಪಿಎಂ ನರೇಂದ್ರ ಮೋದಿ ಬಯೋಪಿಕ್

ಪಿಎಂ ನರೇಂದ್ರ ಮೋದಿ ಬಯೋಪಿಕ್

ವಿವೇಕ್ ಓಬೆರಾಯ್ ಪ್ರಧಾನಿ ನರೇಂದ್ರ ಮೋದಿ ಪಾತ್ರದಲ್ಲಿ ಕಾಣಿಸಿಕೊಂಡಿರುವ 'ಪಿಎಂ ನರೇಂದ್ರ ಮೋದಿ' ಸಿನಿಮಾ ಚುನಾವಣೆಗೂ ಮೊದಲೇ ತೆರೆಮೇಲೆ ಬರುವ ಸಾಧ್ಯತೆ ಇದೆ. ಈಗಾಗಲೇ ಟ್ರೈಲರ್ ರಿಲೀಸ್ ಆಗಿದ್ದು ಸಾಕಷ್ಟು ಮಂದಿಯ ಗಮನ ಸೆಳೆದಿದೆ. ಇನ್ನು ಕೆಲವರು ಟ್ರೈಲರ್ ನೋಡಿ ತೆಗಳುತ್ತಿದ್ದಾರೆ. ಅದೇನೆ ಆಗಲಿ ಟ್ರೈಲರ್ ಮಾತ್ರ ಯುಟ್ಯೂಬ್ ಟ್ರೆಂಡಿಂಗ್ ನಲ್ಲಿದೆ. ಓಮಂಗ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿರುವ 'ಪಿಎಂ ನರೇಂದ್ರ ಮೋದಿ' ಬಯೋಪಿಕ್ ಏಪ್ರಿಲ್ 5ಕ್ಕೆ ಬಿಡುಗಡೆಯಾಗುತ್ತಿದೆ.

ರೆಡಿಯಾಗಿದೆ ರಾಹುಲ್ ಗಾಂಧಿ ಬಯೋಪಿಕ್

ರೆಡಿಯಾಗಿದೆ ರಾಹುಲ್ ಗಾಂಧಿ ಬಯೋಪಿಕ್

ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಅಧ್ಯಕ್ಷ ರಾಹುಲ್ ಗಾಂಧಿ ಬಯೋಪಿಕ್ ಕೂಡ ಸದ್ದಿಲ್ಲದೇ ತಯಾರಾಗಿದೆ. 'ಮೈ ನೇಮ್ ಈಸ್ ರಾಗಾ' ಹೆಸರಿನಲ್ಲಿ ಸಿದ್ಧವಾಗಿರುವ ಬಯೋಪಿಕ್ ಏಪ್ರಿಲ್ ನಲ್ಲಿ ರಿಲೀಸ್ ಮಾಡಲು ಪ್ಲಾನ್ ಮಾಡಿದೆ ಚಿತ್ರತಂಡ. ರುಪೇಶ್ ಪೌಲ್ ನಿರ್ದೇಶನದಲ್ಲಿ ಮೂಡಿಬಂದ ಬಯೋಪಿಕ್ ನಲ್ಲಿ ಅಶ್ವಿನಿ ಕುಮಾರ್, ರಾಹುಲ್ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಮನಮೋಹನ್ ಸಿಂಗ್ ಪಾತ್ರದಲ್ಲಿ ರಾಜು ಖೇರ್ ಅಭಿನಯಿಸಿದ್ದಾರೆ.

ಮಮತಾ ಬ್ಯಾನರ್ಜಿ ಬಯೋಪಿಕ್

ಮಮತಾ ಬ್ಯಾನರ್ಜಿ ಬಯೋಪಿಕ್

ಪ್ರಧಾನಿ ನರೇಂದ್ರ ಮೋದಿ ಬಯೊಪಿಕ್ ಬರುತ್ತಿದ್ದಂತೆ ಸಾಲು ಸಾಲು ಬಯೋಪಿಕ್ ಚಿತ್ರಗಳು ಬರ್ತಿವೆ. 'ಬಘಿನಿ' ಹೆಸರಲ್ಲಿ ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಜೀವನಾಧಾರಿತ ಸಿನಿಮಾ ಕೂಡ ಅನೌನ್ಸ್ ಆಗಿದೆ. ಈಗಷ್ಟೇ ಚಿತ್ರದ ಫಸ್ಟ್ ಲುಕ್ ರಿವೀಲ್ ಮಾಡಲಾಗಿದೆ. ಸದ್ಯ ಚಿತ್ರ ಅನೌನ್ಸ್ ಆಗಿದ್ದು, ಚಿತ್ರವನ್ನು ಚುನಾವಣಾ ಮುಂಚಿತವಾಗಿ ತೆರೆಗೆ ತರುವ ಪ್ಲಾನ್ ಮಾಡಲಾಗಿದೆ.

ಮೋದಿ ಹೆಸರಲ್ಲಿ ಬರ್ತಿದೆ ವೆಬ್ ಸಿರೀಸ್

ಮೋದಿ ಹೆಸರಲ್ಲಿ ಬರ್ತಿದೆ ವೆಬ್ ಸಿರೀಸ್

ಮೋದಿ ಹೆಸರಲ್ಲಿ ಸಿನಿಮಾ ತಯಾರಾಗಿದ್ದು ರಿಲೀಸ್ ಗೆ ರೆಡಿಯಾಗಿದೆ. ಇದರ ನಡುವೆ 'ಮೋದಿ ಜರ್ನಿ ಆಫ್ ಕಾಮನ್ ಮ್ಯಾನ್' ಎಂಬ ಹೆಸರಲ್ಲಿ ವೆಬ್ ಸಿರೀಸ್ ಕೂಡ ಸಿದ್ಧವಾಗಿದೆ. 10 ಭಾಗಗಳಲ್ಲಿ ತಯಾರಾಗಿರುವ ಈ ವೆಬ್ ಸಿರೀಸ್ ಮುಂದಿನ ತಿಂಗಳೇ ರಿಲೀಸ್ ಮಾಡುವ ಪ್ಲಾನ್ ಮಾಡಲಾಗಿದೆ. ಎರೋಸ್ ನೌ ಕ್ರಿಯೇಶನ್ ಸಂಸ್ಥೆ ನಿರ್ಮಾಣದಲ್ಲಿ ಮೂಡಿಬಂದ ಈ ವೆಬ್ ಸಿರೀಸ್ ನಲ್ಲಿ ಮೋದಿ ಬರೆದ ಒಂದು ಕವನವನ್ನು ಬಳಸಿಕೊಳ್ಳಲಾಗಿದೆ.

More from Filmibeat

English summary
Prime minister narendra modi, aicc president rahul gandhi and West bengal chief minister mamata banerjee biopics are ready to release before election.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X