ಕೇಂದ್ರ ಸರ್ಕಾರವನ್ನು ಟೀಕಿಸಿದ 'ಮೋದಿ ಚಮಚ' ಅನುಪಮ್ ಖೇರ್
ನಟ ಅನುಪಮ್ ಖೇರ್, ತಾವು ಪ್ರಧಾನಿ ಮೋದಿಯ ಚಮಚ ಎಂದು ಕೆಲ ವರ್ಷಗಳ ಹಿಂದೆ 'ಆಪ್ ಟಿ ಅದಾಲತ್' ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು. ಅವಕಾಶ ಸಿಕ್ಕಾಗೆಲ್ಲ ಮೋದಿ ಅವರನ್ನು ಹೊಗಳುತ್ತಿದ್ದ ಅನುಪಮ್ ಖೇರ್ ಈಗ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.
ಕೊರೊನಾದ ಪರಿಸ್ಥಿತಿ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿರುವ ಅನುಪಮ್ ಖೇರ್, 'ಕೊರೊನಾ ನಿಯಂತ್ರಣ ಮಾಡುವಲ್ಲಿ ಅವರು ಎಡವಿದ್ದಾರೆ. ತಮ್ಮ ಇಮೇಜ್ ಉಳಿಸಿಕೊಳ್ಳುವ ಪ್ರಯತ್ನ ಮಾಡುವ ಬದಲಿಗೆ ಜೀವ ಉಳಿಸುವ ಕೆಲಸಗಳನ್ನು ಮಾಡಬೇಕು' ಎಂದು ಖೇರ್ ಹೇಳಿದ್ದಾರೆ.
'ಸರ್ಕಾರದ ವಿರುದ್ಧ ಮಾಡಲಾಗುತ್ತಿರುವ ಟೀಕೆಗಳು ಸರಿಯಾದ ಹಾದಿಯಲ್ಲಿವೆ. ಈಗ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಜನರು ಸರ್ಕಾರವನ್ನು ಯಾವ ಕಾರಣಕ್ಕೆ ಆಯ್ಕೆ ಮಾಡಿದ್ದಾರೆಯೋ ಆ ಕಾರ್ಯವನ್ನು ಅವರು ಈಗ ಮಾಡಲೇ ಬೇಕು' ಎಂದಿದ್ದಾರೆ ಅನುಪಮ್ ಖೇರ್.

'ಸಾಮಾನ್ಯ ಪ್ರಜೆಗಳಾದ ನಾವು ಈ ಸನ್ನಿವೇಶದಲ್ಲಿ ಆಕ್ರೋಶ ಪ್ರದರ್ಶಿಸಲೇ ಬೇಕು. ಸರ್ಕಾರವನ್ನು ಹೊಣೆಯನ್ನಾಗಿ ಮಾಡಲೇಬೇಕು' ಎಂದಿದ್ದಾರೆ ಅನುಪಮ್.
ಜನರು ಸಾಯುತ್ತಿರುವ ಸಮಯದಲ್ಲಿ ಸರ್ಕಾರವು ತಮ್ಮ 'ಇಮೇಜ್' ಉಳಿಸಿಕೊಳ್ಳುವ ಪ್ರಯತ್ನದಲ್ಲಿ ನಿರತವಾಗಿದೆ ಎಂದಿರುವ ಅನುಪಮ್ ಖೇರ್, 'ಬೆಡ್‌ಗಳು ಸಿಗದೆ, ಆಮ್ಲಜನಕ ಸಿಗದೆ ಒದ್ದಾಡುತ್ತಿರುವವರನ್ನು ನೋಡಿದಾಗ, ಗಂಗೆಯಲ್ಲಿ ತೇಲುತ್ತಿರುವ ಹೆಣಗಳನ್ನು ನೋಡಿದಾಗ' ಆಕ್ರೋಶ ಉಕ್ಕಿ ಬರುತ್ತದೆ ಎಂದಿದ್ದಾರೆ.
Recommended Video
ಅನುಪಮ್ ಖೇರ್ ಅವರು ಮೋದಿಯ ಬಹುದೊಡ್ಡ ಬೆಂಬಲಿಗರಾಗಿದ್ದರು. ಸಾಕಷ್ಟು ವೇದಿಕೆಗಳನ್ನು ಮೋದಿಯನ್ನು ಬಿಜೆಪಿ ಸರ್ಕಾರವನ್ನು ಬಹುವಾಗಿ ಹೊಗಳುತ್ತಿದ್ದರು. ಅನುಪಮ್ ಖೇರ್ ಅವರ ಪತ್ನಿ ಕಿರಣ್ ಖೇರ್ ಬಿಜೆಪಿ ಸಂಸದೆಯಾಗಿದ್ದಾರೆ. ಅನುಪಮ್ ಖೇರ್ ಸಹ ಎಫ್‌ಟಿಐಐನ ಅಧ್ಯಕ್ಷರಾಗಿ ಆಯ್ಕೆ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.


Click it and Unblock the Notifications











