ಬಿಗ್ ಬಾಸ್ ಚೆಲುವೆಯ ಜೊತೆ ಪ್ರೀತಿ,ಪ್ರೇಮ,ಪ್ರಣಯ, ಐಪಿಎಲ್ ಆರಂಭಕ್ಕೂ ಮುನ್ನ ಸತ್ಯ ಹೇಳಿ ಪೇಚಿಗೆ ಸಿಲುಕಿದ ಸಿರಾಜ್ !

ಪ್ರೀತಿ ಎನ್ನುವುದು ಕೇವಲ ಎರಡೇ ಎರಡು ಅಕ್ಷರಗಳ ಪದವಲ್ಲ. ಬದಲಿಗೆ ಪ್ರೀತಿ ಎಂಬ ಪದವು ಅನೇಕ ಅರ್ಥಗಳಿಂದ ಕೂಡಿದೆ. ಇದು ಅತಿ ಹೆಚ್ಚು ಪ್ರಭಾವಶಾಲಿ ಕೂಡ ಹೌದು. ಪ್ರೀತಿಯಿಂದ ಇಡೀ ಜಗತ್ತನ್ನೇ ಜಯಿಸಬಹುದಂತೆ. ಇಂತಹ ಪ್ರೀತಿಯ ಬಲೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ಭಾರತ ತಂಡದ ಮಾಜಿ ವೇಗಿ ಮೊಹಮ್ಮದ್ ಸಿರಾಜ್ ಮತ್ತು ನಟಿ ಮಹಿರಾ ಶರ್ಮಾ ಸಿಲುಕಿದ್ದಾರೆ ಎನ್ನುವ ಅನುಮಾನ ಅನೇಕರಲ್ಲಿದೆ. ಸಿರಾಜ್ ಮತ್ತು ಮಹಿರಾ ನಡೆ ಕೂಡ ನಡೆಯುತ್ತಿರುವ ಇವರ ಲವ್ ಸ್ಟೋರಿಗೆ ಸಂಬಂಧಿಸಿದ ಚರ್ಚೆಯನ್ನು ಪುಷ್ಠಿಕರಿಸುವಂತಿದೆ.

ಹೀಗಾಗಿ ಪಂಜಾಬ್‌ನ ಮಾಹಿರಾ ಮತ್ತು ಹೈದ್ರಾಬಾದ್‌ನ ಸಿರಾಜ್‌ಗೆ ಎಲ್ಲಿಂದ ಎಲ್ಲಿಯ ಸಂಬಂಧ, ಇಬ್ಬರ ನಡುವೆ ಲವ್ ಸ್ಟೋರಿ ಶುರುವಾಗಿದ್ದಾದರೂ ಹೇಗೆ ಎಂದು ಅನೇಕರು ತಲೆ ಕೆಡಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇಬ್ಬರ ಕುರಿತು ವ್ಯಾಪಕ ಚರ್ಚೆಯನ್ನು ಮಾಡುತ್ತಿದ್ದಾರೆ.

Mohammed Siraj addresses dating rumours with actress Mahira Sharma deletes post shortly after

ಇನ್ನು, ಕ್ರಿಕೆಟ್ ಹಾಗೂ ಸಿನಿಮಾ ಎರಡಕ್ಕೂ ಮೊದಲಿಂದ ಗಂಡ-ಹೆಂಡ್ತಿಯ ಸಂಬಂಧ ಇದೆ. ಮೊಹಮ್ಮದ್ ಅಜರುದ್ದೀನ್ ಅವರಿಂದ ಹಿಡಿದು ವಿರಾಟ್ ಕೊಹ್ಲಿಯವರೆಗೆ, ಅಜಯ್ ಜಡೇಜಾ ಅವರಿಂದ ಹಿಡಿದು ಕೆ.ಎಲ್.ರಾಹುಲ್‌ವರೆಗೆ ಅನೇಕರು ನಾಯಕಿಯರ ಬೆಡಗು-ಭಿನ್ನಾಣಕ್ಕೆ ಮನ ಸೋತಿದ್ದಾರೆ. ಕೆಲವರು ಪ್ರೀತಿಯಲ್ಲಿ ಬಿದ್ದು ಎದ್ದರೆ, ಇನ್ನೂ ಕೆಲವರು ಮದುವೆಯ ಬಂಧನಕ್ಕೊಳಗಾಗಿದ್ದಾರೆ. ಸುಖ ಸಂಸಾರವನ್ನು ನಡೆಸುತ್ತಿದ್ದಾರೆ. ಹೀಗಾಗಿಯೇ ಮೊಹಮ್ಮದ್ ಸಿರಾಜ್ ಮತ್ತು ಮಹಿರಾ ಶರ್ಮಾ ಹೋದಲ್ಲಿ ಬಂದಲ್ಲಿ ಪ್ರೀತಿ ಪ್ರೇಮದ ಬಗ್ಗೆ ವ್ಯೆಯಕ್ತಿಕ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಇನ್ನು ಕೆಲವರು ಇಬ್ಬರ ಮದುವೆಯನ್ನು ಮಾಡಿಸಲು ತುದಿಗಾಲಿನಲ್ಲಿ ಕೂಡ ನಿಂತಿದ್ದಾರೆ.

ಇದೆಲ್ಲದರಿಂದ ಸಿರಾಜ್ ಮತ್ತು ಮಹಿರಾ ಈಗ ಕೋಪಗೊಂಡಿದ್ದಾರೆ. ಯಾಕೆಂದರೆ ತೆಪ್ಪಗಿದ್ದವರನ್ನು ಪದೇ ಪದೇ ಕೆರೆದು ಎಂತವರಿಗಾದರೂ ಪಿತ್ತ ನೆತ್ತಿಗೇರದೇ ಇರೋದಿಲ್ಲ. ಹೀಗಾಗಿಯೇ ತಮ್ಮ ಬಗ್ಗೆ ದಿನ ನಿತ್ಯ ಸುದ್ದಿಗಳನ್ನು ಓದಿ, ಕೇಳಿ, ಕೆರಳಿ ಕೆಂಡವಾಗಿರುವ ಮೊಹಮ್ಮದ್ ಸಿರಾಜ್ ಮತ್ತು ಮಹಿರಾ ಸದ್ಯ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಈ ಕುರಿತು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿರುವ ಮಹಿರಾ ನಾನು ಯಾರ ಜೊತೆಯೂ ಡೇಟಿಂಗ್ ಮಾಡುತ್ತಿಲ್ಲ, ವದಂತಿಗಳನ್ನು ಹಬ್ಬಿಸುವ ಕೆಲಸವನ್ನು ನಿಲ್ಲಿಸಿ ಎಂದು ಹೇಳಿದ್ದಾರೆ. ಈ ಮೂಲಕ ತಾವು ಸಿಂಗಲ್ ಎಂಬ ಸಂದೇಶವನ್ನು ಕೂಡ ರವಾನಿಸಿದ್ದಾರೆ.

ಮತ್ತೊಂದೆಡೆ ಮೊಹಮ್ಮದ್ ಸಿರಾಜ್ ಕೂಡ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪಾಪರಾಜಿಗಳಲ್ಲಿ ಮನವಿ ಮಾಡಿದ್ದಾರೆ. ನಾನು ಹೋದಲ್ಲಿ ಬಂದಲ್ಲಿ ಪ್ರಶ್ನೆಗಳನ್ನು ಕೇಳಬೇಡಿ ಎಂದು ಹೇಳಿದ್ದಾರೆ. ಎಲ್ಲವೂ ಆಧಾರರಹಿತ ಮತ್ತು ಸುಳ್ಳು ಸುದ್ದಿಗಳು ಎಂದಿರುವ ಸಿರಾಜ್ ಇದು ಇಲ್ಲಿಯೇ ಕೊನೆಯಾಗುತ್ತೆ ಎಂದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಆದರೆ ಆ ನಂತರ ಅದೇನಾಯ್ತೋ ಗೊತ್ತಿಲ್ಲ. ಕೆಲವೇ ನಿಮಿಷಗಳಲ್ಲಿ ತಮ್ಮ ಈ ಫೋಸ್ಟ್‌ನ್ನು ಸಿರಾಜ್ ಡಿಲೀಟ್ ಮಾಡಿದ್ದಾರೆ. ಸಿರಾಜ್ ಮಾಡಿದ ಈ ಕೆಲಸ ಈಗ ಅನೇಕರ ಕುತೂಹಲ ಕೆರಳಿಸಿದೆ. ಸಿರಾಜ್ ಎಲ್ಲರಿಂದ ತಮ್ಮ ಲವ್ ಸ್ಟೋರಿ ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವ ಅಭಿಪ್ರಾಯ ಕೂಡ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿದೆ.

ಅಂದ್ಹಾಗೇ ಮಹಿರಾ ಶರ್ಮಾ ಕಿರುತೆರೆಯ ಖ್ಯಾತ ಹೆಸರು. ಹಿಂದಿಯಲ್ಲಿ ನಾಗಿನ್ 3, ಕುಂಡಲಿ ಭಾಗ್ಯ, ಬೇಪನಾಹ್ ಪ್ಯಾರ್ ಧಾರಾವಾಹಿಗಳ ಮೂಲಕ ಜನಪ್ರಿಯತೆಯನ್ನು ಗಳಿಸಿದವರು ಇವರು. ಇನ್ನೂ ಹಿಂದಿಯಲ್ಲಿ ಒಂದು ಪಂಜಾಬ್‌ನಲ್ಲಿ ಎರಡು ಚಿತ್ರ ಮಾಡಿರುವ ಮಹಿರಾ ಇಲ್ಲಿಯವರೆಗೆ ನಲವತ್ತಕ್ಕೂ ಹೆಚ್ಚಿನ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ಇಷ್ಟೇ ಅಲ್ಲ ಬಿಗ್ ಬಾಸ್‌ ಮನೆಗೆ ಕೂಡ ಮಹಿರಾ ಶರ್ಮಾ ಹೋಗಿ ಬಂದಿದ್ಧಾರೆ.

ಇನ್ನೂ ಬಿಗ್ ಬಾಸ್ ಮನೆಯಲ್ಲಿದ್ದಾಗ ಪರಾಸ್‌ ಛಾಬ್ರಾ ಮೇಲೆ ಮಾಹಿರಾ ಶರ್ಮಾಗೆ ಪ್ರೇಮಾಂಕುರವಾಗಿತ್ತು. ಇಬ್ಬರು ಕೆಲ ಕಾಲ ಜೊತೆಯಲ್ಲಿ ಒಂದೇ ಸೂರಿನಡಿ ಬದುಕನ್ನು ದೂಡಿದರು. ಆದರೆ ಆ ನಂತರ ಅದೇನಾಯ್ತೋ ಕಳೆದ ವರ್ಷ ಇಬ್ಬರ ಪ್ರೇಮ ಸಂಬಂಧದಲ್ಲಿ ಬಿರುಕು ಮೂಡಿತು. ಅಭಿಮಾನಿಗಳ ನೆಚ್ಚಿನ ಜೋಡಿ ದೂರವಾಯಿತು. ಇಂಥಾ ಮಹಿರಾ ಶರ್ಮಾ ಜೊತೆ ಈಗ ಮೊಹಮ್ಮದ್ ಸಿರಾಜ್ ಹೆಸರು ಥಳುಕು ಹಾಕಿಕೊಂಡಿದೆ.

ಸದ್ಯ ಮಹಿರಾ ಶರ್ಮಾ ನಮ್ಮ ನಡುವೆ ಏನಿಲ್ಲ ಎಂದು ಹೇಳಿದ್ದಾರೆ. ಮೊಹಮ್ಮದ್ ಸಿರಾಜ್ ತಮ್ಮ ಸಂಬಂಧದ ಕುರಿತು ಪೋಸ್ಟ್ ಮಾಡಿ ಆ ನಂತರ ಡಿಲೀಟ್ ಮಾಡಿದ್ದಾರೆ. ನಿಜಕ್ಕೂ ಮೊಹಮ್ಮದ್ ಸಿರಾಜ್ ಮತ್ತು ಮಹಿರಾ ಶರ್ಮಾ ನಡುವೆ ಪ್ರೇಮಾಂಕುರವಾಗಿದೆಯಾ ? ಉತ್ತರ ಕಾಲವೇ ನೀಡಲಿದೆ.

More from Filmibeat

Read more about: cricket dating filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X