For Quick Alerts
  ALLOW NOTIFICATIONS  
  For Daily Alerts

  ತನುಶ್ರೀ ದತ್ತಾ ಪರ ವಾದಿಸುತ್ತಿದ್ದ ವಕೀಲನ ವಿರುದ್ಧವೇ ಕಿರುಕುಳ ಆರೋಪ!

  |

  ಭಾರತದಲ್ಲಿ ಮೀಟೂ ಅಭಿಯಾನಕ್ಕೆ ಜೀವ ನೀಡಿದ್ದು ಬಾಲಿವುಡ್ ನಟಿ ತನುಶ್ರೀ ದತ್ತಾ. ಹಿಂದಿ ಚಿತ್ರರಂಗದ ಖ್ಯಾತ ನಟ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿ ಇಂಡಸ್ಟ್ರಿಗೆ ಆಘಾತ ನೀಡಿದ್ದರು.

  ಸುಮಾರು 10 ವರ್ಷದ ಹಿಂದೆ ಸಿನಿಮಾ ಹಾಡಿನ ಚಿತ್ರೀಕರಣದ ವೇಳೆ ನಾನಾ ಪಾಟೇಕರ್ ನನ್ನ ಬಳಿ ಅಸಭ್ಯವಾಗಿ ವರ್ತಿಸಿದ್ದರು ಎಂದು 2018ರಲ್ಲಿ ದೂರು ನೀಡಿದ್ದರು. ತನುಶ್ರೀ ದತ್ತಾ ಅವರ ದೂರಿನ ಅನ್ವಯ ನಾನಾ ಪಾಟೇಕರ್ ಅವರನ್ನು ವಿಚಾರಣೆ ಒಳಪಡಿಸಲಾಗಿತ್ತು.

  ಮೀಟೂ ಪ್ರಕರಣದಲ್ಲಿ ನಾನಾ ಪಾಟೇಕರ್ ಗೆ ಬಿಗ್ ರಿಲೀಫ್ಮೀಟೂ ಪ್ರಕರಣದಲ್ಲಿ ನಾನಾ ಪಾಟೇಕರ್ ಗೆ ಬಿಗ್ ರಿಲೀಫ್

  ತನುಶ್ರೀ ದತ್ತಾ ಅವರ ಆರೋಪದಲ್ಲಿ ಸತ್ಯವಿಲ್ಲ ಎಂದು ನಾನಾ ಪಾಟೇಕರ್ ನಿರಾಕರಿಸಿದ್ದರು. ಬಳಿಕ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತು. ತನುಶ್ರೀ ದತ್ತಾ ಪರ ವಕೀಲ ನಿತೀನ್ ಸತ್ಪೂಟ್ ವಾದ ಮಾಡುತ್ತಿದ್ದರು.

  ಹೆಣ್ಣು ಮಕ್ಕಳಿಗೆ ಅನ್ಯಾಯವಾಗುತ್ತಿದೆ, ಚಿತ್ರರಂಗದಲ್ಲಿ ಮಹಿಳೆಯವರಿಗೆ ರಕ್ಷಣೆ ಇಲ್ಲ ಎಂದು ವಾದ ಮಂಡಿಸಿದ್ದ ವಕೀಲನ ವಿರುದ್ಧವೇ ಈಗ ಕಿರುಕುಳದ ಆರೋಪ ಕೇಳಿಬಂದಿದೆ. ಮಹಿಳೆಯೊಬ್ಬರು ತನುಶ್ರೀ ದತ್ತಾ ಪರ ವಕೀಲ ನಿತೀನ್ ಸತ್ಪೂಟ್ ವಿರುದ್ಧ ದೂರು ನೀಡಿದ್ದು, ಪ್ರಕರಣ ಕೂಡ ದಾಖಲಾಗಿದೆ.

  ತನುಶ್ರೀ ದತ್ತಾ ವಿರುದ್ಧ ಕೇವಲ 25 ಪೈಸೆ ಮಾನನಷ್ಟ ಹೂಡಿದ ಖ್ಯಾತ ನಟಿತನುಶ್ರೀ ದತ್ತಾ ವಿರುದ್ಧ ಕೇವಲ 25 ಪೈಸೆ ಮಾನನಷ್ಟ ಹೂಡಿದ ಖ್ಯಾತ ನಟಿ

  ಭೂ ವಿವಾದಕ್ಕೆ ಸಂಬಂಧಿಸಿದಂತೆ ಪ್ರಕರಣದಲ್ಲಿ ಪ್ರತಿವಾದಿ ವಕೀಲರ ಬಳಿ ರಾಜಿ ಸಂಧಾನಕ್ಕಾಗಿ ಹೋಗಿದ್ದ ಸಮಯದಲ್ಲಿ, ಆಕೆಯನ್ನು ಅಸಭ್ಯವಾಗಿ ನಿಂದಿಸಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಈ ಕುರಿತು ಸೋಮವಾರ ವಿಚಾರಣೆಗೆ ಹಾಜರಾಗುವಂತೆ ನಿತಿನ್ ಅವರಿಗೆ ತಿಳಿಸಲಾಗಿದೆ.

  English summary
  Molestation case filed against tanushree dutta's lawyer Nitin Satpute.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X