ಬಾಯ್‌ಫ್ರೆಂಡ್ ಫೋಟೊ ಹಂಚಿಕೊಂಡ ಇಲಿಯಾನ: ಭಾವನಾತ್ಮಕ ಪೋಸ್ಟ್ ವೈರಲ್

ಇತ್ತೀಚೆಗೆ ನಟಿ ಇಲಿಯಾನಾ ಡಿಕ್ರೂಸ್ ತಾವು ಗರ್ಭಿಣಿ ಆಗಿರುವ ವಿಚಾರವನ್ನು ಹಂಚಿಕೊಂಡಿದ್ದರು. ನಂತರ ಬೇಬಿ ಬಂಪ್ ಫೋಟೊಗಳನ್ನು ಶೇರ್ ಮಾಡುತ್ತಾ ಬರ್ತಿದ್ದಾರೆ. ಆದರೆ ಇಲಿಯಾನಾ ಮದುವೆಗೂ ಮೊದ್ಲೆ ಗರ್ಭಿಣಿ ಆಗಿರೋದು ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಇದೇ ವಿಚಾರಕ್ಕೆ ಆಕೆಯನ್ನು ಕೆಲವರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಇದೀಗ ಗೋವಾ ಬ್ಯೂಟಿ ಬಾಯ್‌ಫ್ರೆಂಡ್ ಫೋಟೊ ಹಂಚಿಕೊಂಡಿದ್ದಾರೆ.

ಬಹುಭಾಷಾ ನಟಿ ಇಲಿಯಾನ ಕನ್ನಡದ ಒಂದು ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ತೆಲುಗಿನ 'ದೇವದಾಸು' ಸಿನಿಮಾ ಮೂಲಕ ಗೋವಾ ಬ್ಯೂಟಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಮಹೇಶ್ ಬಾಬು ಜೊತೆ ನಟಿಸಿದ 'ಪೋಕಿರಿ' ಸಿನಿಮಾ ದೊಡ್ಡ ಬ್ರೇಕ್ ಕೊಡ್ತು. ಅಲ್ಲಿಂದ ಮುಂದೆ ಹಲವು ಸಿನಿಮಾಗಳಲ್ಲಿ ಈಕೆ ನಟಿಸಿದರು. ನಂತರ ಒಂದಷ್ಟು ವರ್ಷ ಸೌತ್ ಸಿನಿಮಾಗಳಿಂದ ಬ್ರೇಕ್ ಪಡೆದಿದ್ದ ಚೆಲುವೆ ಬಾಲಿವುಡ್ ಸಿನಿಮಾಗಳಲ್ಲಿ ಮಿಂಚಿದರು. ಇತ್ತೀಚೆಗೆ ಮತ್ತೆ ಒಂದು ತೆಲುಗು ಚಿತ್ರದಲ್ಲಿ ನಟಿಸಿದರು.

Mom to be Ileana DCruz shares Romantic photo with boyfriend

ಕೆಲ ವರ್ಷಗಳ ಹಿಂದೆ ಇಲಿಯಾನ ಆಸ್ಟ್ರೇಲಿಯಾ ಮೂಲದ ಫೋಟೊಗ್ರಫರ್ ಆಂಡ್ರ್ಯೂ ನೀಬೋನ್ ಜೊತೆ ಲವ್ವಿ ಡವ್ವಿ ನಡೆಸ್ತಿದ್ದಾರೆ ಎನ್ನಲಾಗಿತ್ತು. ಇಬ್ಬರು ಮದುವೆ ಕೂಡ ಆಗಿದ್ದಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಆದರೆ 4 ವರ್ಷಗಳ ಹಿಂದೆ ಇಬ್ಬರೂ ದೂರಾಗಿದ್ದಾರೆ ಎನ್ನುವ ವದಂತಿ ಹರಿದಾಡಿತ್ತು. ಇದೆಲ್ಲದರ ನಡುವೆ ಗೋವಾ ಬ್ಯೂಟಿ ಮತ್ತೊಬ್ಬನ ಪ್ರೀತಿಲಿ ಬಿದ್ದಿದ್ಧಾರೆ ಎನ್ನುವ ಮಾತುಗಳು ಇತ್ತೀಚೆಗೆ ಕೇಳಿಬಂದಿತ್ತು.

ಗರ್ಭಿಣಿ ಎಂದು ಘೋಷಿಸಿದ ನಟಿ

ಇದೇ ವರ್ಷ ಏಪ್ರಿಲ್ 18ರಂದು ಇಲಿಯಾನ ತಾವು ಗರ್ಭಿಣಿ ಎನ್ನುವ ವಿಚಾರವನ್ನು ಇನ್‌ಸ್ಟಾಗ್ರಾಂನಲ್ಲಿ ಘೋಷಿಸಿದ್ದರು. ನಂತರ ಒಂದೊಂದೇ ಬೇಬಿ ಬಂಪ್ ಫೋಟೊಗಳನ್ನು ತೇಲಿ ಬಿಡುತ್ತಿದ್ದಾರೆ. ಮದುವೆಗೂ ಮೊದ್ಲೆ ಗರ್ಭಿಣಿನಾ? ಆ ಮಗುವಿನ ತಂದೆ ಯಾರು? ಅಂತೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ನಟಿಯನ್ನು ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಆಕೆ ಪ್ರತಿಕ್ರಿಯಿಸುವ ಗೋಜಿಗೆ ಹೋಗಲಿಲ್ಲ.

Mom to be Ileana DCruz shares Romantic photo with boyfriend

ಬಾಯ್‌ಫ್ರೆಂಡ್ ಫೋಟೊ ಶೇರ್

ಇಷ್ಟು ದಿನ ಸೈಲೆಂಟ್ ಆಗಿದ್ದ ನಟಿ ಇಲಿಯಾನ ಡಿಕ್ರೂಸ್ ಇದ್ದಕ್ಕಿದ್ದಂತೆ ತನ್ನ ಬಾಯ್‌ಫ್ರೆಂಡ್ ಫೋಟೊ ಶೇರ್ ಮಾಡಿದ್ದಾರೆ. ಪ್ರಿಯಕರನ ಜೊತೆ ಬಹಳ ರೊಮ್ಯಾಂಟಿಕ್ ಆಗಿರುವ ಕ್ಲೋಸ್‌ಅಪ್‌ ಫೋಟೊವೊಂದನ್ನು ಶೇರ್ ಮಾಡಿದ್ದು ಅದು ಕೊಂಚ ಬ್ಲರ್ ಆಗಿರುವಂತೆ ನೋಡಿಕೊಂಡಿದ್ದಾರೆ. ಆದರೆ ಆ ಫೋಟೊದಲ್ಲಿರುವ ಆ ಮಿಸ್ಟರಿ ಮ್ಯಾನ್ ಯಾರು ಅನ್ನೋದು ರಿವೀಲ್ ಆಗಿಲ್ಲ. ಬೇಕಂತಲೇ ಕುತೂಹಲ ಹುಟ್ಟಿಸಲು ಇಲಿಯಾನ ಈ ರೀತಿ ಪೋಸ್ಟ್ ಮಾಡಿರೋದು ಅರ್ಥವಾಗ್ತಿದೆ.

ನಾನು ಅದೃಷ್ಟಶಾಲಿ

"ಪ್ರೆಗ್ನೆನ್ಸಿ ಅನ್ನೋದು ಬಹಳ ದೊಡ್ಡ ವರ. ನಾನೀಗ ಮತ್ತಷ್ಟು ಸುಂದರವಾಗಿ ಇದ್ದೇನೆ. ನಾನು ಇದನ್ನು ಅನುಭವಿಸಲು ಸಾಕಷ್ಟು ಅದೃಷ್ಟಶಾಲಿ ಎಂದು ನಾನು ಭಾವಿಸಿರಲಿಲ್ಲ. ಈ ಪ್ರಯಾಣದಲ್ಲಿ ನಾನು ಅದೃಷ್ಟಶಾಲಿ ಎಂದುಕೊಂಡಿದ್ದೇನೆ. ನಿಮ್ಮೊಳಗೆ ಬೆಳೆಯುತ್ತಿರುವ ಜೀವವನ್ನು ಅನುಭವಿಸುವುದು ಎಷ್ಟು ಸುಂದರವಾಗಿದೆ ಎಂದು ನನ್ನಿಂದ ವಿವರಿಸಲು ಸಾಧ್ಯವಾಗುತ್ತಿಲ್ಲ. ಬಹುಪಾಲು ದಿನಗಳಲ್ಲಿ ನಾನು ನನ್ನ ಬಡಿತವನ್ನು ದಿಟ್ಟಿಸಿ ನೋಡುತ್ತಿದ್ದೇನೆ ವಾವ್ - ನಾನು ಶೀಘ್ರದಲ್ಲೇ ನಿನ್ನನ್ನು ಭೇಟಿಯಾಗುತ್ತೇನೆ."

ಪ್ರತಿಕ್ಷಣ ನನ್ನ ಕಣ್ಣೀರು ಒರೆಸಿದ

"ಈ ಪ್ರಯಾಣದಲ್ಲಿ ನನ್ನ ಪ್ರೀತಿಯ ವ್ಯಕ್ತಿ ಬಹಳ ಸಹಕರಿಸಿದ. ನನಗೆ ಸಮಸ್ಯೆ ಎದುರಾದ ಪ್ರತಿಕ್ಷಣ ನನ್ನ ಕಣ್ಣೀರು ಒರೆಸಿದ. ಬಂಡೆಯಂತೆ ನನಗೆ ಬೆಂಬಲವಾಗಿ ನಿಂತಿದ್ದಾನೆ. ಈಗ ಯಾವುದು ಅಷ್ಟು ಕಷ್ಟ ಎನಿಸುತ್ತಿಲ್ಲ." ಎಂದು ಇಲಿಯಾನ ಬರೆದುಕೊಂಡಿದ್ದಾರೆ. ಅಂದಹಾಗೆ ಬಾಲಿವುಡ್ ನಟಿ ಕತ್ರೀನಾ ಕೈಫ್ ಸಹೋದರ ಸೆಬಾಸ್ಟಿಯನ್ ಲಾರೆಂಟ್ ಹಾಗೂ ಇಲಿಯಾನ ನಡುವೆ ಅಫೇರ್ ಇದೆ ಎನ್ನುವ ಗುಸುಗುಸು ಬಿಟೌನ್‌ನಲ್ಲಿ ಕೇಳಿಬಂದಿತ್ತು. ಆದರೆ ಈ ಬಗ್ಗೆ ಇಬ್ಬರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

More from Filmibeat

English summary
Mom to be Ileana D'Cruz shares Romantic photo with boyfriend. she penned down an appreciation note. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X