For Quick Alerts
  ALLOW NOTIFICATIONS  
  For Daily Alerts

  ಬೋನಿ ಕಪೂರ್ ಮೊದಲ ಪತ್ನಿ ಮತ್ತು ಶ್ರೀದೇವಿ ಇಬ್ಬರೂ ದುರಾದೃಷ್ಟವಂತರೇ.! ಯಾಕೆ.?

  By Bharath Kumar
  |

  ಬೋನಿ ಕಪೂರ್ ಮೊದಲ ಪತ್ನಿ ಮೋನಾ ಮತ್ತು ಎರಡನೇ ಪತ್ನಿ ಶ್ರೀದೇವಿ ಇಬ್ಬರೂ ಇಹಲೋಕ ತ್ಯಜಿಸಿದ್ದಾರೆ. ಒಂದು ವಿಚಾರದಲ್ಲಿ ಇವರಿಬ್ಬರಿಗೂ ಅದೃಷ್ಟವಿರಲಿಲ್ಲ. ಇದು ಕಾಕತಾಳೀಯವೋ ಅಥವಾ ವಿಧಿಯ ಆಟವೋ ಗೊತ್ತಿಲ್ಲ.

  54 ವರ್ಷದ ಶ್ರೀದೇವಿ ದುಬೈನಲ್ಲಿ ಆಕಸ್ಮಿಕ ಸಾವಿಗೆ ತುತ್ತಾದ್ರೆ, 2012ರಲ್ಲಿ ಬೋನಿ ಕಪೂರ್ ಮೊದಲ ಪತ್ನಿ ಮೋನಾ ಕ್ಯಾನ್ಸರ್ ನಿಂದ ನಿಧನರಾಗಿದ್ದರು. ಇವರಿಬ್ಬರು ಒಂದು ವಿಚಾರದಲ್ಲಿ ದುರದೃಷ್ಟವಂತರು.

  'ಬಾತ್ ಟಬ್'ನಲ್ಲಿ ಮಲಗಿ ಶ್ರೀದೇವಿ ಸಾವಿನ ಬಗ್ಗೆ ವರದಿ ನೀಡಿದ ಪತ್ರಕರ್ತ! 'ಬಾತ್ ಟಬ್'ನಲ್ಲಿ ಮಲಗಿ ಶ್ರೀದೇವಿ ಸಾವಿನ ಬಗ್ಗೆ ವರದಿ ನೀಡಿದ ಪತ್ರಕರ್ತ!

  ಇಬ್ಬರು ಕೂಡ ಮಕ್ಕಳ ವಿಚಾರದಲ್ಲಿ ವಂಚಿತರಾದರು. ಬೋನಿ ಕಪೂರ್ ಮತ್ತು ಮೋನಾ ದಂಪತಿಗೆ ಇಬ್ಬರು ಮಕ್ಕಳು. ಅರ್ಜುನ್ ಕಪೂರ್ ಮತ್ತು ಅನ್ಷುಲ ಕಪೂರ್. ಬೋನಿ ಕಪೂರ್ ಮತ್ತು ಶ್ರೀದೇವಿ ದಂಪತಿಗೆ ಕೂಡ ಇಬ್ಬರು ಮಕ್ಕಳು. ಜಾಹ್ನವಿ ಕಪೂರ್ ಮತ್ತು ಖುಷಿ ಕಪೂರ್. ಅಷ್ಟಕ್ಕೂ, ಬೋನಿ ಕಪೂರ್ ಪತ್ನಿಯರು ಯಾವ ವಿಚಾರದಲ್ಲಿ ಅದೃಷ್ಟವನ್ನ ಮಿಸ್ ಮಾಡಿಕೊಂಡರು. ಇವರಿಬ್ಬರ ಸಾವಿನಲ್ಲೂ ಇದ್ದ ಸಾಮ್ಯತೆ ಏನು? ಮುಂದೆ ಓದಿ....

  ಬೋನಿ ಕಪೂರ್ ಮೊದಲ ಪತ್ನಿ ಸತ್ತಿದ್ದು ಯಾವಾಗ.?

  ಬೋನಿ ಕಪೂರ್ ಮೊದಲ ಪತ್ನಿ ಸತ್ತಿದ್ದು ಯಾವಾಗ.?

  ಬೋನಿ ಕಪೂರ್ ಮೊದಲ ಪತ್ನಿ ಮೋನಾ ಅವರು 2012, ಮಾರ್ಚ್ 5 ರಂದು ಸಾವಿಗೀಡಾದರು. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಮೋನಾ, ಬಹುಅಂಗಾಂಗ ವೈಫಲ್ಯದಿಂದ ಕೊನೆಯುಸಿರೆಳೆದರು.

  ಮಗನ ಚೊಚ್ಚಲ ಸಿನಿಮಾ ನೋಡಲೇ ಇಲ್ಲ

  ಮಗನ ಚೊಚ್ಚಲ ಸಿನಿಮಾ ನೋಡಲೇ ಇಲ್ಲ

  ಮೋನಾ ಅವರ ಮಗ ಅರ್ಜುನ್ ಕಪೂರ್ ಅಭಿನಯದ ಚೊಚ್ಚಲ ಸಿನಿಮಾ 'ಇಶಾಕ್ ಝಾದೆ' ಮೇ ತಿಂಗಳಲ್ಲಿ ತೆರೆಕಾಣಲು ಸಿದ್ದವಾಗಿತ್ತು. ಆದ್ರೆ, ಮಗನ ಸಿನಿಮಾ ನೋಡುವ ಭಾಗ್ಯ ಆ ತಾಯಿಗೆ ಸಿಗಲಿಲ್ಲ. ಅರ್ಜುನ್ ಕಪೂರ್ ಅವರ ಚೊಚ್ಚಲ ಚಿತ್ರಕ್ಕೂ ಮುಂಚೆಯೇ ಮೋನಾ ಇಹಲೋಕ ತ್ಯಜಿಸಿದರು.

   ಶ್ರೀದೇವಿಯನ್ನೇ ಹೋಲುತ್ತಿದ್ದ ನಟಿ: ಈಕೆಯದ್ದು ದುರಂತ ಸಾವೇ.! ಶ್ರೀದೇವಿಯನ್ನೇ ಹೋಲುತ್ತಿದ್ದ ನಟಿ: ಈಕೆಯದ್ದು ದುರಂತ ಸಾವೇ.!

  ಶ್ರೀದೇವಿ ವಿಚಾರದಲ್ಲೂ ಅದೇ ಆಯ್ತು

  ಶ್ರೀದೇವಿ ವಿಚಾರದಲ್ಲೂ ಅದೇ ಆಯ್ತು

  ಬೋನಿ ಕಪೂರ್ ಎರಡನೇ ಪತ್ನಿ ಶ್ರೀದೇವಿ ವಿಚಾರದಲ್ಲೂ ಅದೇ ಆಗಿದೆ. ಮಗಳನ್ನ ಬಾಲಿವುಡ್ ಗೆ ಪರಿಚಯಿಸಬೇಕು ಎಂದು ಕನಸು ಕಂಡಿದ್ದ ಶ್ರೀದೇವಿ ಕೊನೆಗೂ ಮಗಳ ಚಿತ್ರವನ್ನ ನೋಡದೆ ಕೊನೆಯುಸಿರೆಳೆದಿದ್ದಾರೆ.

  ಜುಲೈನಲ್ಲಿ ಜಾಹ್ನವಿ ಕಪೂರ್ ಸಿನಿಮಾ ರಿಲೀಸ್

  ಜುಲೈನಲ್ಲಿ ಜಾಹ್ನವಿ ಕಪೂರ್ ಸಿನಿಮಾ ರಿಲೀಸ್

  ''ದಡಕ್'' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿರುವ ಜಾಹ್ನವಿ ಕಪೂರ್, ಚೊಚ್ಚಲ ಚಿತ್ರದ ಬಿಡುಗಡೆಗೆ ಸಜ್ಜಾಗುತ್ತಿದ್ದರು. ಜುಲೈ ತಿಂಗಳಲ್ಲಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಚೊಚ್ಚಲ ಸಿನಿಮಾ ತೆರೆಕಾಣಲಿದೆ. ಆದ್ರೆ, ಮಗಳ ಮೊದಲ ಸಿನಿಮಾ ನೋಡಲು ಈ ತಾಯಿಯೂ ಇಲ್ಲದಂತಾಗಿದೆ.

  ವಿವಾದಗಳ ಸುಳಿಯಲ್ಲೇ ಒಂದಾಗಿದ್ದ ಶ್ರೀದೇವಿ-ಬೋನಿ ಕಪೂರ್ವಿವಾದಗಳ ಸುಳಿಯಲ್ಲೇ ಒಂದಾಗಿದ್ದ ಶ್ರೀದೇವಿ-ಬೋನಿ ಕಪೂರ್

  ಬೋನಿ ಕಪೂರ್ ಗೆ ಮತ್ತೆ ಪತ್ನಿ ವಿಯೋಗ

  ಬೋನಿ ಕಪೂರ್ ಗೆ ಮತ್ತೆ ಪತ್ನಿ ವಿಯೋಗ

  ಬೋನಿ ಕಪೂರ್ ತಮ್ಮ ಜೀವನದಲ್ಲಿ ಎರಡನೇ ಸಲವೂ ತಮ್ಮ ಪತ್ನಿಯನ್ನ ಕಳೆದುಕೊಳ್ಳುವಂತಾಯಿತು. ಸದ್ಯ, ದುಬೈ ಪೊಲೀಸರಿಂದ ಭಾರತಕ್ಕೆ ಶ್ರೀದೇವಿಯ ಪಾರ್ಥಿವ ಶರೀರ ಹಸ್ತಾಂತರವಾಗಿದ್ದು, ನಾಳೆ ಅಂತ್ಯ ಸಂಸ್ಕಾರ ನಡೆಯುವ ಸಾಧ್ಯತೆ ಇದೆ.

  'ಬಾತ್ ಟಬ್'ನಲ್ಲಿ ಮಲಗಿ ಶ್ರೀದೇವಿ ಸಾವಿನ ಬಗ್ಗೆ ವರದಿ ನೀಡಿದ ಪತ್ರಕರ್ತ!'ಬಾತ್ ಟಬ್'ನಲ್ಲಿ ಮಲಗಿ ಶ್ರೀದೇವಿ ಸಾವಿನ ಬಗ್ಗೆ ವರದಿ ನೀಡಿದ ಪತ್ರಕರ್ತ!

  ಶ್ರೀದೇವಿಯನ್ನೇ ಹೋಲುತ್ತಿದ್ದ ನಟಿ: ಈಕೆಯದ್ದು ದುರಂತ ಸಾವೇ.!ಶ್ರೀದೇವಿಯನ್ನೇ ಹೋಲುತ್ತಿದ್ದ ನಟಿ: ಈಕೆಯದ್ದು ದುರಂತ ಸಾವೇ.!

  ವಿವಾದಗಳ ಸುಳಿಯಲ್ಲೇ ಒಂದಾಗಿದ್ದ ಶ್ರೀದೇವಿ-ಬೋನಿ ಕಪೂರ್ವಿವಾದಗಳ ಸುಳಿಯಲ್ಲೇ ಒಂದಾಗಿದ್ದ ಶ್ರೀದೇವಿ-ಬೋನಿ ಕಪೂರ್

  English summary
  Sridevi's elder daughter Janhvi, however, gave the event a miss what with the shooting of her debut film, Dhadak. something similar had happened at the time of Boney Kapoor's first wife Mona Kapoor's death.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X