ಚಿತ್ರಮಂದಿರಗಳಲ್ಲಿ 'ಬಾರ್ಡರ್- 2' ಆರ್ಭಟ; ನಟಿ ಮೊನಾ ಸಿಂಗ್ ಭಾವುಕ ಪೋಸ್ಟ್

ಸಿನಿಮಾ ರಂಗದಲ್ಲಿ ಅವಕಾಶಗಳು ಸಿಗುವುದು ಸುಲಭವಲ್ಲ. ಅದರಲ್ಲೂ ಒಂದು ದೊಡ್ಡ ಸಿನಿಮಾದ ಭಾಗವಾಗುವುದು ಅಷ್ಟು ಸುಲಭದ ಮಾತಲ್ಲ. ನಟ-ನಟಿಯರು ವರ್ಷಗಟ್ಟಲೆ ಕಾಯುತ್ತಾರೆ. ಒಂದು ಸರಿಯಾದ ಪಾತ್ರ ಸಿಕ್ಕರೆ ಅವರ ಜೀವನವೇ ಬದಲಾಗಿಬಿಡುತ್ತದೆ.

ಈಗ ಅಂತಹದ್ದೇ ಒಂದು ಸುಂದರ ಕ್ಷಣಕ್ಕೆ ಸಾಕ್ಷಿಯಾಗಿದೆ ಬಾಲಿವುಡ್. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದು ಸಖತ್ ವೈರಲ್ ಆಗುತ್ತಿದೆ. ಅದರಲ್ಲಿ ನಟಿ ಮೋನಾ ಸಿಂಗ್ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

Mona Singh Gets Emotional as She Joins Sunny Deol s Border 2 Calls It a Career Turning Point

ತಮ್ಮ ವೃತ್ತಿಜೀವನದ ದೊಡ್ಡ ತಿರುವಿನ ಬಗ್ಗೆ ಅವರು ಮಾತನಾಡಿದ್ದಾರೆ. ಪ್ರೇಕ್ಷಕರು ತೋರುತ್ತಿರುವ ಪ್ರೀತಿ ಕಂಡು ಅವರಿಗೆ ಮಾತುಗಳೇ ಬರುತ್ತಿಲ್ಲ. ಹೆಮ್ಮೆಯಿಂದ ಹೇಳಿಕೊಳ್ಳುವಂತಹ ಸಾಧನೆಯನ್ನು ಅವರು ಈಗ ಮಾಡಿದ್ದಾರೆ. ಆ ಸಂಭ್ರಮದ ಹಿಂದಿರುವ ಅಸಲಿ ವಿಚಾರವೇನು ಗೊತ್ತಾ?

ಬಾರ್ಡರ್- 2 ಚಿತ್ರದಲ್ಲಿ ಮೊನಾ ಸಿಂಗ್

ಹೌದು, ನಾವು ಇಲ್ಲಿ ಮಾತನಾಡುತ್ತಿರುವುದು ಖ್ಯಾತ ನಟಿ ಮೊನಾ ಸಿಂಗ್ ಅವರ ಬಗ್ಗೆ. ಸದ್ಯ ಚಿತ್ರರಂಗದಲ್ಲಿ ಭಾರೀ ಸದ್ದು ಮಾಡುತ್ತಿರುವ ಸಿನಿಮಾ ಎಂದರೆ ಅದು 'ಬಾರ್ಡರ್ 2'. ಸನ್ನಿ ಡಿಯೋಲ್ ಅಭಿನಯದ ಈ ಐತಿಹಾಸಿಕ ಸಿನಿಮಾದ ಎರಡನೇ ಭಾಗದಲ್ಲಿ ಮೊನಾ ನಟಿಸಿ ಗೆದ್ದಿದ್ದಾರೆ. ಆಕೆಯ ನಟನೆ ಬಗ್ಗೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ಈ ದೊಡ್ಡ ಮಟ್ಟದ ಸಿನಿಮಾದಲ್ಲಿ ತಮಗೆ ಅವಕಾಶ ಸಿಕ್ಕಿದ್ದಕ್ಕೆ ಮೊನಾ ಸಿಂಗ್ ತುಂಬಾನೇ ಎಮೋಷನಲ್ ಆಗಿದ್ದಾರೆ. "ಧನ್ಯವಾದಗಳು.. ನಿಮ್ಮೆಲ್ಲರ ಪ್ರೀತಿಗೆ ನಾನು ಚಿರಋಣಿ" ಎಂದು ಅವರು ಹೇಳಿಕೊಂಡಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಗೆಲುವಿನ ನಗೆ ಬೀರಿದ ನಟಿ

ಮೊನಾ ಸಿಂಗ್ ಈ ಹಿಂದೆ ಅನೇಕ ಸಿನಿಮಾಗಳಲ್ಲಿ ಮತ್ತು ವೆಬ್ ಸೀರೀಸ್ಗಳಲ್ಲಿ ನಟಿಸಿದ್ದಾರೆ. ಆದರೆ 'ಬಾರ್ಡರ್- 2' ನಂತಹ ಬಿಗ್ ಬಜೆಟ್ ಸಿನಿಮಾ ಸಿಕ್ಕಿರುವುದು ಅವರ ಕೆರಿಯರ್ಗೆ ದೊಡ್ಡ ಮೈಲೇಜ್ ನೀಡಲಿದೆ. ಈ ಸಿನಿಮಾದ ತಾರಾಗಣದಲ್ಲಿ ಸನ್ನಿ ಡಿಯೋಲ್ ಜೊತೆಗೆ ವರುಣ್ ಧವನ್ ಮತ್ತು ದಿಲ್ಜಿತ್ ದೋಸಾಂಜ್ ಕೂಡ ಇದ್ದಾರೆ. ಇಂತಹ ದೊಡ್ಡ ಸ್ಟಾರ್ಗಳ ನಡುವೆ ಮೊನಾ ಸಿಂಗ್ ಮಿಂಚಿದ್ದಾರೆ.

ಸಿನಿಮಾ ತಂಡ ಈ ಸುದ್ದಿಯನ್ನು ಅಧಿಕೃತವಾಗಿ ಹಂಚಿಕೊಂಡಾಗ ಮೊನಾ ಸಿಂಗ್ ಅವರಿಗೆ ಆಶ್ಚರ್ಯವಾಗಿತ್ತಂತೆ. ಈ ಸಂಭ್ರಮವನ್ನು ಹಂಚಿಕೊಳ್ಳುವಾಗ ಅವರ ಕಣ್ಣುಗಳು ತೇವವಾಗಿದ್ದವು. ಸಿನಿಮಾ ಬಗ್ಗೆ ಇದ್ದ ಕುತೂಹಲ ಈಗ ತಣಿದಿದೆ. ಸಿನಿಮಾ 2 ದಿನಕ್ಕೆ 70 ಕೋಟಿ ರೂ. ಕಲೆಕ್ಷನ್ ಮಾಡಿ ಸದ್ದು ಮಾಡ್ತಿದೆ.

ಬಾಲಿವುಡ್‌ನ ಎವರ್ಗ್ರೀನ್ ಕ್ಲಾಸಿಕ್ ಸಿನಿಮಾ 'ಬಾರ್ಡರ್' ಇಂದಿಗೂ ಜನರ ಮನಸ್ಸಿನಲ್ಲಿ ಹಸಿರಾಗಿದೆ. ಈಗ ಅದರ ಮುಂದುವರಿದ ಭಾಗವಾಗಿ 'ಬಾರ್ಡರ್ 2' ಬಂದಿದ್ದು ಫ್ಯಾನ್ಸ್‌ಗೆ ಹಬ್ಬವೇ ಸರಿ. ಚಿತ್ರದಲ್ಲಿ ಸನ್ನಿ ಡಿಯೋಲ್ ಮಡದಿ ಪಾತ್ರದಲ್ಲಿ ಮೊನಾ ಸಿಂಗ್ ನಟಿಸಿದ್ದಾರೆ. ಆಕೆಯ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗ್ತಿದೆ. ಒಟ್ಟಿನಲ್ಲಿ ಮೊನಾ ಸಿಂಗ್ ಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ.

More from Filmibeat

Read more about: bollwood actress sunny deol
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X