»   » ಕಿರುತೆರೆ ನಟಿಯ ನಗ್ನ ಎಂಎಂಎಸ್ ಗುಟ್ಟು ರಟ್ಟು

ಕಿರುತೆರೆ ನಟಿಯ ನಗ್ನ ಎಂಎಂಎಸ್ ಗುಟ್ಟು ರಟ್ಟು

Posted By:
Subscribe to Filmibeat Kannada
Actress Mona Singh
ಬಾಲಿವುಡ್ ವಲಯದಲ್ಲಿ ಭಾರಿ ಸದ್ದು ಮಾಡಿದ್ದ ಅಶ್ಲೀಲ ಎಂಎಂಎಸ್ ಗುಟ್ಟು ಕಡೆಗೂ ರಟ್ಟಾಗಿದೆ. ಕಿರುತೆರೆ ನಟಿ ಮೋನಾ ಸಿಂಗ್ ಅವರ ಅಶ್ಲೀಲ ಚಿತ್ರಗಳು ಹಾಗೂ ವಿಡಿಯೋ ನಕಲಿ ಎಂಬುದು ಸಾಬೀತಾಗಿದೆ. ಈಕೆಯ ಮುಖವನ್ನು ಮತ್ತೊಬ್ಬರ ನಗ್ನ ದೇಹಕ್ಕೆ ಅಂಟಿಸಿ ಮಾರ್ಫ್ ಮಾಡಲಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಜೆಸ್ಸಿ ಜೈಸಿ ಕೋಯಿ ನಹಿ, ಕ್ಯಾ ಹುವಾ ತೇರಾ ವಾದಾ ಎಂಬ ಧಾರಾವಾಹಿಗಳಲ್ಲಿ ಮೋನಾ ಸಿಂಗ್ ಅಭಿನಯಿಸಿದ್ದಾರೆ. ಎಸ್ಎಂಎಸ್ ಮೂಲಕ ತಮ್ಮ ಅಶ್ಲೀಲ ಚಿತ್ರಗಳು, ವಿಡಿಯೋಗಳನ್ನು ರವಾನಿಸಿ ತಮ್ಮ ತೇಜೋವಧೆ ಮಾಡಲಾಗುತ್ತಿದೆ ಎಂದು ಮೋನಾ ಅವರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು.

ಈಕೆಯ ಅಶ್ಲೀಲ ವಿಡಿಯೋವನ್ನು ಇಂಟರ್ ನೆಟ್ ಗೆ ಅಪ್ ಲೋಡ್ ಮಾಡಲಾಗಿತ್ತು. ಈ ವಿಡಿಯೋವನ್ನು ಇಂಟರ್ ನೆಟ್ ಗೆ ಹಾಕಿರುವ ವ್ಯಕ್ತಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಮೋನಾ ಅವರ ಅಶ್ಲೀಲ ಚಿತ್ರಗಳ ಸೃಷ್ಟಿಯ ಹಿಂದಿರುವ ಕೈಗೆ ಕೋಳ ತೊಡಿಸಲು ಪೊಲೀಸರು ಮುಂದಾಗಿದ್ದಾರೆ.

ಮೋನಾ ಸಿಂಗ್ ಅವರು ಅಮೀರ್ ಖಾನ್ ಅಭಿನಯದ '3 ಎಡಿಯಟ್ಸ್' ಚಿತ್ರದ ಸಣ್ಣ ಪಾತ್ರವನ್ನು ಪೋಷಿಸಿದ್ದರು. ಕರೀನಾ ಕಪೂರ್ ಅವರ ಅಕ್ಕನ ಪಾತ್ರದಲ್ಲಿ ಗರ್ಭಿಣಿಯಾಗಿ ಅಭಿನಯಿಸಿದ್ದಾರೆ. ಕಿರುತೆರೆಯ ಕೆಲವು ರಿಯಾಲಿಟಿ ಶೋಗಳು, ಸೀರಿಯಲ್ ಗಳಲ್ಲಿ ಅಭಿನಯಿಸಿದ್ದಾರೆ.

ಅಶ್ಲೀಲ ವಿಡಿಯೋವನ್ನು ಮಾರ್ಫ್ ಮಾಡಿ ಯಾರದೋ ದೇಹಕ್ಕೆ ತಮ್ಮ ಮುಖವನ್ನು ಅಂಟಿಸಿದ್ದರು. ಈ ಬಗ್ಗೆ ತನಿಖೆ ನಡೆಸುವಂತೆ ಮುಂಬೈ ಪೊಲೀಸರಿಗೆ ಮೋನಾ ಸಿಂಗ್ ದೂರು ನೀಡಿದ್ದರು. ಒಟ್ಟಿನಲ್ಲಿ ಬಾಲಿವುಡ್ ನಲ್ಲಿ ಭಾರಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ವಿಡಿಯೋ ನಕಲಿ ಎಂಬುದು ಗೊತ್ತಾಗಿದೆ.

English summary
Mumbai police confirmed that Mona Singh's face was morphed in the video which had gone viral on internet and on several social networking sites. The cyber crime cell of the Mumbai police sought help of the digital experts and cyber forensic experts at the Cyber Lab. After their investigation, the experts claimed that the MMS video clip was superimposed and one of the two videos was five-to-six years old.
Please Wait while comments are loading...