ಉಸಿರಾಟದ ಸಮಸ್ಯೆಯಿಂದ ಹಾಡುತ್ತ ಹಾಡುತ್ತಲೇ ವೇದಿಕೆ ಮೇಲೆ ಕುಸಿದು ಬಿದ್ದರಾ ಗಾಯಕಿ ಮೊನಾಲಿ ? ಸತ್ಯವೇನು ?
ಮನುಷ್ಯಕುಲದ ವ್ಯಾಕುಲಗಳನ್ನು ದೂರ ಮಾಡುವ ಶಕ್ತಿ ಸಂಗೀತಕ್ಕೆ ಇದೆ. ಅದರಲ್ಲಿಯೂ ಭಾರತದಲ್ಲಿ ಸಂಗೀತ ಪರಂಪರೆ ವಿಭಿನ್ನ. ವೈವಿಧ್ಯಮಯ ಸಂಗೀತ ಪ್ರಕಾರಗಳನ್ನು ಹೊಂದಿರುವ ಭಾರತದಲ್ಲಿ ಪಾಶ್ಚಾತ್ಯ ಸಂಗೀತಕ್ಕೆ ಕುಣಿದು ಕುಪ್ಪಳಿಸುವ ಬಹುದೊಡ್ಡ ವರ್ಗವೇ ಇದೆ. ಇದನ್ನು ಮನಗಂಡೇ ನಮ್ಮಲ್ಲಿ ಅನೇಕ ಗಾಯಕರು ದೇಶದ ನಾನಾ ಭಾಗಗಳಲ್ಲಿ ಮಾತ್ರವಲ್ಲದೇ ಹೊರದೇಶದಲ್ಲಿ ಕೂಡ ಸಂಗೀತ ರಸಸಂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾರೆ. ನೆರೆದ ಅಸಂಖ್ಯಾತ- ಅಗಣಿತ ಅಭಿಮಾನಿಗಳ ಎದುರು ಹಾಡುತ್ತಾರೆ. ಕುಣಿಯುತ್ತಾರೆ. ಇಂತಹದ್ದೇ ಕಾರ್ಯಕ್ರಮವೊಂದರಲ್ಲಿ ಮೊನಾಲಿ ಠಾಕೂರ್ ಭಾಗಿಯಾಗಿದ್ದಾಗ ಆರೋಗ್ಯದಲ್ಲಿ ಏರುಪೇರಾಗಿದೆ.
ಹೌದು, ಮೊನಾಲಿ ಠಾಕೂರ್.. ಬಾಲಿವುಡ್‌ನ ಸ್ಟಾರ್ ಸಿಂಗರ್. ಜರಾ ಜರಾ ಟಚ್ ಮೀ, ಖ್ವಾಬ್ ದೇಖೆ ಜೂಟೆ ಮೂಠೆ, ಖಬೂಲ್ ಕರ್ ಲೇ, ಚಮ್ ಚಮ್ ಹೀಗೆ ಹತ್ತು ಹಲವು ಅಲ್ಲ ನೂರಾರು ಚಾರ್ಟ್ ಬಸ್ಟರ್‌ಗಳನ್ನು ಹಾಡಿರುವ ಗಾಯಕಿ ಇವರು. ಇಂಥಾ ಮೊನಾಲಿ ಠಾಕೂರ್ ಜನವರಿ 21ರಂದು ಸಂಜೆ ಕೂಚ್ ಬಿಹಾರದಲ್ಲಿ ಆಯೋಜನೆ ಮಾಡಲಾಗಿದ್ದ ದಿನ್ಹಾಟಾ ಉತ್ಸವದಲ್ಲಿ ಹಾಡನ್ನು ಹಾಡುತ್ತಿದ್ದರು.

ಇದೇ ಸಮಯದಲ್ಲಿ ಉಸಿರಾಟದ ಸಮಸ್ಯೆಯನ್ನು ಎದುರಿಸಿದ ಮೊನಾಲಿ ಠಾಕೂರ್ ಅರ್ಧಕ್ಕೆ ಹಾಡುಗಳನ್ನು ನಿಲ್ಲಿಸಿದ್ದಾರೆ. ಇದನ್ನು ಗಮನಿಸಿದ ಕಾರ್ಯಕ್ರಮದ ಆಯೋಜಕರು ನೆರವಿಗೆ ಧಾವಿಸಿದ್ದಾರೆ. ಉಸಿರಾಟದ ಸಮಸ್ಯೆ ತೀವೃವಾಗುತ್ತಿದ್ದಂತೆಯೇ ಸ್ಥಳದಲ್ಲಿಯೇ ಆಂಬುಲೆನ್ಸ್ ಮೂಲಕ ದಿನ್‌ಹಟಾ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಮೊನಾಲಿ ಠಾಕೂರ್ ಅವರ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಅನ್ನುವ ಸುದ್ದಿ ಹಬ್ಬಿದೆ. ಆದರೆ ಈ ಸುದ್ದಿ ಸುಳ್ಳು ಎಂದು ಹೇಳಿರುವ ಮೊನಾಲಿ ಠಾಕೂರ್ ತಮ್ಮ ಆರೋಗ್ಯದ ಕುರಿತು ಸ್ಪಷ್ಟೀಕರಣ ನೀಡಿದ್ದಾರೆ.
ನನಗೆ ಯಾವ ಉಸಿರಾಟದ ಸಮಸ್ಯೆ ಇಲ್ಲ ನಾನು ಯಾವ ಆಸ್ಪತ್ರೆಗೆ ದಾಖಲು ಆಗಿಲ್ಲ ಎಂದು ಹೇಳಿರುವ ಮೊನಾಲಿ ನಾನು ಜ್ವರದಿಂದ ಬಳಲುತ್ತಿದ್ದು, ಚೇತರಿಸಿಕೊಳ್ಳಲು ಬೇಕಾದ ಸಮಯ ನನಗೆ ನಿರಂತರವಾದ ಪ್ರವಾಸಗಳಿಂದ ಸಿಗುತ್ತಿಲ್ಲ ಎಂದಿದ್ದಾರೆ. ಸೈನಸ್ ಮತ್ತು ಮೈಗ್ರೇನ್ ಸಮಸ್ಯೆ ಕೂಡ ಕಾಡುತ್ತಿದೆ. ನಾನು ಈಗ ಮುಂಬೈ ಮರಳಿದ್ದೇನೆ, ಚಿಕಿತ್ಸೆ ಪಡೆಯುತ್ತಿದ್ದೇನೆ, ವಿಶ್ರಾಂತಿಯನ್ನು ಪಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ. ಶೀಘ್ರದಲ್ಲಿಯೇ ಸಂಪೂರ್ಣವಾಗಿ ಗುಣಮುಖಳಾಗುತ್ತೇನೆ ಎಂದು ಹೇಳಿದ್ದಾರೆ.
ಅಂದ್ಹಾಗೇ ಹಿಂದೆ ವಾರಣಾಸಿಯಲ್ಲಿ ಮೊನಾಲಿ ಠಾಕೂರ್ ಸಂಗೀತ ಕಾರ್ಯಕ್ರಮವನ್ನು ನೀಡುತ್ತಿದ್ದರು. ಹಾಡನ್ನು ಹಾಡುತ್ತಲೇ ಅರ್ಧಕ್ಕೆ ನಿಲ್ಲಿಸಿದ್ದರು. ಸರಿಯಾದ ರೀತಿಯಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಿಲ್ಲ ಒಂದು ಸರಿಯಾದ ವ್ಯವಸ್ಥೆ ಇಲ್ಲಿ ಇಲ್ಲ ಎಂದು ಕಿಡಿ ಕಾರಿದ್ದರು. ಆಯೋಜಕರ ವಿರುದ್ದ ಗಂಭೀರ ಆರೋಪ ಮಾಡಿದ್ದರು. ಆ ನಂತರ ಮಾತನಾಡಿದ್ದ ಮೊನಾಲಿ ಠಾಕೂರ್ ಅಲ್ಲಿ ಸರಿಯಾದ ವ್ಯವಸ್ಥೆಗಳಿರಲಿಲ್ಲ, ವೇದಿಕೆ ಸರಿ ಇರಲಿಲ್ಲ, ಡ್ಯಾನ್ಸರ್‌ಗಳಿಗೆ ಕಷ್ಟವಾಗುತ್ತಿತ್ತು ಎಂದು ಹೇಳಿದ್ದ ಅಲ್ಲೇನಾದರೂ ಹಾಡು ಹಾಡುತ್ತಾ ನಿಂತಿದ್ದರೆ ನನ್ನ ಕಾಲಿಗೆ ಗಾಯವಾಗುತ್ತಿತ್ತು ಎಂದು ಆಕ್ರೋಶ ಹೊರ ಹಾಕಿದ್ದರು. ಮೊನಾಲಿ ಠಾಕೂರ್ ಅವರ ಈ ಮಾತು ಅನೇಕರನ್ನು ಕೆರಳಿಸಿತ್ತು. ಇದು ಅಂಹಕಾರದ ಪರಮಾವಧಿ ಎಂದು ಕಿಡಿ ಕಾರಿದ್ದರು.


Click it and Unblock the Notifications











