ಏಕಾಏಕಿ ನಿಗೂಢವಾಗಿ ಕಣ್ಮರೆಯಾದ ಮೊನಾಲಿಸಾ ; ಎಲ್ಲಿ ಹೋದಳು, ಏನಾದಳು ಮಹಾಕುಂಭ ಮೇಳದ ಚೆಲುವೆ ? ಫರ್ಮಾನ್ ಕಣ್ಣೀರು

ಪ್ರೀತಿ ಹೃದಯದ ಭಾಷೆ ಎನ್ನುವುದು ಲೋಕಾರೂಢಿ. ಆದರೆ ಕಾಲ ಕಳೆದಂತೆ ಪ್ರೀತಿ ಹುಟ್ಟುವ ಹೃದಯವೂ ಕೂಡ ವ್ಯಾವಹಾರಿಕವಾಗಿದೆ. ಇನ್ನು ಕೆಲವೊಮ್ಮೆ ಹೃದಯದಲ್ಲಿ ಅರಳಿದ ಪ್ರೀತಿಗೆ ಜಾತಿ-ಧರ್ಮ- ಅಂತಸ್ತು-ಮನೆತನ- ಸಂಪ್ರದಾಯ-ಗೌರವ ಇತ್ಯಾದಿ ಮನುಷ್ಯ ನಿರ್ಮಿತ ಗೋಡೆಗಳು ಅಡ್ಡಿಯಾಗುತ್ತಾವೆ.ಆಗ ಕೆಲವರ ಪ್ರೀತಿ ಕಮರಿ ಹೋಗುತ್ತೆ.ಇನ್ನು ಕೆಲವರ ಮನೆಯಲ್ಲಿ ಹೆತ್ತವರ ವಿರೋಧದಿಂದ ಮನೆಯಿಂದ ಓಡಿ ಹೋಗಿ ಮದುವೆಯಾಗ್ಲೇ ಬೇಕಾದ ಅನಿವಾರ್ಯತೆ ಎದುರಾಗುತ್ತೆ.

ಈ ಅನಿವಾರ್ಯತೆಯಿಂದ ಮೊನಾಲಿಸಾ ಮದುವೆಯಾಗಿರಬಹುದು. ಆದರೆ.. ಪ್ರೀತಿಯ ಹೆಸರಿನಲ್ಲಿ ಮೊನಾಲಿಸಾನ ಖೆಡ್ಡಾಗೆ ಕೆಡವಲಾಗಿದೆ ಎನ್ನುವ ಅನುಮಾನ ಸದ್ಯ ಹಲವರಲ್ಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮೊನಾಲಿಸಾ ಇನ್ನೂ ಅಪ್ರಾಪ್ತೆ.

Monalisa Bhosle Missing Husband Claims Abduction Mother Slams It as Fake Drama in Viral Marriage

ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ (ಎನ್‌ಸಿಎಸ್‌ಟಿ) ನಡೆಸಿದ ವಿಚಾರಣೆಯಲ್ಲಿ, ಮೊನಾಲಿಸಾಗೆ 18 ವರ್ಷವಾಗಿಲ್ಲ ಎನ್ನುವ ವಿಚಾರ ಬಹಿರಂಗವಾಗಿದೆ.

ಮಹೇಶ್ವರದ ಸರ್ಕಾರಿ ಆಸ್ಪತ್ರೆ ದಾಖಲೆಗಳ ಪ್ರಕಾರ, ಮೊನಾಲಿಸಾ ಡಿಸೆಂಬರ್ 30, 2009ರಂದು ಜನಿಸಿದ್ದಾರೆ. ಎಲ್ಲರಿಗೆ ಗೊತ್ತಿರುವಂತೆ ಭಾರತದ ಕಾನೂನಿನ ಪ್ರಕಾರ ಮದುವೆಯಾಗಲು ಹುಡುಗಿಯ ವಯಸ್ಸು 18 ಹಾಗೂ ಹುಡುಗನ ವಯಸ್ಸು 21 ವರ್ಷ ಆಗಿರಬೇಕು ಎಂಬ ನಿಯಮವಿದೆ.

ಈ ಹಿನ್ನೆಲೆ ಮೊನಾಲಿಸಾನ ಮದುವೆಯಾದ ಫರ್ಮಾನ್ ಖಾನ್ ವಿರುದ್ಧ ಲೈಂ*ಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಮಹೇಶ್ವರ ಪೊಲೀಸ್ ಠಾಣೆಯಲ್ಲಿ ಫರ್ಮಾನ್ ಖಾನ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಹೀಗಿರುವಾಗ ಈ ಲವ್ ಸ್ಟೋರಿ ಇನ್ನೊಂದು ತಿರುವು ಪಡೆದಿದ್ದು ಮೊನಾಲಿಸಾ ಕಾಣೆಯಾಗಿದ್ದಾಳೆ ಎಂದು ಫರ್ಮಾನ್ ಖಾನ್ ಅಲವತ್ತುಕೊಂಡಿದ್ದಾರೆ. ಈ ಕುರಿತು ವಿಡಿಯೋ ಮೂಲಕ ಮಾಹಿತಿಯನ್ನು ಹಂಚಿಕೊಂಡಿರುವ ಫರ್ಮಾನ್, ಮೊನಾಲಿಸಾ ಕಾಣೆಯಾಗಿದ್ದಾಳೆ ಎಂದು ಹೇಳಿದ್ಧಾರೆ.

Monalisa Bhosle Missing Husband Claims Abduction Mother Slams It as Fake Drama in Viral Marriage

ಮೊನಾಲಿಸಾನ ಹುಡುಕಿಕೊಂಡು ರಾಜಸ್ಥಾನದ ಪುಷ್ಕರ್‌ಗೆ ಬಂದಿರುವುದಾಗಿ ಕೂಡ ಫರ್ಮಾನ್ ಖಾನ್ ಹೇಳಿದ್ದು, ಮೊನಾಲಿಸಾನ ಹುಡುಕುವ ಪ್ರಯತ್ನ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಮೊನಾಲಿಸಾ ಅವರ ತಾಯಿ ಲತಾ ಭೋಸ್ಲೆ ಇದು ತನಿಖೆಯ ದಾರಿ ತಪ್ಪಿಸುವ ಸಂಚು ಎಂದು ಹೇಳಿದ್ದಾರೆ.ಎಲ್ಲೇ ಇದ್ದರೂ ದಯಮಾಡಿ ಮನೆಗೆ ಬಾ ಎಂದು ಕೂಡ ಮೊನಾಲಿಸಾ ಬಳಿ ಮನವಿಯನ್ನು ಮಾಡಿಕೊಂಡಿರುವ ಅವರ ತಾಯಿ ಲತಾ, ನಾವೆಲ್ಲ ನಿನ್ನ ಜೊತೆ ಇದ್ದೇವೆ, ಹೆದರಬೇಡ ಎಂದು ಹೇಳಿದ್ದಾರೆ. ಮಗಳ ಸುರಕ್ಷತೆಗಾಗಿ ಪೊಲೀಸರಲ್ಲಿ ಮತ್ತು ಸರ್ಕಾರದಲ್ಲಿ ಮನವಿಯನ್ನು ಕೂಡ ಮಾಡಿಕೊಂಡಿದ್ದಾರೆ.

ಪೊಲೀಸರು ಕೂಡ ಸದ್ಯ ವೈರಲ್ ಆದ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದು, ಫರ್ಮಾನ್‌ಗಾಗಿ ಹುಡುಕಾಟ ನಡೆಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಹೀಗಾಗಿ ಫರ್ಮಾನ್ ಮತ್ತು ಮೊನಾಲಿಸಾ ಸಿಕ್ಕ ನಂತರ ಅಧಿಕೃತ ತನಿಖೆ ಪೂರ್ಣಗೊಂಡ ನಂತರವೇ ಈ ಪ್ರಕರಣದ ಸಂಪೂರ್ಣ ಸತ್ಯ ಹೊರಬೀಳಲಿದೆ.

ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಹಲವರು ಈಗಾಗಲೇ ಫರ್ಮಾನ್ ವಿರುದ್ಧ ಕಿಡಿ ಕಾರಿದ್ದಾರೆ. ಮೊನಾಲಿಸಾ ಕಣ್ಮರೆಯ ಹಿಂದೆ ಫರ್ಮಾನ್ ಅವರದ್ದೇ ಕೈವಾಡ ಇದೆ ಎನ್ನುವ ಶಂಕೆ ವ್ಯಕ್ತಪಡಿಸುತ್ತಿರುವ ಹಲವರು ಬೇರೆಯ ಸಂಚನ್ನು ಈ ವ್ಯಕ್ತಿ ರೂಪಿಸುತ್ತಿದ್ದಾನೆ ಎಂಬ ಅಭಿಪ್ರಾಯವನ್ನು ಕೂಡ ವ್ಯಕ್ತಪಡಿಸಿದ್ದಾರೆ.

ಇನ್ನುಳಿದಂತೆ ಈ ಹಿಂದೆ ಮದುವೆ ವಿವಾದ ತಾರಕಕ್ಕೇರಿದಾಗ ಬಲವಂತವಾಗಿ ನನ್ನ ಮದುವೆಯನ್ನು ನನ್ನ ಚಿಕ್ಕಮ್ಮನ ಮಗನ ಜೊತೆ ಮಾಡಿಸಲು ಮನೆಯವರು ಮುಂದಾಗಿದ್ದರು ಎಂದು ಮೊನಾಲಿಸಾ ಹೇಳಿದ್ದರು. ಈ ಮಾತನ್ನು ಅಲ್ಲಗೆಳೆದಿದ್ದ ಮೊನಾಲಿಸಾ ತಾಯಿ ಲತಾ ಅದೆಲ್ಲವೂ ಸುಳ್ಳು, ನಾವು ಹಿಂದೂಗಳು, ಇಂತಹ ವಿಷಯ ಮತ್ತು ವಿಚಾರ ನಮ್ಮ ಧರ್ಮದಲ್ಲಿ ಪ್ರಸ್ತಾಪವಾಗುವುದಿಲ್ಲ ಎಂದು ಹೇಳಿದ್ದರು. ಅವಳು ಹೇಳುತ್ತಿರುವ ಮಾತು ಅವಳದ್ದಲ್ಲ, ಮದುವೆಯಾದ ಆ ವ್ಯಕ್ತಿ ಹೀಗೆ ಮಾತನಾಡು ಎಂದು ಅವಳಿಗೆ ಹೇಳಿ ಕೊಡುತ್ತಿದ್ದಾನೆ ಎಂದಿದ್ದರು. ವಶೀಕರಣದ ಆರೋಪವನ್ನು ಕೂಡ ಮಾಡಿದ್ದರು.

More from Filmibeat

English summary
Monalisa Bhosle missing! Husband Farman Khan's viral plea vs. mother's drama claim. The latest updates on the Monalisa marriage row you can't miss.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X