"ನಮ್ಮದು ಲವ್ ಜಿಹಾದ್ ಅಲ್ಲ" ಎಂದ ಮೊನಾಲಿಸಾ; ಆದರೆ ಆಕೆಯ ತಂದೆ ಹೇಳಿದ್ದೇನು?

ಕುಂಭಮೇಳದ ವೈರಲ್ ಹುಡುಗಿನ ಮೊನಾಲಿಸಾ ಭೋಸ್ಲೆ ಮದುವೆ ವಿಚಾರ ಕಳೆದೆರಡು ದಿನಗಳಿಂದ ಭಾರೀ ಸದ್ದು ಮಾಡ್ತಿದೆ. ಮೊಹಮ್ಮದ್ ಫರ್ಮಾನ್ ಎಂಬ ಮುಸ್ಲಿಂ ಯುವಕನ ಜೊತೆ ಆಕೆಯ ಮದುವೆ ನಡೆದಿದೆ. ಇದು ಲವ್ ಜಿಹಾದ್ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಆದರೆ ಇದನ್ನು ಸ್ವತಃ ಮೊನಾಲಿಸಾ ಅಲ್ಲಗಳೆದಿದ್ದಾರೆ. ಇದೀಗ ಆಕೆಯ ತಂದೆ ಜಯಸಿಂಗ್ ಭೋಸ್ಲೆ ಮಗಳ ಮದುವೆ ಬಗ್ಗೆ ಮಾತನಾಡಿದ್ದಾರೆ.

ಎರಡು ದಿನಗಳ ಹಿಂದೆ ಕೇರಳದ ಪೂವಾರ್ ಬಳಿಯ ಅರುಮನೂರ್ ದೇವಸ್ಥಾನದಲ್ಲಿ ಮೊನಾಲಿಸಾ ಹಾಗೂ ಮೊಹಮದ್ ಫರ್ಮಾನ್ ಮದುವೆ ನಡೆದಿತ್ತು. ಸ್ಥಳೀಯರು ಈ ಮದುವೆಗೆ ಬೆಂಬಲ ನೀಡಿದ್ದರು. ಸನೋಜ್ ಮಿಶ್ರಾ ನಿರ್ಮಾಣದ 'ದಿ ಡೈರಿ ಆಫ್ ಮಣಿಪುರ' ಎಂಬ ಚಿತ್ರದಲ್ಲಿ ಮೊನಾಲಿಸಾ ನಟಿಸುತ್ತಿದ್ದರು. ಚಿತ್ರಕ್ಕಾಗಿ ತರಬೇತಿ ಪಡೆದು ನಟಿಸಲು ಮುಂದಾಗಿದ್ದರು. ಇದೇ ಸಿನಿಮಾ ಸೆಟ್‌ನಲ್ಲಿ ಫರ್ಮಾನ್ ಪರಿಚಯ, ಸ್ನೇಹ, ಪ್ರೀತಿ ಶುರುವಾಗಿತ್ತು. ಕೆಲವೇ ತಿಂಗಳಲ್ಲಿ ಜೋಡಿ ಮದುವೆಯಾಗಿದೆ.

Monalisa Bhosle s Father Reacts on Her Marriage to Farman Says Police Told She Is Free to Choose

ಮೊನಾಲಿಸಾಗೆ 18 ವರ್ಷ ವಯಸ್ಸಾಗಿರುವುದರಿಂದ ಪೋಷಕರ ವಿರೋಧದ ನಡುವೆ ಮದುವೆ ಆಗಲು ಪೊಲೀಸರು ಭದ್ರತೆ ನೀಡಿದ್ದರು. ಆಕೆಯನ್ನು ಚಿತ್ರರಂಗಕ್ಕೆ ಪರಿಚಯಿಸಿದ ನಿರ್ಮಾಪಕ, ನಿರ್ದೇಶಕ ಸನೋಜ್ ಮಿಶ್ರಾ 'ಇದು ಲವ್ ಜಿಹಾದ್' ಆರೋಪಿಸಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಪೋಸ್ಟ್ ಮಾಡಿದ್ದಾರೆ. ಈ ಎಲ್ಲಾ ಆರೋಪಗಳಿಗೆ ಮೊನಾಲಿಸಾ ಸ್ಪಷ್ಟನೆ ನೀಡಿದ್ದಾಳೆ.

"ನಾವು ಹಿಂದೂ ಸಂಪ್ರದಾಯದಂತೆ ಮದುವೆ ಆಗಿದ್ದೇವೆ. ಯಾವುದೇ ಕಾರಣಕ್ಕೂ ಇದು ಲವ್ ಜಿಹಾದ್ ಅಲ್ಲ. ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ. ಎಲ್ಲಾ ಧರ್ಮಗಳು ನನಗೆ ಸಮಾನ" ಎಂದು ಮೊನಾಲಿಸಾ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾಳೆ. "ಮದುವೆ ನನ್ನದೇ ನಿರ್ಧಾರ. ಫರ್ಮಾನ್ ಮದುವೆಗೆ ಅಷ್ಟಾಗಿ ಆಸಕ್ತಿ ತೋರಿಸಲಿಲ್ಲ. ನಾನೇ ಒತ್ತಡ ಹೇರಿ ಮದುವೆ ಆಗಿದ್ದು. ಬೇರೆ ಯುವಕನ ಜೊತೆ ನನಗ ಮದುವೆ ಮಾಡಿಸಲು ನನ್ನ ಪೋಷಕರು ಮುಂದಾಗಿದ್ದರು. ಆತ ನಮ್ಮ ಸಂಬಂಧಿ. ಆತನೊಟ್ಟಿಗೆ ಮದುವೆ ಮಾಡಿದರೆ ನಮ್ಮ ಅಣ್ಣನಂತೆ ಕಾಣ್ತಾನೆ. ಅದಕ್ಕೆ ಒಪ್ಪಲಿಲ್ಲ" ಎಂದು ತಿಳಿಸಿದ್ದಳು.

ನಮ್ಮ ತಂದೆ ಕೂಡ ಕೇರಳಕ್ಕೆ ಬಂದಿದ್ದರು. ಆದರೆ ನಮ್ಮ ಮದುವೆಗೆ ಹಾಜರಾಗಲಿಲ್ಲ ಎಂದು ಮೊನಾಲಿಸಾ ಹೇಳಿದ್ದಳು. ಮನಾಲಿಸಾ ಕೈಹಿಡಿದ ಫರ್ಮಾನ್ ಮಾತನಾಡಿ "ನಮ್ಮದು ಲವ್ ಜಿಹಾದ್ ಕಂಡಿತ ಅಲ್ಲ. ನಾವಿಬ್ಬರೂ ನಮ್ಮ ಮತಾಂತರವಾಗಲಿಲ್ಲ. ಪ್ರೀತಿಗೆ ಮತಾಂತರದ ಅವಶ್ಯಕತೆ ಇಲ್ಲ. ನಾವಿಬ್ಬರೂ ಪ್ರೀತಿಸಿದ್ದೆವು. ಅದಕ್ಕೆ ಮದುವೆ ಆಗಿದ್ದೇವೆ" ಎಂದಿದ್ದನು. ಇದೀಗ ಮೊನಾಲಿಸಾ ತಂದೆ ಜಯಸಿಂಗ್ ಭೋಸ್ಲೆ ಮಾತನಾಡಿದ್ದಾರೆ.

"ಕೇರಳದಲ್ಲಿ ನಟನೆ ಕಲಿಯಲು, ಸಿನಿಮಾದಲ್ಲಿ ನಟಿಸಲು ಮೊನಾಲಿಸಾಳನ್ನು ಕಳಿಸಿಕೊಡಿ ಎಂದು ಕೆಲವರು ಬಂದು ಕರೆದುಕೊಂಡು ಹೋದರು. ಈ ಬಗ್ಗೆ ಹೆಚ್ಚು ತನಗೆ ಗೊತ್ತಿರಲಿಲ್ಲ. ಹಾಗಾಗಿ ಸರಿ ಎಂದೆ. ಅವತ್ತು ಫರ್ಮಾನ್ ಕೂಡ ಬಂದಿದ್ದ. ಈಗ ನೋಡಿದ್ರೆ ಇಬ್ಬರೂ ಮದುವೆ ಆಗಿಬಿಟ್ಟಿದ್ದಾರೆ. ಮದುವೆ ವಿಷಯ ಹೇಳಿದಾಗ ನಾನು ಬೇಡ, ಊರಿಗೆ ಹೋಗೋಣೆ ಎಂದೆ. ಆಕೆಗೆ 18 ವರ್ಷ ವಯಸ್ಸಾಗಿರುವುದರಿಂದ ಇಷ್ಟಪಟ್ಟವರನ್ನು ಮದುವೆ ಆಗಬಹುದು ಎಂದು ಪೊಲೀಸರು ಹೇಳಿದರು. ಅದಕ್ಕೆ ಏನು ಮಾಡಲು ಆಗಲಿಲ್ಲ" ಎಂದು ಜಯಸಿಂಗ್ ಭೋಸ್ಲೆ ಹೇಳಿದ್ದಾರೆ.

ಇನ್ನು ಮೊನಾಲಿಸಾಳ ಚಿಕ್ಕಪ್ಪ ಮಾತನಾಡಿ "ಸಿನಿಮಾದಲ್ಲಿ ನಟಿಸುವುದಕ್ಕಾಗಿ ಆಕೆಯನ್ನು ಕೇರಳಕ್ಕೆ ಕರೆಸಿದ್ದರು. ನಾವು ವಿದ್ಯಾವಂತರಲ್ಲ, ಹಾಗಾಗಿ ನಮಗೆ ಸಿನಿಮಾ ಬಗ್ಗೆ ಹೆಚ್ಚು ಗೊತ್ತಿಲ್ಲ. ಯಾರಾದರೂ ಆಕೆಯ ಮೇಲೆ ಪ್ರಭಾವ ಬೀರಿರಬಹುದು. ಈಗ ಆಕೆಯ ನಿರ್ಧಾರ ಒಪ್ಪಿಕೊಳ್ಳದೇ ಬೇರೆ ವಿಧಿಯಿಲ್ಲ" ಎಂದಿದ್ದಾರೆ.

More from Filmibeat

Read more about: actress mollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X