For Quick Alerts
  ALLOW NOTIFICATIONS  
  For Daily Alerts

  ಕೋಟ್ಯಂತರ ಹಣ ವಂಚನೆ: ನಟಿ ಅಮೀಷಾ ಪಟೇಲ್ ವಿರುದ್ಧ ಪ್ರಕರಣ ದಾಖಲು

  |

  ಕೋಟ್ಯಂತರ ರೂಪಾಯಿ ಹಣ ವಂಚನೆ ಮಾಡಿರುವ ಆರೋಪದ ಮೇಲೆ ಖ್ಯಾತ ಬಾಲಿವುಡ್ ನಟಿ ಅಮೀಷಾ ಪಟೇಲ್ ವಿರುದ್ಧ ಪ್ರಕರಣ ದಾಖಲಾಗಿದೆ. ನ್ಯಾಯಾಲಯದ ನೊಟೀಸ್ ಸಹ ಜಾರಿ ಆಗಿದೆ.

  ಕಹೋನಾ ಪ್ಯಾರ್ ಹೇ, ಗದರ್ ಸೇರಿದಂತೆ ಇನ್ನೂ ಹಲವಾರು ಹಿಟ್ ಸಿನಿಮಾಗಳಲ್ಲಿ ನಟಿಸಿರುವ ನಟಿ ಅಮೀಷಾ ಪಟೇಲ್ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ನಟಿಯು ವ್ಯಕ್ತಿಯೊಬ್ಬರಿಗೆ 2.50 ಕೋಟಿ ಹಣ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

  ಬಾಲಿವುಡ್ ನಟಿ ಅಮೀಶಾ ಪಟೇಲ್ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಬಾಲಿವುಡ್ ನಟಿ ಅಮೀಶಾ ಪಟೇಲ್ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ

  ನಟಿ ಅಮೀಷಾ ಪಟೇಲ್ ವಿರುದ್ಧ ಅಜಯ್ ಕುಮಾರ್ ಸಿಂಗ್ ಎಂಬುವರು ಜಾರ್ಖಂಡ್ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದಾರೆ. ನಟಿ ಅಮಿಷಾ ಪಟೇಲ್ 2017 ರ ಸಮಯದಲ್ಲಿ ಅಜಯ್ ಗೆ ಪರಿಚಯವಾಗಿ, ತಮ್ಮ ನಿರ್ಮಾಣದ ಸಿನಿಮಾ 'ದೇಸಿ ಮ್ಯಾಜಿಕ್' ನಲ್ಲಿ ಹೂಡಿಕೆ ಮಾಡುವಂತೆ ಮನವಿ ಮಾಡಿದ್ದರಂತೆ.

  ಅಮೀಷಾ ಖಾತೆಗೆ 2.50 ಕೋಟಿ ಹಣ ವರ್ಗಾವಣೆ

  ಅಮೀಷಾ ಖಾತೆಗೆ 2.50 ಕೋಟಿ ಹಣ ವರ್ಗಾವಣೆ

  ಅಂತೆಯೇ ಅಜಯ್ ಕುಮಾರ್ ಸಿಂಗ್, 2.50 ಕೋಟಿ ಹಣವನ್ನು ಅಮೀಷಾ ಪಟೇಲ್ ಅವರ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಆದರೆ ಅಮೀಷಾ ಪಟೇಲ್ 'ದೇಸಿ ಮ್ಯಾಜಿಕ್' ಸಿನಿಮಾದ ನಿರ್ಮಾಣ ಮಾಡಲಿಲ್ಲ. ಸಿನಿಮಾ ನಿಂತುಹೋಗಿದೆ.

  ಅಮೀಷಾ ನೀಡಿದ್ದ ಚೆಕ್ ಬೌನ್ಸ್ ಆಗಿದೆ

  ಅಮೀಷಾ ನೀಡಿದ್ದ ಚೆಕ್ ಬೌನ್ಸ್ ಆಗಿದೆ

  ಅಜಯ್ ಕುಮಾರ್ ಅವರು ತಮ್ಮ ಹಣ ವಾಪಸ್ ಕೇಳಿದ್ದಕ್ಕೆ ಬಹು ಸತಾಯಿಸಿದ ಅಮೀಷಾ ಪಟೇಲ್ ತಮ್ಮ ಹೆಸರಿನ ಚೆಕ್ ನೀಡಿದ್ದಾರೆ. ಆದರೆ ಆ ಚೆಕ್ ಸಹ ಬೌನ್ಸ್ ಆಗಿದೆ. ಹೀಗಾಗಿ ಅಜಯ್ ಕುಮಾರ್ ಅವರು ಅಮೀಷಾ ಪಟೇಲ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

  ಬಂಧನ ವಾರೆಂಟ್ ಸಹ ಹೊರಡಿಸಲಾಗಿತ್ತು

  ಬಂಧನ ವಾರೆಂಟ್ ಸಹ ಹೊರಡಿಸಲಾಗಿತ್ತು

  ವಿಚಾರಣೆ ನಡೆಸಿರುವ ನ್ಯಾಯಾಲಯ ಎರಡೂ ಪಕ್ಷಗಳವರು ಪ್ರಕರಣದ ಬಗ್ಗೆ ತಮ್ಮ ಲಿಖಿತ ಹೇಳಿಕೆಯನ್ನು ದಾಖಲಿಸುವಂತೆ ಹೇಳಿದ್ದು, ಎರಡು ವಾರದ ಕಾಲಾವಕಾಶ ನೀಡಿದೆ. ಇದೇ ಪ್ರಕರಣದಲ್ಲಿ 2019 ರಲ್ಲಿ ಅಮಿಷಾ ಪಟೇಲ್ ವಿರುದ್ಧ ರಾಂಚಿ ನ್ಯಾಯಾಲಯವು ಬಂಧನ ವಾರೆಂಟ್ ಹೊರಡಿಸಿತ್ತು. ನ್ಯಾಯಾಲಯಕ್ಕೆ ಹಾಜರಾದ ಅಮೀಷಾ ಪಟೇಲ್, ಆ ನಂತರ ಜಾಮೀನು ಪಡೆದುಕೊಂಡರು.

  ತೆಲುಗು-ತಮಿಳು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ

  ತೆಲುಗು-ತಮಿಳು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ

  ಅಮೀಷಾ ಪಟೇಲ್ ಅವರು 2000 ರಲ್ಲಿ ಬಿಡುಗಡೆ ಆದ 'ಕಹೋ ನಾ ಪ್ಯಾರ್ ಹೇ' ಸಿನಿಮಾ ಮೂಲಕ ಹೃತಿಕ್ ರ ರೋಷನ್ ಜೊತೆ ಸಿನಿಮಾ ರಂಗಕ್ಕೆ ಕಾಲಿಟ್ಟರು. ಆ ನಂತರ ಅವರು ಹಲವಾರು ಹಿಟ್ ಹಿಂದಿ ಸಿನಿಮಾಗಳಲ್ಲಿ ನಟಿಸಿದರು. ತೆಲುಗಿನಲ್ಲಿಯೂ ಸಹ ಪವನ್ ಕಲ್ಯಾಣ್, ಮಹೇಶ್ ಬಾಬು, ಜೂ ಎನ್‌ಟಿಆರ್ ಇನ್ನೂ ಕೆಲವು ಸ್ಟಾರ್ ನಟರೊಂದಿಗೆ ನಟಿಸಿದ್ದಾರೆ.

  Bigg Boss Kannada Season 8 : ಬಿಗ್ ಬಾಸ್ ಮನೆಗೆ ಹೋಗ್ತಿರೋ ರಾಜಕಾರಿಣಿಯ ಬಗ್ಗೆ ಹೇಳಿದ ಪರಮೇಶ್ವರ್ ಗುಂಡ್ಕಲ್
  English summary
  Cheating case registered against actress Ameesha Patel. Alleged that Ameesha Patel cheated 2.50 crore to Ajay Kumar Singh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X