ಅಕ್ರಮ ಹಣ ವರ್ಗಾವಣೆ ; ಜಾಕ್ವೆಲಿನ್ ಫರ್ನಾಂಡಿಸ್‌ ಗೆ ಬಂಧನದ ಭೀತಿ..?

ಶ್ರೀಲಂಕಾದಿಂದ 2009ರ ಆಸು-ಪಾಸಿನಲ್ಲಿ ಬಾಲಿವುಡ್ಡಿಗೆ ವಲಸೆ ಬಂದವರು ಜಾಕ್ವೆಲಿನ್ ಫರ್ನಾಂಡೀಸ್. ಅದ್ಭುತ ನಟನೆಯ ಜತೆಗೆ ತನ್ನ ಬ್ಯೂಟಿಯಿಂದಲೂ ಪಡ್ಡೆ ಹೈಕಳ ನಿದ್ದೆಗೆಡಿಸಿರುವ ಈ ನಟಿ ಅದ್ಯಾವ ಘಳಿಗೆಯಲ್ಲಿ ಆ ಸುಕೇಶ್ ಚಂದ್ರಶೇಖರ್ ಎಂಬ ಆಸಾಮಿಯ ಸಹವಾಸ ಮಾಡಿದ್ರೋ ಅವತ್ತೇ ಇವರ ಬದುಕಿನಲ್ಲಿ ಸಾಡೇಸಾತಿ ಶುರುವಾಗಿತ್ತು. ಇದಕ್ಕೆ ಕೈಗನ್ನಡಿ ಎಂಬಂತೆ ಜಾಕ್ವೆಲಿನ್ ಫರ್ನಾಂಡಿಸ್‌ ಅವರಿಗೆ ಜಾರಿ ನಿರ್ದೇಶನಾಲ ಮತ್ತೊಮ್ಮೆ ಸಮನ್ಸ್ ಜಾರಿ ಮಾಡಿದೆ. ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.

ಅಂದ್ಹಾಗೇ 200 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಸದ್ಯಕ್ಕೆ ಜೈಲಿನಲ್ಲಿರುವ ಸುಕೇಶ್​ ಚಂದ್ರಶೇಖರ್​, ಜಾಕ್ವೆಲಿನ್ ಫರ್ನಾಂಡೀಸ್‌ಗೆ ಅತ್ಯಾಪ್ತ. ಬಾಲಿವುಡ್‌ನವರ ಪ್ರಕಾರ ಈ ಸುಕೇಶ್ ಚಂದ್ರಶೇಖರ್ ಈ ಶ್ರೀಲಂಕಾ ಚೆಲುವೆಯ ಪ್ರಿಯಕರ ಕೂಡ ಹೌದು. ಇದಕ್ಕೆ ಪುರಾವೆ ಎನ್ನುವಂತೆ.. ಇವರು ಇಬ್ಬರ ಆತ್ಮೀಯವಾದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿವೆ.

money-laundering-case-jacqueline-fernandez-summoned-by-ed-for-the-6th-time-today-for-questioning

ಇಷ್ಟೇ ಅಲ್ಲದೇ ಜಾಕ್ವೆಲಿನ್‌ಗೆ ಸುಕೇಶ್ ಚಂದ್ರಶೇಖರ್ 5.71 ಕೋಟಿ ರೂಪಾಯಿ ಮೌಲ್ಯದ ಉಡುಗೊರೆ ನೀಡಿರುವ ಸುದ್ದಿ ಇದೆ. ಖುದ್ದು ಇಡೀ ಈ ಹಿಂದೆ ತನಿಖೆಯಲ್ಲಿ ಈ ವಿಚಾರ ಬಹಿರಂಗಪಡಿಸಿದೆ. ಇನ್ನೂ.. ಜಾಕ್ವೆಲಿನ್‌ಗೆ 52 ಲಕ್ಷ ರೂಪಾಯಿ ಮೌಲ್ಯದ ಕುದುರೆ, 9 ಲಕ್ಷ ರೂಪಾಯಿ ಮೌಲ್ಯದ ಪರ್ಷಿಯನ್ ಬೆಕ್ಕು ನೀಡಲಾಗಿದೆ. ಇದಲ್ಲದೇ ಜಾಕ್ವೆಲಿನ್ ಕುಟುಂಬ ಸದಸ್ಯರಿಗೆ ಸುಕೇಶ್ ಸಾಕಷ್ಟು ಹಣವನ್ನೂ ನೀಡಿದ್ದಾರೆ ಎಂಬ ಮಾತು ಕೂಡ ಇದೆ. ಸುಕೇಶ್ ಜೊತೆ ಜಾಕ್ವೆಲಿನ್ ಫರ್ನಾಂಡಿಸ್ ವೀಡಿಯೊ ಕರೆಗಳ ಮೂಲಕ ನಿರಂತರವಾಗಿ ಸಂಪರ್ಕದಲ್ಲಿದ್ದರು ಎಂಬ ಸುದ್ದಿಯೂ ಇದೆ.

ಈ ಎಲ್ಲ ಕಾರಣಗಳಿಂದ ಜಾಕ್ವೆಲಿನ್ ಈಗಾಗಲೇ ಐದು ಬಾರಿ ವಿಚಾರಣೆಯನ್ನು ಎದುರಿಸಿದ್ಧಾರೆ. ಇನ್ನೂ 2022ರಲ್ಲಿ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ, ತನಿಖಾ ಸಂಸ್ಥೆಯು ನಟಿಗೆ ಅಪರಾಧದ ಪೂರ್ವಾಪರಗಳ ಬಗ್ಗೆ ತಿಳಿದಿದ್ದರೂ ಸಹ ಚಂದ್ರಶೇಖರ್ ನೀಡಿದ ಬೆಲೆಬಾಳುವ ವಸ್ತುಗಳು, ಆಭರಣಗಳು ಮತ್ತು ದುಬಾರಿ ಉಡುಗೊರೆಗಳನ್ನು ತೆಗೆದುಕೊಳ್ಳುತ್ತಿದ್ದರು ಮತ್ತು ಬಳಸಿಕೊಳ್ಳುತ್ತಿದ್ದರು ಎಂದು ಇಡಿ ಹೇಳಿಕೊಂಡಿದೆ.ಆದರೆ ಪ್ರತಿ ಬಾರಿ ತಾನು ನಿರಪರಾಧಿ ಮತ್ತು ಚಂದ್ರಶೇಖರ್‌ ಅವರ ಅಪರಾಧ ಚಟುವಟಿಕೆಗಳ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಹೇಳುತ್ತಲೇ ಬಂದಿದ್ದಾರೆ. ಆದರೂ ಇಡಿಗೆ ಜಾಕ್ವೆಲಿನ್ ಮೇಲೆ ಅನುಮಾನ ಇದ್ದೇ ಇದೆ. ಹೀಗಾಗಿಯೇ ಇನ್ನೊಮ್ಮೆ ಜಾಕ್ವೆಲಿನ್ ಫರ್ನಾಂಡೀಸ್‌ ಅವರಿಗೆ ಇಂದು ವಿಚಾರಣೆಗೆ ಹಾಜರಾಗುವಂತೆ ಇಡಿ ಸೂಚನೆ ನೀಡಿದೆ.

money-laundering-case-jacqueline-fernandez-summoned-by-ed-for-the-6th-time-today-for-questioning

ರಾನ್‌ಬಾಕ್ಸಿ ಸಂಸ್ಥೆಯ ಶಿವಿಂದರ್ ಸಿಂಗ್ ಅವರು ಬೇರೊಂದು ಹಣ ಅವ್ಯವಹಾರ ಪ್ರಕರಣದಲ್ಲಿ 2019 ರಲ್ಲಿ ಜೈಲು ಸೇರಿದ್ದರು. ಅವರನ್ನು ಬಿಡಿಸಿಕೊಡುವ ಭರವಸೆ ನೀಡಿದ ಸುಕೇಶ್ ಚಂದ್ರಶೇಖರ್, ಶಿವಿಂದರ್ ಅವರ ಪತ್ನಿ ಅದಿತಿ ಸಿಂಗ್ ಅವರಿಂದ 200 ಕೋಟಿ ರೂಪಾಯಿ ಸುಲಿಗೆ ಮಾಡಿದ್ದರು ಎಂಬ ಆರೋಪ ಸುಕೇಶ್ ಚಂದ್ರಶೇಖರ್ ಮೇಲೀದೆ. ಇನ್ನೂ.. 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಕೇಶ್ ಚಂದ್ರಶೇಖರ್ ಈಗಾಗಲೇ ತಿಹಾರ್ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ಧಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X