For Quick Alerts
  ALLOW NOTIFICATIONS  
  For Daily Alerts

  ಕೇವಲ ರಕ್ಕಮ್ಮಾ ಅಲ್ಲ..ಇನ್ನೂ ನಾಲ್ವರು ನಟಿಯರ ಜೊತೆ ಸುಕೇಶ್​ ಲಿಂಕ್​!

  |

  200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣ ಬಾಲಿವುಡ್​ ಚಿತ್ರರಂಗದಲ್ಲಿ ಸದ್ಯ ಭಾರೀ ಚರ್ಚೆಗೆ ಗ್ರಾಸವಾದ ವಿಚಾರವಾಗಿದೆ. ಪ್ರಕರಣ ಬೆಳಕಿಗೆ ಬಂದ ದಿನದಿಂದ ಒಂದೊಂದೆ ಹೊಸ ವಿಚಾರಗಳು ಬೆಳಕಿಗೆ ಬರುತ್ತಿದೆ. ಪ್ರಕರಣದ ಪ್ರಮುಖ ಆರೋಪಿ ಸುಕೇಶ್​ ಚಂದ್ರಶೇಖರ್​ನನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿದ್ದು, ಇನ್ನಷ್ಟು ಕುತೂಹಲಕಾರಿ ವಿಚಾರಗಳು ಬೆಳಕಿಗೆ ಬಂದಿದೆ.

  ಪ್ರಕರಣದ ಪ್ರಮುಖ ಆರೋಪಿಯಾದ ಸುಕೇಶ್​ಗೆ ಬಾಲಿವುಡ್​ ತಾರೆಯ ನಂಟಿರುವ ವಿಚಾರ ಪ್ರಕರಣದ ತನಿಖೆಯ ಮೊದಲ ಹಂತದಲ್ಲೇ ಬಹಿರಂಗಗೊಂಡಿತ್ತು. ಮೊದಲು ವಿಕ್ರಾಂತ್​ ರೋಣ ಸಿನಿಮಾ ರಕ್ಕಮ್ಮ ಜಾಕ್ವೆಲಿನ್​ ಫರ್ನಾಂಡಿಸ್​ ಹಾಗೂ ನಟಿ ನೋರಾ ಫತೇಹಿ ಆರೋಪಿಯೊಂದಿಗೆ ಸಂಪರ್ಕದಲ್ಲಿದ್ದು, ಆತನಿಂದ ದುಬಾರಿ ಉಡುಗೊರೆಯನ್ನು ಪಡೆದಿದ್ದಾರೆ ಎಂದು ತಿಳಿದು ಬಂದಿತ್ತು. ಆದರೆ ತನಿಖೆ ಮುಂದುವರಿದಿದ್ದು, ಇನ್ನಷ್ಟು ತಾರೆಯರ ಹೆಸರು ಬಹಿರಂಗವಾಗಿದೆ.

  ಆರೋಪಿ ಸುಕೇಶ್​ ಜೊತೆ ನಂಟು ಹೊಂದಿರುವ ಸ್ಟಾರ್​ ನಟಿಯರ ಪಟ್ಟಿ ಚಿಕ್ಕದೇನಲ್ಲ. ಪ್ರಕರಣದಲ್ಲಿ ಇನ್ನೂ ನಾಲ್ವರು ನಾಯಕಿಯರ ಹೆಸರು ತಳುಕು ಹಾಕಿಕೊಂಡಿದೆ. ನಿಕ್ಕಿ ತಾಂಬೋಲಿ, ಚಾಹತ್​ ಖನ್ನಾ, ಸೋಫಿಯಾ ಸಿಂಗ್​ ಮತ್ತು ಅರುಷಾ ಪಾಟೀಲ್ ​ ಹೆಸರು ಕೇಳಿಬಂದಿದೆ. ಈ ನಟಿಯರು ಆರೋಪಿ ಸುಕೇಶ್​ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಆತನಿಂದ ದುಬಾರಿ ಉಡುಗೊರೆಗಳನ್ನು ಪಡೆಯುತ್ತಿದ್ದರು ಎಂದು ವರದಿಯಾಗಿದೆ.

  ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ನಾಲ್ವರು ನಟಿಯರು ಆರೋಪಿಯಿಂದ ಕೇವಲ ಉಡುಗೊರೆಯನ್ನಷ್ಟೇ ಅಲ್ಲದೇ, ಹಣ ವನ್ನು ಸಹ ಪಡೆದಿರಬಹದು, 200 ಕೋಟಿ ರೂ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿರಬಹುದು ಎನ್ನುವ ಅನುಮಾನ ವ್ಯಕ್ತವಾಗಿದೆ. ಇನ್ನು ನಟಿ ಜಾಕ್ವೆಲಿನ್​ ಫರ್ನಾಂಡಿಸಿ ವೃತ್ತಿ ಜೀವನದಲ್ಲಿ ಇಂದೊಂದು ಪ್ರಕರಣ ಕಪ್ಪು ಚುಕ್ಕೆಯಾಗಿದ್ದು, ನಟಿ ಅನೇಕ ಬಾರಿ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗಿದ್ದಾರೆ.

  ಇನ್ನು ಬಾಲಿವುಡ್​ ಇಂತಹ ಪ್ರಕರಣಗಳು ಹೊಸದೇನಲ್ಲ. ಬಾಲಿವುಡ್​ ನಟಿಯರು ಅನೇಕ ಪ್ರಕರಣದ ಆರೋಪಿಗಳ ಜೊತೆ ಸಂಪರ್ಕದಲ್ಲಿರುವುದು ಸರ್ವೇ ಸಾಮಾನ್ಯವಾಗಿದೆ. ಈ ಹಿಂದೆ ಭೂಗತ ಪಾತಕಿ ಅಬು ಸಲೇಂ ಸಂಪರ್ಕದಲ್ಲಿದ್ದ ಕಾರಣ ನಟಿ ಮೋನಿಕಾ ಬೇಡಿ ಅವರನ್ನು ಬಂಧಿಸಲಾಗಿತ್ತು.

  English summary
  More actress on list who received gift from money laundering case accuesd suresh.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X