ಸಲ್ಮಾನ್ ಖಾನ್ ಅನ್ನು ಮೀರಿಸಿದ ನಿಜಜೀವನ ನಾಯಕ ಸೋನು ಸೂದ್
ಸೋನು ಸೂದ್, ಸಿನಿಮಾಗಳಲ್ಲಿ ಬಹುತೇಕ ವಿಲನ್ ರೋಲ್‌ಗಳಲ್ಲಿಯೇ ಕಾಣಿಸಿಕೊಳ್ಳುತ್ತಾರೆ. ಸಿನಿಮಾಗಳಲ್ಲಿ ಸಾಮಾನ್ಯವಾಗಿ ಅವರು ಬ್ಯಾಡ್‌ಮ್ಯಾನ್ ಆದರೆ ನಿಜಜೀವನದಲ್ಲಿ ಅಪ್ಪಟ ಚಿನ್ನದ ಹೃದಯದ ವ್ಯಕ್ತಿ.
ಈ ಕೊರೊನಾ ಸಂಕಷ್ಟದ ಸಮಯದಲ್ಲಿ ಕಾರ್ಮಿಕರಿಗೆ, ಬಡವರಿಗೆ, ಕೊರೊನಾದಿಂದ ಬಾಧಿತರಾದವರಿಗೆ ಸೋನು ಸೂದ್ ಸ್ಪಂದಿಸಿರುವ, ಸ್ಪಂದಿಸಿರುವ ರೀತಿ ಕೋಟ್ಯಂತರ ಭಾರತೀಯರ ಹೃದಯ ಗೆದ್ದಿದೆ.
ಸೋನು ಸೂದ್ ಮೇಲೆ ಪ್ರೀತಿಯ ಮಹಾಮಳೆಯನ್ನೇ ಜನರು ಸುರಿಸುತ್ತಿದ್ದಾರೆ. ಸೋನು ಸೂದ್ ಸಹಾಯ ಪಡೆದ ಕಾರ್ಮಿಕರು ತಮ್ಮ ಮಕ್ಕಳಿಗೆ ಅವರ ಹೆಸರನ್ನೇ ಇಡುತ್ತಿದ್ದಾರೆ. ಸೋನು ಸೂದ್ ಪ್ರತಿಮೆ ನಿರ್ಮಿಸುವ ಮಾತುಗಳೂ ಸಹ ಅಲ್ಲಲ್ಲಿ ಕೇಳಿಬರುತ್ತಿವೆ.

ಸಲ್ಮಾನ್ ಖಾನ್‌ಗಿಂತಲೂ ಸೋನು ಸೂದ್ ಖ್ಯಾತರು!
ಸೋನು ಸೂದ್ ಯಾವ ಮಟ್ಟಕ್ಕೆ ಖ್ಯಾತರಾಗಿಬಿಟ್ಟಿದ್ದಾರೆಂದರೆ ಅವರು ಭಾರತದ ಜನಪ್ರಿಯ ಸಿನಿಮಾ ಸ್ಟಾರ್ ಸಲ್ಮಾನ್ ಖಾನ್ ಅವರನ್ನೇ ಜನಪ್ರಿಯತೆಯಲ್ಲಿ ಹಿಂದಿಕ್ಕಿಬಿಟ್ಟಿದ್ದಾರೆ. ಸಲ್ಮಾನ್ ಖಾನ್‌ಗಿಂತಲೂ ಹೆಚ್ಚು ಸೋನು ಸೂದ್ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ ಭಾರತೀಯರು.

ಸೋನು ಸೂದ್ ಬಗ್ಗೆ ಹುಡುಕಾಟ ಹೆಚ್ಚು
ಗೂಗಲ್‌ನ ಹೊಸ ವರದಿ ಪ್ರಕಾರ. ಕಳೆದೆರಡು ವಾರದಲ್ಲಿ ಭಾರತೀಯರು ಅತಿ ಹೆಚ್ಚು ಹುಡುಕಾಟ ನಡೆಸಿರುವ ಸಿನಿಮಾ ನಟ ಸೋನು ಸೂದ್. ಸಲ್ಮಾನ್ ಖಾನ್‌ಗಿಂತಲೂ ಹೆಚ್ಚು ಸೋನು ಸೂದ್ ಬಗ್ಗೆ ಹುಡುಕಿದ್ದಾರೆ ಭಾರತೀಯರು.

ಸೋನು ಸೂದ್ ಟಾಪ್‌ನಲ್ಲಿದ್ದಾರೆ
ಗೂಗಲ್ ಟ್ರೆಂಡ್ಸ್‌ನಲ್ಲಿ ಸೋನು ಸೂದ್ ಟಾಪ್‌ನಲ್ಲಿದ್ದಾರೆ. ಸಲ್ಮಾನ್ ಖಾನ್ ಸಹ ಟ್ರೆಂಡ್‌ನಲ್ಲಿ ಇದ್ದಾರಾದರೂ ಸೋನು ಸೂದ್ ಗೆ ಹೋಲಿಸಿಕೊಂಡರೆ ಕಡಿಮೆಯೇ. ಸೋನು ಸೂದ್ ಬಗೆಗಿನ ಸುದ್ದಿಯನ್ನೇ ಜನರು ಗೂಗಲ್‌ನಲ್ಲಿ ಹೆಚ್ಚು ಹುಡುಕಾಟ ನಡೆಸಿದ್ದಾರೆ.

ನಿಜ ಜೀವನದ ಹೀರೋ ಆದ ಸೋನು ಸೂದ್
ಸಲ್ಮಾನ್ ಖಾನ್ ಸಿನಿಮಾ, ಹಾಡು, ಗರ್ಲ್‌ಫ್ರೆಂಡ್ ಸಂಬಂಧಿತ ಸುದ್ದಿಗೆ ಹುಡುಕಾಟ ನಡೆಸಿರಬಹುದು ಆದರೆ ಸೋನು ಸೂದ್ ನಿಜ ಜೀವನದಲ್ಲಿಹೀರೋ ಆಗಿ ಮೇಲೆದ್ದಿದ್ದಾರೆ. ಹಾಗಾಗಿ ಅವರ ಬಗ್ಗೆ ಹೆಚ್ಚಿನ ಹುಡುಕಾಟ ಗೂಗಲ್‌ನಲ್ಲಿ ನಡೆದಿದೆ.

ಯಾರ ಸಿನಿಮಾ ನೋಡುತ್ತೀರಿ?
ಬಾಲಿವುಡ್ ನಿರ್ದೇಶಕ, ನಟ ಕಮಲ್ ಆರ್ ಖಾನ್ ಪೋಲ್ ಒಂದನ್ನು ನಡೆಸಿದರು. ಸೋನು ಸೂದ್ ಮತ್ತು ಸಲ್ಮಾನ್ ಖಾನ್ ಇಬ್ಬರ ಸಿನಿಮಾ ಒಂದೇ ದಿನ ಬಿಡುಗಡೆ ಆದರೆ ಯಾರ ಸಿನಿಮಾ ನೋಡುತ್ತೀರೆಂದು, 65% ಜನ ಹೇಳಿದ್ದು ಸೋನು ಸೂದ್ ಸಿನಿಮಾ ನೋಡುತ್ತೇವೆಂದು.


Click it and Unblock the Notifications











