ಬಾಲಿವುಡ್‌ ಪ್ರಿಯರಿಗೆ ಈ ಸುದ್ದಿ: 2021ರಲ್ಲಿ ತೆರೆಗೆ ಬರಲಿರುವ ಚಿತ್ರಗಳ ಬಿಡುಗಡೆ ದಿನಾಂಕ

ಕೊರೊನಾ ವೈರಸ್ ಕಾರಣದಿಂದ 2020ರಲ್ಲಿ ಹೆಚ್ಚು ಸಿನಿಮಾಗಳು ಚಿತ್ರಮಂದಿರಕ್ಕೆ ಬಂದಿಲ್ಲ. ಅಲ್ಲೊಂದು ಇಲ್ಲೊಂದು ಒಟಿಟಿಯಲ್ಲಿ ಬಿಡುಗಡೆಯಾಗಿದ್ದವು. ಈಗ ಥಿಯೇಟರ್‌ಗಳಲ್ಲಿ 100 ಪರ್ಸೆಂಟ್ ಅವಕಾಶ ಸಿಕ್ಕಿದೆ. ಹೀಗಾಗಿ, ಒಂದೊಂದೆ ಚಿತ್ರಗಳು ಪ್ರೇಕ್ಷಕರ ಮುಂದೆ ಬರಲು ಸಾಲುಗಟ್ಟಿ ನಿಂತಿವೆ.

2021ನೇ ವರ್ಷಕ್ಕೆ ಬಾಲಿವುಡ್‌ನ ದೊಡ್ಡ ದೊಡ್ಡ ಸಿನಿಮಾಗಳು ಸೇರಿದಂತೆ ಹಲವು ಚಿತ್ರಗಳು ರಿಲೀಸ್ ದಿನಾಂಕವನ್ನು ಕಾಯ್ದಿರಿಸಿದೆ. ಮಾರ್ಚ್ ತಿಂಗಳಿಂದ ಡಿಸೆಂಬರ್‌ವರೆಗೂ ನಿರಂತರವಾಗಿ ಬಿಟೌನ್ ಸಿನಿಮಾಗಳು ಚಿತ್ರಮಂದಿರಕ್ಕೆ ಬರ್ತಿದ್ದು, ಬಾಲಿವುಡ್ ಪ್ರೇಕ್ಷಕರಿಗೆ ಭರಪೂರ ಮನರಂಜನೆ ಸಿಗಲಿದೆ. ಹಾಗಾದ್ರೆ, 2021ರಲ್ಲಿ ತೆರೆಗೆ ಬರುತ್ತಿರುವ ಹಿಂದಿ ಸಿನಿಮಾಗಳು ಯಾವುದು ಮತ್ತು ಯಾವ ದಿನಾಂಕಕ್ಕೆ ಬಿಡುಗಡೆಯಾಗುತ್ತಿವೆ? ಮುಂದೆ ಓದಿ....

ಮಾರ್ಚ್‌ನಲ್ಲಿ 'ಸೈನಾ'

ಮಾರ್ಚ್‌ನಲ್ಲಿ 'ಸೈನಾ'

* ಜಾನ್ ಅಬ್ರಹಾಂ, ಇಮ್ರಾನ್ ಹಶ್ಮಿ, ಸುನೀಲ್ ಶೆಟ್ಟಿ, ಕಾಜಲ್ ಅಗರ್‌ವಾಲ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಮುಂಬೈ ಸಾಗ' ಸಿನಿಮಾ ಮಾರ್ಚ್ 19ರಂದು ಬಿಡುಗಡೆಯಾಗುತ್ತಿದೆ.

* ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರ ಬಯೋಪಿಕ್ ಚಿತ್ರ 'ಸೈನಾ' ಮಾರ್ಚ್ 26 ರಂದು ರಿಲೀಸ್ ಆಗುತ್ತಿದೆ. ಸೈನಾ ಪಾತ್ರದಲ್ಲಿ ಪರಿಣಿತಿ ಚೋಪ್ರಾ ನಟಿಸಿದ್ದಾರೆ.

ಏಪ್ರಿಲ್‌ನಲ್ಲಿ ತಲೈವಿ

ಏಪ್ರಿಲ್‌ನಲ್ಲಿ ತಲೈವಿ

* ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಬಯೋಪಿಕ್ ಸಿನಿಮಾ 'ತಲೈವಿ' ಏಪ್ರಿಲ್ 29 ರಂದು ಚಿತ್ರಮಂದಿರಕ್ಕೆ ಬರುತ್ತಿದೆ. ಕಂಗನಾ ರಣಾವತ್ ಈ ಚಿತ್ರದಲ್ಲಿ ಜಯಲಲಿತಾ ಪಾತ್ರ ನಿರ್ವಹಿಸಿದ್ದಾರೆ.

* ಅಮಿತಾಭ್ ಬಚ್ಚನ್ ಮತ್ತು ಇಮ್ರಾನ್ ಹಶ್ಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ಚೆಹ್ರೆ' ಸಿನಿಮಾ ಏಪ್ರಿಲ್ 9 ರಂದು ಥಿಯೇಟರ್‌ಗೆ ಬರ್ತಿದೆ.

ಮೇ ತಿಂಗಳಲ್ಲಿ ಸಲ್ಮಾನ್ ಖಾನ್

ಮೇ ತಿಂಗಳಲ್ಲಿ ಸಲ್ಮಾನ್ ಖಾನ್

* ಜಾನ್ ಅಬ್ರಾಹಂ ಅಭಿನಯದ 'ಸತ್ಯಮೇವ ಜಯತೆ-2' ಸಿನಿಮಾ ಮೇ 14 ರಂದು ರಿಲೀಸ್ ಆಗುತ್ತಿದೆ.

* ಅಕ್ಷಯ್ ಕುಮಾರ್ ನಟನೆಯ 'ಬೆಲ್ ಬಾಟಮ್' ಸಿನಿಮಾ ಮೇ 28 ರಂದು ಬಿಡುಗಡೆಯಾಗುತ್ತಿದೆ.

* ಸಲ್ಮಾನ್ ಖಾನ್ ನಟನೆಯ 'ರಾಧೇ' ಸಿನಿಮಾ ಈದ್ ಹಬ್ಬದ ಪ್ರಯುಕ್ತ ರಿಲೀಸ್ ಮಾಡಲಾಗುವುದು ಎಂಬ ಸುದ್ದಿ ಇದೆ. ಇದುವರೆಗೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ.

ಜೂನ್‌ನಲ್ಲಿ 'ವಿಶ್ವಕಪ್'

ಜೂನ್‌ನಲ್ಲಿ 'ವಿಶ್ವಕಪ್'

* ರಣ್ವೀರ್ ಸಿಂಗ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ '83' ಸಿನಿಮಾ (1983ರ ವಿಶ್ವಕಪ್ ಕಥೆ) ಜೂನ್ 4 ರಂದು ತೆರೆಗೆ ಬರ್ತಿದೆ.

* ರಣ್ಬೀರ್ ಕಪೂರ್, ಸಂಜಯ್ ದತ್, ವಾಣಿ ಕಪೂರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಶಂಶೇರಾ' ಚಿತ್ರ ಜೂನ್ 25 ರಂದು ರಿಲೀಸ್ ಆಗುತ್ತಿದೆ.

ಜುಲೈನಲ್ಲಿ ಕೆಜಿಎಫ್ ಚಾಪ್ಟರ್ 2

ಜುಲೈನಲ್ಲಿ ಕೆಜಿಎಫ್ ಚಾಪ್ಟರ್ 2

* ಮುಂಬೈ ದಾಳಿಯಲ್ಲಿ ಹುತಾತ್ಮರಾದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜೀವನ ಆಧರಿಸಿದ ಸಿನಿಮಾ 'ಮೇಜರ್' ಜುಲೈ 7 ರಂದು ರಿಲೀಸ್ ಆಗುತ್ತಿದೆ.

* ರಾಕಿಂಗ್ ಸ್ಟಾರ್ ಯಶ್ ನಟನೆಯ 'ಕೆಜಿಎಫ್ ಚಾಪ್ಟರ್-2' ಸಿನಿಮಾ ಜುಲೈ 18 ರಂದು ಬಿಡುಗಡೆಯಾಗುತ್ತಿದೆ.

* ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಕಾಣಿಸಿಕೊಂಡಿರುವ 'ರಾಧೇ ಶ್ಯಾಮ್' ಸಿನಿಮಾ ಜುಲೈ 30ರಂದು ಚಿತ್ರಮಂದಿರಕ್ಕೆ ಬರಲಿದೆ.

* ಆಲಿಯಾ ಭಟ್ ನಟನೆಯ 'ಗಂಗುಬಾಯಿ ಕಥಿಯಾವಾಡಿ' ಸಿನಿಮಾ ಜುಲೈ 30 ರಂದು ರಿಲೀಸ್ ಆಗಲಿದೆ.

ಆಗಸ್ಟ್‌ನಲ್ಲಿ 'ಪುಷ್ಪ'

ಆಗಸ್ಟ್‌ನಲ್ಲಿ 'ಪುಷ್ಪ'

* ಅಕ್ಷಯ್ ಕುಮಾರ್, ಧನುಶ್ ಮತ್ತು ಸಾರಾ ಅಲಿ ಖಾನ್ ಅಭಿನಯದ 'ಅಟ್ರಂಗಿ ರೆ' ಸಿನಿಮಾ ಆಗಸ್ಟ್ 6 ರಂದು ತೆರೆಕಾಣಲಿದೆ.

* ಅಲ್ಲು ಅರ್ಜುನ್ ಅಭಿನಯದ 'ಪುಷ್ಪಾ' ಸಿನಿಮಾ ಆಗಸ್ಟ್ 13 ರಂದು ಹಿಂದಿಯಲ್ಲಿ ರಿಲೀಸ್ ಆಗಲಿದೆ.

ಅಕ್ಟೋಬರ್‌ನಲ್ಲಿ ಆರ್‌ಆರ್‌ಆರ್‌

ಅಕ್ಟೋಬರ್‌ನಲ್ಲಿ ಆರ್‌ಆರ್‌ಆರ್‌

* ಅಕ್ಟೋಬರ್ 1ಕ್ಕೆ ಕಂಗನಾ ರಣಾವತ್ ನಟನೆಯ 'ಧಾಕಡ್' ಸಿನಿಮಾ ಬಿಡುಗಡೆಯಾಗುತ್ತಿದೆ.

* ಅಕ್ಟೋಬರ್ 13ಕ್ಕೆ ರಾಜಮೌಳಿ ನಿರ್ದೇಶನದ 'ಆರ್ ಆರ್ ಆರ್' ಚಿತ್ರ ಹಿಂದಿಯಲ್ಲೂ ತೆರೆಗೆ ಬರ್ತಿದೆ.

* ಅಕ್ಟೋಬರ್ 15 ರಂದು ಅಜಯ್ ದೇವಗನ್ ಅಭಿನಯದ 'ಮೈದಾನ್' ಸಿನಿಮಾ ರಿಲೀಸ್ ಆಗುತ್ತಿದೆ.

Recommended Video

Kichcha Sudeep's 25Y Celebration : ಬೆಳ್ಳಿಹಬ್ಬದ ಸಂಭ್ರಮದಲ್ಲಿ ಶಿವಣ್ಣ,ರವಿಚಂದ್ರನ್ ಬಗ್ಗೆ ಕಿಚ್ಚ ಹೇಳಿದ್ದೇನು
ನವೆಂಬರ್‌ನಲ್ಲಿ 'ಪೃಥ್ವಿರಾಜ್'

ನವೆಂಬರ್‌ನಲ್ಲಿ 'ಪೃಥ್ವಿರಾಜ್'

* ಅಕ್ಷಯ್ ಕುಮಾರ್ ನಟಿಸಿರುವ ಐತಿಹಾಸಿಕ ಚಿತ್ರ 'ಪೃಥ್ವಿರಾಜ್' ನವೆಂಬರ್ 5ಕ್ಕೆ ಥಿಯೇಟರ್‌ಗೆ ಬರ್ತಿದೆ.

* ಶಾಹೀದ್ ಕಪೂರ್ ಅಭಿನಯದಲ್ಲಿ ತಯಾರಾಗಿರುವ 'ಜೆರ್ಸಿ' ಸಿನಿಮಾನೂ ನವೆಂಬರ್ 5ರಂದು ರಿಲೀಸ್ ಆಗುತ್ತಿದೆ.

* ಟೈಗರ್ ಶ್ರಾಫ್, ಕೃತಿ ಸನೂನ್ ಅಭಿನಯದ 'ಹೀರೋಪಂತಿ-2' ಸಿನಿಮಾ ಡಿಸೆಂಬರ್ 3 ರಂದು ಬಿಡುಗಡೆಯಾಗಲಿದೆ.

* ಅಮೀರ್ ಖಾನ್ ನಟನೆಯ 'ಲಾಲ್‌ ಸಿಂಗ್ ಚಡ್ಡಾ' ಸಿನಿಮಾ ಡಿಸೆಂಬರ್ 25ಕ್ಕೆ ತೆರೆಕಾಣಬಹುದು. ಆದರೆ, ಅಧಿಕೃತವಾಗಿ ಇನ್ನು ಘೋಷಣೆಯಾಗಿಲ್ಲ.

More from Filmibeat

English summary
Here is a list of Bollywood films to be released in 2021.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X