ಗೂಗಲ್ ನಲ್ಲಿ ಮೋದಿ, ಶಾರೂಖ್ ಹಿಂದಿಕ್ಕಿದ ಸನ್ನಿ ಲಿಯೋನ್
2019ರ ಆಗಸ್ಟ್ ತಿಂಗಳು ಮುಗಿಯುತ್ತಿದೆ. ಇಲ್ಲಿಯವರೆಗೂ ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಆದವರು ಯಾರು ಎಂಬುದು ಸದ್ಯಕ್ಕೆ ಟ್ರೆಂಡ್ ಆಗಿದೆ. ಅತಿ ಹೆಚ್ಚು ಸರ್ಚ್ ಆದ ಭಾರತೀಯ ಸೆಲೆಬ್ರಿಟಿ ಯಾರು ಎಂದಾಕ್ಷಣ ಬಹುಶಃ ಪ್ರಧಾನಿ ನರೇಂದ್ರ ಮೋದಿ ನೆನಪಾಗುವುದು.
ಸಹಜವಾಗಿ ನರೇಂದ್ರ ಮೋದಿ ಅವರು ಹೆಚ್ಚು ಸುದ್ದಿಯಲ್ಲಿರುತ್ತಾರೆ. ಈ ವರ್ಷವೇ ಕೇಂದ್ರದಲ್ಲಿ ಚುನಾವಣೆ ನಡೆದಿತ್ತು. ದೇಶಾದ್ಯಂತ ಮೋದಿ ಬೃಹತ್ ಸಮಾವೇಶಗಳನ್ನ ನಡೆಸಿದ್ದರು. ಅತಿ ಹೆಚ್ಚು ಸೀಟ್ ಪಡೆದು ಮತ್ತೊಮ್ಮೆ ಪ್ರಧಾನಿಯಾದರು.
ಬಟ್, ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಆದ ಭಾರತೀಯ ಸೆಲೆಬ್ರಿಟಿ ಪಟ್ಟಿಯಲ್ಲಿ ಮೋದಿ ಮೊದಲ ಸ್ಥಾನದಲ್ಲಿಲ್ಲ. ಮೋದಿ ಬಿಟ್ಟರೇ ಬಹುಶಃ ಬಾಲಿವುಡ್ ಸ್ಟಾರ್ ಗಳು ಮುಂಚೂಣಿಯಲ್ಲಿರುತ್ತಾರೆ. ಸಲ್ಮಾನ್ ಖಾನ್, ಶಾರೂಖ್ ಖಾನ್ ಅಥವಾ ಪ್ರಿಯಾಂಕಾ ಚೋಪ್ರಾ ಇರಬಹುದು ಎಂದುಕೊಂಡಿದ್ದರೆ ಅದೂ ಕೂಡ ತಪ್ಪು.

2019ರ ಆಗಸ್ಟ್ ತಿಂಗಳವರೆಗೂ ಗೂಗಲ್ ನಲ್ಲಿ ಹೆಚ್ಚು ಸರ್ಚ್ ಆದವರ ಪೈಕಿ ಮೊದಲ ಸ್ಥಾನದಲ್ಲಿರುವುದು ಸನ್ನಿ ಲಿಯೋನ್. ಹೌದು, ಕಳೆದ ಬಾರಿಯೂ ನಂಬರ್ ವನ್ ಸ್ಥಾನದಲ್ಲಿದ್ದ ಸನ್ನಿ ಲಿಯೋನ್ ಈ ಸಲವೂ ಅದೇ ಸ್ಥಾನವನ್ನ ಕಾಯ್ದುಕೊಂಡಿದ್ದಾರೆ.
ಅಸ್ಸಾಂ, ಮಣಿಪುರ್ ಭಾಗದಲ್ಲಿ ಸನ್ನಿ ಲಿಯೋನ್ ಹೆಚ್ಚು ಹುಡುಕಲ್ಪಟ್ಟಿದ್ದಾರೆ ಎನ್ನಲಾಗಿದೆ. ಈ ವಿಷ್ಯ ತಿಳಿದ ಸನ್ನಿ ಲಿಯೋನ್ ಸಂತಸ ವ್ಯಕ್ತಪಡಿಸಿದ್ದಾರೆ. ''ಈ ವಿಷ್ಯ ನನಗೆ ನನ್ನ ಅಭಿಮಾನಿಗಳಿಂದ ತಿಳಿಯಿತು. ನಿರಂತರವಾಗಿ ನನಗಾಗಿ ಇರುವ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ. ಇದು ಅದ್ಭುತ ಅನುಭವ'' ಎಂದಿದ್ದಾರೆ.
ಬಹುಭಾಷೆಯಲ್ಲಿ ತಯಾರಾಗುತ್ತಿರುವ ವೀರಾಮಹಾದೇವಿ, ಹೆಲೇನ್ ಮತ್ತು ಕೋಕಾ ಕೋಲಾ ಎಂಬ ಚಿತ್ರಗಳಲ್ಲಿ ಸನ್ನಿ ನಟಿಸುತ್ತಿದ್ದಾರೆ. ಈ ಕಡೆ ಉತ್ತರ ಕರ್ನಾಟಕದ ನೆರೆ ಸಂತ್ರಸ್ಥರಿಗೆ ಸುಮಾರು 2 ಕೋಟಿ ನೆರವು ನೀಡಿದ್ದಾರೆ ಎನ್ನಲಾಗಿದೆ. ಆದ್ರೆ, ಈ ಬಗ್ಗೆ ಖಚಿತ ಮಾಹಿತಿ ಇಲ್ಲ.


Click it and Unblock the Notifications











