twitter
    For Quick Alerts
    ALLOW NOTIFICATIONS  
    For Daily Alerts

    ಒಂದೇ ಒಂದು ಮತದಿಂದ ಆಸ್ಕರ್ ಕಳೆದುಕೊಂಡಿತ್ತು 'ಮದರ್‌ ಇಂಡಿಯಾ'

    |

    1957 ರಿಂದ ಆಸ್ಕರ್ ಪ್ರಶಸ್ತಿಯಲ್ಲಿ ಭಾರತ ಸಿನಿಮಾಗಳು ಭಾಗವಹಿಸುತ್ತಿವೆ. ಇದುವರೆಗೂ ಭಾರತದ ಯಾವುದೇ ಸಿನಿಮಾಗಳು ಆಸ್ಕರ್ ಪ್ರಶಸ್ತಿ ಗೆದ್ದಿಲ್ಲ. ಈಗ 93ನೇ ಸಾಲಿನ ಅಕಾಡೆಮಿ ಅವಾರ್ಡ್‌ನಲ್ಲಿ ಭಾರತದಿಂದ ಅಧಿಕೃತವಾಗಿ 'ಜಲ್ಲಿಕಟ್ಟು' ಸಿನಿಮಾ ವಿದೇಶಿ ಭಾಷೆ ವಿಭಾಗದಲ್ಲಿ ನಾಮಿನೇಟ್ ಆಗಿತ್ತು. ಆದರೆ, ಅಂತಿಮ ಹದಿನೈದರ ಪಟ್ಟಿಯಿಂದ 'ಜಲ್ಲಿಕಟ್ಟು' ಹೊರಬಿದ್ದಿದೆ.

    2019ರಲ್ಲಿ 'ಗಲ್ಲಿ ಬಾಯ್' ಸಿನಿಮಾ ಭಾರತದಿಂದ ಆಸ್ಕರ್‌ ಪ್ರಶಸ್ತಿ ಸುತ್ತಿ ಪ್ರವೇಶ ಪಡೆದುಕೊಂಡಿತ್ತು. ಈ ಚಿತ್ರವೂ ಅಂತಿಮ ಪಟ್ಟಿಗೆ ಆಯ್ಕೆಯಾಗಲೇ ಇಲ್ಲ. 64 ವರ್ಷಗಳಿಂದ ಆಸ್ಕರ್ ಗೆಲ್ಲದ ಭಾರತಕ್ಕೆ ಒಮ್ಮೆ ಆ ಅವಕಾಶ ಸಿಕ್ಕಿತ್ತು. ದುರಾದೃಷ್ಟವಶಾತ್ ಒಂದೇ ಒಂದು ಮತದಿಂದ ಆ ಅವಕಾಶ ಸಹ ಕಳೆದುಕೊಂಡಿತ್ತು. ಮುಂದೆ ಓದಿ...

    1957ರಲ್ಲಿ ನಾಮಿನೇಟ್ ಆಗಿದ್ದ 'ಮದರ್ ಇಂಡಿಯಾ'

    1957ರಲ್ಲಿ ನಾಮಿನೇಟ್ ಆಗಿದ್ದ 'ಮದರ್ ಇಂಡಿಯಾ'

    ಜಗತ್ತಿನ ಪ್ರಖ್ಯಾತ ಅಕಾಡೆಮಿ ಅವಾರ್ಡ್ (ಆಸ್ಕರ್) ಕಾಂಪಿಟೇಶನ್‌ನಲ್ಲಿ ಭಾಗವಹಿಸಿದ ಮೊದಲ ಚಿತ್ರ ಮದರ್ ಇಂಡಿಯಾ. ಅದು 1957ರಲ್ಲಿ. ಅದಕ್ಕೂ ಮುಂಚಿನಿಂದಲೂ ಆಸ್ಕರ್ ಪ್ರಶಸ್ತಿ ನೀಡಲಾಗುತ್ತಿತ್ತಾದರೂ ವಿದೇಶಿ ಸಿನಿಮಾಗಳ ವಿಭಾಗ ಇರಲಿಲ್ಲ. 1956ರಲ್ಲಿ ವಿದೇಶಿ ಭಾಷೆ ಸಿನಿಮಾ ವಿಭಾಗಕ್ಕೆ ಚಾಲನೆ ಸಿಕ್ಕಿತ್ತು. 1957ರಲ್ಲಿ ಭಾರತದಿಂದ 'ಮದರ್ ಇಂಡಿಯಾ' ಸಿನಿಮಾ ಅಧಿಕೃತವಾಗಿ ನಾಮನಿರ್ದೇಶನವಾಗಿತ್ತು.

    ಭಾರತಕ್ಕೆ 'ಆಸ್ಕರ್' ಗೆಲ್ಲಲು ಇದುವರೆಗೂ ಸಾಧ್ಯವಾಗಿಲ್ಲ ಏಕೆ?ಭಾರತಕ್ಕೆ 'ಆಸ್ಕರ್' ಗೆಲ್ಲಲು ಇದುವರೆಗೂ ಸಾಧ್ಯವಾಗಿಲ್ಲ ಏಕೆ?

    ಒಂದೇ ಒಂದು ಮತದಿಂದ ಗೆಲುವು ಕಳೆದುಕೊಂಡಿತ್ತು

    ಒಂದೇ ಒಂದು ಮತದಿಂದ ಗೆಲುವು ಕಳೆದುಕೊಂಡಿತ್ತು

    ವಿದೇಶಿ ವಿಭಾಗದಲ್ಲಿ ಸ್ಪರ್ಧೆ ಮಾಡಿದ್ದ ಚೊಚ್ಚಲ ವರ್ಷದಲ್ಲೇ ಭಾರತೀಯ ಸಿನಿಮಾ ಪ್ರಶಸ್ತಿ ಗೆಲ್ಲುವ ಭರವಸೆ ಮೂಡಿತ್ತು. ನಿರೀಕ್ಷೆಯಂತೆ ಪ್ರಶಸ್ತಿ ಸನಿಹಕ್ಕೆ 'ಮದರ್ ಇಂಡಿಯಾ' ಹೆಜ್ಜೆಯಿಟ್ಟಿತ್ತು. ಆದರೆ, ಇಟಲಿಯ 'ನೈಟ್ಸ್ ಆಫ್ ಕ್ಯಾಬಿರಿಯಾ' ಚಿತ್ರಕ್ಕಿಂತ ಒಂದು ಮತ ಕಡಿಮೆ ಪಡೆದ ಕಾರಣ ಗೆಲುವು ದಕ್ಕಿಸಿಕೊಳ್ಳಲು ಸಾಧ್ಯವಾಗಿಲ್ಲ. ಒಂದೇ ಒಂದು ಮತದಿಂದ ಆಸ್ಕರ್ ವಂಚಿತವಾಯಿತು 'ಮದರ್ ಇಂಡಿಯಾ' ಸಿನಿಮಾ. ಇದು ಇಂದಿಗೂ ಮರೆಯಲಾಗದ ಕ್ಷಣವಾಗಿದೆ.

    ಮೂರು ಚಿತ್ರಗಳು ಮಾತ್ರ ಅಂತಿಮ ಹಂತಕ್ಕೆ ಹೋಗಿದ್ದವು

    ಮೂರು ಚಿತ್ರಗಳು ಮಾತ್ರ ಅಂತಿಮ ಹಂತಕ್ಕೆ ಹೋಗಿದ್ದವು

    1957ರ 'ಮದರ್ ಇಂಡಿಯಾ' ಚಿತ್ರದಿಂದ 2021ರ ಜಲ್ಲಿಕಟ್ಟು ಸಿನಿಮಾದವರೆಗೂ ಸುಮಾರು 50ಕ್ಕೂ ಹೆಚ್ಚು ಚಿತ್ರಗಳು ಆಸ್ಕರ್ ಅವಾರ್ಡ್‌ಗೆ ಭಾರತದಿಂದ ಪ್ರವೇಶ ಪಡೆದುಕೊಂಡಿದೆ. ಆದರೆ, ಆಸ್ಕರ್ ಅಂತಿಮ ಘಟಕ್ಕೆ ತಲುಪಿರುವುದು ಕೇವಲ ಮೂರು ಸಿನಿಮಾ ಮಾತ್ರ. (1957) ಮದರ್ ಇಂಡಿಯಾ, (1988) ಸಲಾಂ ಬಾಂಬೆ, (2001) ಲಗಾನ್ ಸಿನಿಮಾಗಳು ಆಸ್ಕರ್‌ ಅಂತಿಮ ಸುತ್ತಿಗೆ ನಾಮನಿರ್ದೇಶನಗೊಂಡಿತ್ತು. ಬೇರೆ ಯಾವ ಚಿತ್ರಗಳು ಆಸ್ಕರ್ ಗೆಲ್ಲುವ ಆಸೆ ಮೂಡಿಸಿರಲಿಲ್ಲ.

    ಆಸ್ಕರ್ ಪ್ರಶಸ್ತಿ ವಿನ್ಯಾಸದ ಬಗ್ಗೆ ನೀವು ತಿಳಿಯಲೇ ಬೇಕಾದ ವಿಷಯಗಳುಆಸ್ಕರ್ ಪ್ರಶಸ್ತಿ ವಿನ್ಯಾಸದ ಬಗ್ಗೆ ನೀವು ತಿಳಿಯಲೇ ಬೇಕಾದ ವಿಷಯಗಳು

    Recommended Video

    ಸಲ್ಮಾನ್ ಖಾನ್ ಗೋಸ್ಕರ ದೇಶಬಿಟ್ಟು ಬಂದಿದ್ದ ನಟಿ | Filmibeat Kannada
    'ಮದರ್ ಇಂಡಿಯಾ' ಚಿತ್ರದ ಕುರಿತು

    'ಮದರ್ ಇಂಡಿಯಾ' ಚಿತ್ರದ ಕುರಿತು

    ಮೆಹಬೂಬ್ ಖಾನ್ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ನರ್ಗಿಸ್, ಸುನೀಲ್ ದತ್, ರಾಜೇಂದ್ರ ಕುಮಾರ್, ರಾಜ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಮೆಹಬೂಬ್ ಖಾನ್ ಅವರೇ ರಚಿಸಿದ್ದ 'ಔರತ್' ಪುಸ್ತಕ ಆಧರಿಸಿ ಸಿನಿಮಾ ತಯಾರಿಸಲಾಗಿತ್ತು. ಫಿಲಂ ಫೇರ್ ಪ್ರಶಸ್ತಿ, ರಾಷ್ಟ್ರಪ್ರಶಸ್ತಿ ಸೇರಿದಂತೆ ಹಲವು ಅವಾರ್ಡ್‌ಗಳು ಈ ಚಿತ್ರಕ್ಕೆ ಲಭಿಸಿದೆ. ನರ್ಗಿಸ್ ಬಹಳ ಮೆಚ್ಚುಗೆ ಪಡೆದುಕೊಂಡಿದ್ದರು.

    English summary
    The 1957 Hindi film 'Mother India' came close to winning the Academy Award but lost to 'Nights of Cabiria' by a single vote.
    Wednesday, February 10, 2021, 13:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X