'ಬಿಂದಾಸ್' ಚೆಲುವೆಯ ಬದುಕಿನಲ್ಲಿ ಬಿರುಗಾಳಿ ; ಕೇವಲ 2 ವರ್ಷಕ್ಕೆ ದಾಂಪತ್ಯದಲ್ಲಿ ಬಿರುಕು? ಬದಲಾಯ್ತು ಹನ್ಸಿಕಾ ಹೆಸರು!
ಊಹಾಪೋಹಗಳು, ಗಾಳಿಸುದ್ದಿಗಳು ಗ್ಲಾಮರ್ ಜಗತ್ತಿನಲ್ಲಿ ಮತ್ತು ಸೆಲೆಬ್ರೆಟಿಗಳ ಜೀವನದಲ್ಲಿ ಕಾಮನ್ನೋ ಕಾಮನ್ನು. ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಒಂದು ಬೊಂಬೆಯ ಜತೆಗೆ ಆಟವಾಡಿದರೂ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಬಹುದು. ಟ್ರೋಲಿಗರ ಹಸಿವಿಗೆ ಆಹಾರವೂ ಆಗಬಹುದು. ಇನ್ನೂ .. ಮದುವೆಯಾಗಿದ್ದರಂತೂ ಮುಗಿದೇ ಹೋಯ್ತು. ಜೊತೆಯಲ್ಲಿ ಓಡಾಡಿದರೂ .. ಓಡಾಡದೇ ಇದ್ದರೂ .. ಹತ್ತಾರು ಮಾತು ಕೇಳಿ ಬರುತ್ತಾನೇ ಇರ್ತಾವೆ.
ಇವರ ಸಾಮಾಜಿಕ ಜಾಲತಾಣದ ಮೇಲೆ ಸಮಾಜದ ಒಂದು ವರ್ಗ ಯಾವತ್ತು ಒಂದು ಕಣ್ಣಿಟ್ಟಿರುತ್ತೆ. ಯಾಕೆಂದರೆ, ಸಿನಿಮಾ ಮಂದಿಗೆ ಮದ್ವೆ.. ಪ್ರೀತಿ.. ಬಟ್ಟೆ ಬದಲಿಸಿದಷ್ಟೇ ಸುಲಭ ಸಾಧ್ಯ. ಹೀಗಾಗಿಯೇ ಯಾವ ಕ್ಷಣದಲ್ಲಾದರೂ ಡಿವೋರ್ಸ್ ಸುದ್ದಿ ಹೊರ ಬರಬಹುದು ಎಂದು ಕಾಯುವ ಅನೇಕರು ಸೆಲೆಬ್ರೀಟಿಗಳ ಕುರಿತು ವಿಚ್ಛೇದನದ ವದಂತಿಯನ್ನೂ ಹಬ್ಬಿಸುತ್ತಾರೆ. ಉದಾಹರಣೆಗೆ ಹನ್ಸಿಕಾ ಮೋಟ್ವಾನಿ.

ಹೌದು, ಕನ್ನಡದ 'ಬಿಂದಾಸ್' ಸೇರಿ ಉತ್ತರ ಮತ್ತು ದಕ್ಷಿಣದಲ್ಲಿ ಹಲವು ಚಿತ್ರಗಳನ್ನು ಮಾಡಿರುವ ಹನ್ಸಿಕಾ ಮೂರು ವರ್ಷದ ಹಿಂದೆ ಸೊಹೇಲ್ ಖತುರಿಯಾ ಅವರನ್ನು ಮದುವೆಯಾಗಿದ್ದರು.
ಈ ಸೊಹೇಲ್ ಖತುರಿಯಾ ಬೇರೆ ಯಾರು ಅಲ್ಲ ಬದಲಿಗೆ ಹನ್ಸಿಕಾ ಅವರ ಆಪ್ತ ಗೆಳತಿ ರಿಂಕಿಯ ಗಂಡ. ಆ ಕಾಲದಲ್ಲಿ ಈ ವಿಚಾರ ತುಂಬಾ ಸದ್ದು ಮಾಡಿತ್ತು. ಗೆಳತಿಯ ಮನೆಯನ್ನು ಮುರಿದು ಮದುವೆಯಾಗ್ತಿದ್ದಾರೆ ಎಂದು ಹನ್ಸಿಕಾ ಅವರನ್ನು ಟ್ರೋಲ್ ಕೂಡ ಮಾಡಲಾಗಿತ್ತು.
ಆದರೂ ಕೂಡ ತಲೆ ಕೆಡಿಸಿಕೊಳ್ಳದ ಹನ್ಸಿಕಾ ಡಿಸೆಂಬರ್ 4-2022ರಲ್ಲಿ ರಾಜಸ್ಥಾನದ ಜೈಪುರದಲ್ಲಿರುವ 'Mundota Fort'ನಲ್ಲಿ ಅದ್ದೂರಿಯಾಗಿ ಮದುವೆಯಾದರು. ಹೀಗೆ ಮದುವೆಯಾದ ಹನ್ಸಿಕಾ ಬದುಕಿನಲ್ಲಿ ಸದ್ಯ ಬಿರುಗಾಳಿ ಬೀಸಿರುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ.
ಇದಕ್ಕೆ ಪುರಾವೆ ಎನ್ನುವಂತೆ ಕಳೆದೊಂದು ಒಂದೂವರೆ ವರ್ಷದಿಂದ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಗಂಡನ ಜೊತೆ ಇರುವ ಯಾವ ಫೋಟೊವನ್ನು ಕೂಡ ಹಂಚಿಕೊಳ್ಳದ ಹನ್ಸಿಕಾ ಇದೀಗ ತಮ್ಮ ಹೆಸರಿನಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ.ಮೋಟ್ವಾನಿ ಎಂದು ಇದ್ದ ಅಡ್ಡ ಹೆಸರನ್ನು ಮೋಟ್ವನ್ನಿ ಎಂದು ಬದಲಿಸಿಕೊಂಡಿದ್ದಾರೆ. ಈ ಬದಲಾವಣೆಯ ಹಿಂದೆ ಸಂಖ್ಯಾಶಾಸ್ತ್ರದ ಪ್ರಭಾದ ಇದೆಯಾ..? ಅಥವಾ ಬೇರೆ ಯಾವುದಾದರೂ ಸುಳಿವು ಇದೆಯಾ..? ಗೊತ್ತಿಲ್ಲ. ಆದರೆ.. ಹನ್ಸಿಕಾ ತಮ್ಮ ಹೆಸರಿನಲ್ಲಿ ಈ ಬದಲಾವಣೆ ಮಾಡಿಕೊಂಡ ನಂತರ ಇವರ ವಿಚ್ಛೇದನದ ಸುದ್ದಿಗಳಿಗೆ ಮತ್ತೊಮ್ಮೆ ರೆಕ್ಕೆ ಪುಕ್ಕ ಬಂದಿವೆ.

ಹಲವರು ಕಳೆಗುಂದಿರುವ ತಮ್ಮ ಸ್ಟಾರ್‌ಡಂಗೆ ಮರುಜೀವ ನೀಡಲು ಹನ್ಸಿಕಾ ತಮ್ಮ ಹೆಸರಿನಲ್ಲಿ ಬದಲಾವಣೆ ಮಾಡಿಕೊಂಡಿರಬಹುದು ಎನ್ನುವ ಅನುಮಾನ ವ್ಯಕ್ತಪಡಿಸಿದರೆ ಇನ್ನೂ ಕೆಲವರು ವಿಚ್ಛೇದನದ ಸುಳಿವನ್ನು ಹನ್ಸಿಕಾ ನೀಡುತ್ತಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಹನ್ಸಿಕಾ ದಾಂಪತ್ಯ ಜೀವನದಲ್ಲಿರುವ ಹಲವರಿಗೆ ಇರುವ ಅನುಮಾನ ಇನ್ನೂ ಹೆಚ್ಚಿಸುವಂತೆ ಹನ್ಸಿಕಾ ಮತ್ತು ಸೊಹೇಲ್ ಕಳೆದ ಎರಡು ವರ್ಷಗಳಿಂದ ಪ್ರತೈಕವಾಗಿ ವಾಸ ಮಾಡುತ್ತಿದ್ದಾರೆ ಎಂದು ''ಹಿಂದೂಸ್ತಾನ್ ಟೈಮ್ಸ್'' ವರದಿಯನ್ನು ಮಾಡಿದೆ. ಈ ವರದಿಯ ಪ್ರಕಾರ ಸೊಹೇಲ್ ತಮ್ಮ ಕುಟುಂಬದ ಜೊತೆ ವಾಸ ಮಾಡುತ್ತಿದ್ದರೆ ಹನ್ಸಿಕಾ ತಮ್ಮ ತಾಯಿಯ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ.
ಅಂದ್ಹಾಗೇ 2022ರಲ್ಲಿ ಗೆಳತಿಯ ಮನೆ ಮುರಿದಳು ಎಂದು ಹನ್ಸಿಕಾ ಅವರನ್ನು ಅನೇಕರು ನಿಂದಿಸಿದಾಗ ನನಗೆ ಈ ವ್ಯಕ್ತಿ ಗೊತ್ತು ಎಂಬ ಒಂದು ಕಾರಣದಿಂದ ಮದುವೆ ನನ್ನಿಂದ ಮುರಿದು ಬಿದ್ದಿದೆ ಎಂದಲ್ಲ. ಅವರ ಮದುವೆ ಮುರಿದು ಬೀಳುವುದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದರು.
ನಾನು ಸೆಲೆಬ್ರಿಟಿಯಾಗಿದ್ದಕ್ಕೆ ಜನ ನನ್ನ ಕಡೆ ಬೆರಳು ಮಾಡುತ್ತಿದ್ದಾರೆ, ನನ್ನ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನು ಹೇಳುತ್ತಿದ್ದಾರೆ. ಸೆಲೆಬ್ರಿಟಿಯಾಗಿದ್ದಕ್ಕೆ ನನಗೆ ಸಿಕ್ಕ ಬಹುದೊಡ್ಡ ಬಹುಮಾನ ಇದು ಎಂದು ಕೂಡ ಹನ್ಸಿಕಾ ಹೇಳಿದ್ದರು. ತಮ್ಮ ಮದುವೆಯ ವಿಡಿಯೋವನ್ನು ಹಾಟ್‌ಸ್ಟಾರ್‌ಗೆ ದೊಡ್ಡ ಮೊತ್ತಕ್ಕೆ ಮಾರಿದ್ದರು. ಇದೇ ವಿಡಿಯೋದಲ್ಲಿ ಹನ್ಸಿಕಾ ಈ ಮಾತುಗಳನ್ನು ಹೇಳಿದ್ದರು. ಆದರೆ ಈಗ ಹೆಸರಿನಲ್ಲಿ ಆದ ಬದಲಾವಣೆ ಹಿನ್ನೆಲೆ ಇವರ ದಾಂಪತ್ಯವೇ ಮುರಿದು ಬಿದ್ದಿದೆ ಎನ್ನುವ ಸುದ್ದಿ ಸದ್ಯ ಸದ್ದು ಮಾಡುತ್ತಿದೆ. ಈ ಕುರಿತು ಹನ್ಸಿಕಾ ಈಗಲಾದರೂ ಮಾತನಾಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











