Mouni Roy | 'ಕೆಜಿಎಫ್' ಬೆಡಗಿಯ ಹೋಲಿ ಸಂಭ್ರಮಕ್ಕೆ ಬೆರಗಾದ ಫ್ಯಾನ್ಸ್!
ಇಂದು ದೇಶದಾದ್ಯಂತ ಹೋಲಿ ಹಬ್ಬದ ಸಂಭ್ರಮ ಸಡಗರ ಮನೆ ಮಾಡಿದೆ. ಭಾರತದಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಎಲ್ಲರೂ ಆಚರಿಸುತ್ತಾರೆ. ಯಾವುದೇ ಜಾತಿ ಮತಗಳ ಭೇದವಿಲ್ಲದೆ ಒಟ್ಟಾಗಿ ಸೇರಿ ಬಣ್ಣಗಳ ಓಕುಳಿಯಾಟದಲ್ಲಿ ಮಿಂದೇಳುತ್ತಾರೆ.
ಯಾವುದೇ ಹಬ್ಬವೂ ತನ್ನದೇ ಆದ ಆಚಾರ ಸಂಪ್ರದಾಯಗಳನ್ನು ಹೊಂದಿರುತ್ತದೆ. ಅದೇ ರೀತಿ ಹೋಳಿ ಬಣ್ಣಗಳ ಹಬ್ಬವಾಗಿದ್ದು, ದೂರದ ಊರಿನವರು ತಮ್ಮ ತಾಯ್ನಾಡಿಗೆ ಬಂದು ಈ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬವನ್ನು ವಸಂತ ಮಾಸದಲ್ಲಿ ಆಚರಿಸಲಾಗುತ್ತದೆ.
ಚಳಿಗಾಲದ ಕೊನೆಯನ್ನು ವಸಂತದ ಆಗಮನವನ್ನು ಸಾರುವ ಹಬ್ಬವೇ ಈ ಹೋಲಿ ಹಬ್ಬ. ಈ ಹಬ್ಬವನ್ನು ಬಾಲಿವುಡ್ ಸೆಲೆಬ್ರೆಟಿಗಳು ಅದ್ಧೂರಿಯಾಗಿ ಆಚರಿಸುತ್ತಾರೆ. ಇಂದು ಹಲವು ಸೆಲೆಬ್ರೆಟಿಗಳು ಬಣ್ಣಗಳ ನಡುವೆ ಮಿಂದೇಳಲಿದ್ದಾರೆ. ಇತ್ತೀಚೆಗಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೌನಿ ರಾಯ್ ಮತ್ತು ಸೂರಜ್ ಕೂಡ ಹಬ್ಬವನ್ನು ಸಂಭ್ರಮ- ಸಡಗರದಿಂದ ಆಚರಿಸಿದ್ದಾರೆ.

ಫುಲ್ ಗ್ರ್ಯಾಂಡ್ ಆಗಿ ಆಚರಿಸಿದ ಜೋಡಿ
ಇದೇ ವರ್ಷ ಜನವರಿ 27ರಂದು ಬಾಲಿವುಡ್ ನಟಿ ಮೌನಿ ರಾಯ್ ಮತ್ತು ಬ್ಯುಸಿನೆಸ್ ಮ್ಯಾನ್ ಸೂರಜ್ ನಂಬಿಯಾರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿ ಮದುವೆ ಬಳಿಕ ಹೋಲಿ ಹಬ್ಬವನ್ನು ಫುಲ್ ಗ್ರ್ಯಾಂಡ್ ಆಗಿ ಆಚರಿಸಿದ್ದಾರೆ. ಇಬ್ಬರೂ ಒಟ್ಟಿಗೆ ಆಚರಿಸುತ್ತಿರುವ ಹಬ್ಬ ಇದಾಗಿದ್ದು, ಒಂದಷ್ಟು ತುಣುಕುಗಳನ್ನು ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕ್ಯಾಮರಾಗೆ ಪೋಸ್ ನೀಡಿದ ಜೋಡಿ
ಮೌನಿ ರಾಯ್ ಈ ಸಂಭ್ರಮದ ಸಂತಸದಲ್ಲಿ ಬಿಳಿ ಬಣ್ಣದ ಕುರ್ತಾವನ್ನು ಧರಿಸಿದ್ದಾರೆ. ಮೌನಿ ಪತಿ ಸೂರಜ್ ನಂಬಿಯಾರ್ ಕೂಡ ಬಿಳಿ ಬಣ್ಣದ ಜುಬ್ಬವನ್ನು ತೊಟ್ಟಿದ್ದು, ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಮನೆಯ ಬಾಲ್ಕನಿಯಲ್ಲಿ ಫೋಟೊಗೆ ಪೋಸ್ ನೀಡಿರುವ ಈ ಜೋಡಿ, ತುಂಬಾ ರೊಮ್ಯಾಂಟಿಕ್ ಆಗಿ ಕೂಡ ಕಾಣಿಸಿಕೊಂಡಿದ್ದಾರೆ.

ಫ್ಯಾನ್ಸ್ ಶುಭ ಹಾರೈಸಿದ ನವ ಜೋಡಿ
ಎಲ್ಲರ ಜೀವನವೂ ಈ ಬಣ್ಣಗಳ ರೀತಿಯಲ್ಲಿ ಕಲರ್‌ಫುಲ್ ಆಗಿರಲಿ, ಎಲ್ಲರಿಗೂ ಹ್ಯಾಪಿ ಹೋಲಿ ಎಂದು ಈ ಜೋಡಿ ಅಭಿಮಾನಿಗಳಿಗೆ ಶುಭ ಹಾರೈಸಿದ್ದಾರೆ. ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ಜೊತೆ ಅವರ ಮುದ್ದಿನ ಶ್ವಾನ ಕೂಡ ಈ ಸೆಲೆಬ್ರೆಷನ್‌ನಲ್ಲಿ ಭಾಗಿ ಆಗಿದೆ.

ಸಖ ಸಂಸಾರಕ್ಕೆ ಸಾಕ್ಷಿ ಆಯ್ತು ಈ ಫೋಟೊ
ಇನ್ನು ಗೋವಾದ ವಾಗೋಟರ್ ಬೀಚ್ ಮೌನಿ ರಾಯ್ ಮತ್ತು ಸೂರಜ್ ವಿವಾಹ ಸಂಭ್ರಮ ನೆರವೇರಿತ್ತು. ಬೀಚ್ ಬಳಿಯ ಐಷಾರಾಮಿ ಹೋಟೆಲ್ ಒಂದರಲ್ಲಿ ಮದುವೆ ಕಾರ್ಯಗಳು ನಡೆದಿದ್ದು ಎಲ್ಲರಿಗೂ ತಿಳಿದಿದೆ. ಬೀಚ್ ಬದಿಯಲ್ಲಿ ಇವರಿಬ್ಬರ ಮದುವೆ ಸಮಾರಂಭ ಜೋರಾಗಿ ನಡೆದಿದೆ. ಮೌನಿರಾಯ್ ಮತ್ತು ಸೂರಜ್ ಮದುವೆಯಲ್ಲಿ ಕೇವಲ ಆಪ್ತರು ಮತ್ತು ಕುಟುಂಬಸ್ಥರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಕೊರೊನಾ ಕಾರಣಕ್ಕೆ ಹೆಚ್ಚಿನ ಜನರಿಗೆ ಮದುವೆಗೆ ಆಹ್ವಾನ ನೀಡಿರಲ್ಲಿಲ್ಲಾ.


Click it and Unblock the Notifications











