ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆಯಲಿದೆ ಕೆಜಿಎಫ್ ಬೆಡಗಿ ಮೌನಿ ರಾಯ್ ಮತ್ತು ಸೂರಜ್ ವೆಡ್ಡಿಂಗ್ ಪಾರ್ಟಿ!
ಖ್ಯಾತ ನಟಿ ಮೌನಿ ಕೆಜಿಎಫ್ ಚಾಪ್ಟರ್ 1 ರಲ್ಲಿ ಹಿಂದಿ ಅವತರಣಿಕೆ ಹಾಡಿಗೆ ಸೊಂಟ ಬಳುಕಿಸಿದ್ದ ಮೌನಿ ರಾಯ್ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೀಗಾಗಿ ನಟಿ ಮೌನಿ ರಾಯ್ ಬದುಕಿನಲ್ಲೀಗ ಹೊಸ ಅಧ್ಯಾಯ ಆರಂಭ ಆಗಿದೆ. ಬೆಂಗಳೂರು ಮೂಲದ ಪ್ರಿಯಕರ ಸೂರಜ್ ನಂಬಿಯಾರ್ ಜೊತೆ ಅವರು ದಾಂಪತ್ಯ ಜೀವನ ಆರಂಭಿಸಿದ್ದಾರೆ.
Recommended Video
ಕೆಲವೇ ಕೆಲವು ಗಣ್ಯರ ಸಮ್ಮುಖದಲ್ಲಿ ಮದುವೆ ನಡೆದಿದ್ದು ಗೋವಾದಲ್ಲಿಯೇ ವಿಶೇಷ ಪಾರ್ಟಿಯನ್ನು ಕೂಡ ಈ ಜೋಡಿ ಹಮ್ಮಿಕೊಂಡಿತ್ತು. ಸೂರಜ್ ನಂಬಿಯಾರ್ ಬೆಂಗಳೂರು ಮೂಲದವರಾದ್ದರಿಂದ ಸಾಕಷ್ಟು ಗೆಳೆಯರನ್ನು ಹೊಂದಿದ್ದಾರೆ.
ಅಲ್ಲದೇ ಮೌನಿ ರಾಯ್‌ಗೂ ಬೆಂಗಳೂರಿನಲ್ಲಿ ಹಲವು ಸ್ನೇಹಿತರಿದ್ದಾರೆ, ಕುಟುಂಬ ಸದಸ್ಯರೂ ಕೂಡ ಇರುವುದರಿಂದ ಬೆಂಗಳೂರಿನಲ್ಲಿ ಒಂದು ಕಾಕ್‌ಟೈಲ್ ಪಾರ್ಟಿ ಹಮ್ಮಿಕೊಳ್ಳಲು ಈ ಜೋಡಿ ನಿರ್ಧರಿಸಿದೆ. ಈ ಖಾಸಗೀ ಪಾರ್ಟಿಯಲ್ಲಿ ಸ್ನೇಹಿತರು ಮತ್ತು ಕೆಲವೇ ಕೆಲವು ಕುಟುಂಬ ಸದಸ್ಯರಿಷ್ಟೆ ಅವಕಾಶ ನೀಡಲಾಗಿದೆ .

ಗೋವಾ ಪಾರ್ಟಿ ನಂತರ ಬೆಂಗಳೂರಲ್ಲಿ ಪಾರ್ಟಿ ಹಮ್ಮಿಕೊಂಡ ಜೋಡಿ
ಫೆಬ್ರವರಿ 26 ರಂದು ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ಬೆಂಗಳೂರಿನ ಸ್ನೇಹಿತರಿಗಾಗಿ ಪಾರ್ಟಿಯನ್ನು ಹಮ್ಮಿಕೊಂಡಿದ್ದಾರೆ. ಈ ಬಗ್ಗೆ ಖಾಸಗೀ ಸಂದರ್ಶನದಲ್ಲಿ ಮಾಹಿತಿ ನೀಡಿದ ಸೂರಜ್ ನಂಬಿಯಾರ್ ತಂದೆ ರಾಜಾರಾಮ್ ನಂಬಿಯಾರ್ "ನಾವು ಬೆಂಗಳೂರಿನಲ್ಲಿ ಮನೆಯನ್ನು ಹೊಂದಿದ್ದೇವೆ. ಹೀಗಾಗಿ ಅಲ್ಲಿ ಡಿಜೆ ಮತ್ತು ಕಾಕ್‌ಟೈಲ್ ಪಾರ್ಟಿ ಇರುತ್ತದೆ. ಇದರಲ್ಲಿ ಮೌನಿಯವರ ಚಿತ್ರರಂಗದ ಕೆಲವು ಸ್ನೇಹಿತರ ಜೊತೆಗೆ ನಮ್ಮ ಕುಟುಂಬದವರು ಮತ್ತು ಸ್ನೇಹಿತರು ಭಾಗವಹಿಸಲಿದ್ದಾರೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ" ಎಂದು ಸೂರಜ್ ಅವರ ತಂದೆ, ಉದ್ಯಮಿ ರಾಜಾರಾಮ್ ನಂಬಿಯಾರ್ ಮಾಹಿತಿ ಹಂಚಿಕೊಳ್ಳುತ್ತಾರೆ.

ನಾವು ಮಲಬಾರ್ ಪ್ರದೇಶದವರು,ಪೂರ್ವಜ್ಜರು ಕೃಷಿ ಮಾಡುತ್ತಿದ್ದರು
ಇನ್ನು ಮಾತು ಮುಂದುವರೆಸಿ "ತಮ್ಮ ಕುಂಟುಂಬದ ಬಗ್ಗೆ ತಪ್ಪು ಮಾಹಿತಿಯನ್ನು ಪ್ರಸರಿಸಲಾಗುತ್ತಿದೆ ನಮ್ಮದು ಜೈನ ಕುಟುಂಬ ಆದರೆ ಸೂರಜ್ ಬಗ್ಗೆ ಬೇರೆಯದ್ದೇ ರೀತಿಯಾಗಿ ಮಾಧ್ಯಮದಲ್ಲಿ ವರದಿ ಮಾಡಿದ್ದಾರೆ. ಇದೆಲ್ಲವೂ ತಪ್ಪು. ನಾವು ಮಲಬಾರ್ ಪ್ರದೇಶದವರು ಮತ್ತು ನಮ್ಮ ಪೂರ್ವಜರು ಕೃಷಿಯಿಂದ ಬಂದವರು. ನಾನು ಬಿಜೆಪಿಯಲ್ಲಿ ಸಕ್ರಿಯನಾಗಿದ್ದೇನೆ. ಹಾಗೇ ರಿಯಲ್ ಎಸ್ಟೇಟ್ ಉದ್ಯಮ ನಮ್ಮ ಕುಟುಂಬದ ಒಂದು ಭಾಗ." ಎಂದಿದ್ದಾರೆ.

ಆರ್‌ವಿ ಕಾಲೇಜ್‌ನಲ್ಲಿ ಸಿವಿಲ್ ಇಂಜಿನಿಯರಿಂಗ್ ಮಾಡಿದ್ದ ಸೂರಜ್
ಸೂರಜ್ ನಂಬಿಯಾರ್ ಶಿಕ್ಷಣದ ಬಗ್ಗೆ ಮಾತನಾಡಿದ ತಂದೆ "ಸೂರಜ್ ಹುಟ್ಟಿದ್ದು ಮುಂಬೈನಲ್ಲಿ, ಆದರೆ ಬೆಂಗಳೂರಿನಲ್ಲಿ ಜೈನ್ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ವ್ಯಾಸಾಂಗ ಮಾಡಿದ್ದಾರೆ. ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಹಾಗೂ ಸ್ಟ್ಯಾನ್‌ಫೋರ್ಡ್ ಯೂನಿವರ್ಸಿಟಿಯಲ್ಲಿ ಅಧ್ಯಯನ ಮಾಡಲು ಹೋಗುವ ಮೊದಲು ಆರ್‌ವಿ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಸಿವಿಲ್ ಇಂಜಿನಿಯರಿಂಗ್ ಮಾಡಿದ್ದಾನೆ" ಎಂದು ರಾಜಾರಾಂ ಮಾಹಿತಿ ನೀಡಿದ್ದಾರೆ.

ಮೊದಲ ಭೇಟಿ ಹೇಗೆ ಆಯಿತು ಗೊತ್ತಾ?
ಮೌನಿ ರಾಯ್ ಮತ್ತು ಸೂರಜ್ ಪರಿಚಯದ ಬಗ್ಗೆಯೂ ಮಾತನಾಡಿರುವ ಅವರು ಹೇಗೆ ಭೇಟಿಯಾಗಿದ್ದರು ಎಂಬುದನ್ನು ರಾಜಾರಾಮ್ ನಂಬಿಯಾರ್ ಮಾತನಾಡಿದ್ದಾರೆ. "ಒಂದೆರಡು ವರ್ಷಗಳ ಹಿಂದೆ ಹೊಸ ವರ್ಷದ ಸಂದರ್ಭದಲ್ಲಿ ಅವರ ಪರಿಚಯವಾಗಿದೆ. ಸೂರಜ್ ದುಬೈನಲ್ಲಿ ಮನೆ ಹೊಂದಿದ್ದಾನೆ ಹೀಗಾಗಿ ಆ ಮನೆಗೆ ಸೂರಜ್ ಸ್ನೇಹಿತರ ಜೊತೆಗೆ ಮೌನಿ ಕೂಡ ಬಂದಿದ್ದಾಳೆ. ಆಗ ಸೂರಜ್ ಮೌನಿ ರಾಯ್‌ಗೆ ಪರಿಚಯವಿರಲಿಲ್ಲ. ಸೂರಜ್‌ಗೆ ಅವಳು ಯಾರೆಂದು ತಿಳಿದಿರಲಿಲ್ಲ ಆದರೆ ಮೌನಿ ರಾಯ್ ನಟಿ, ಡ್ಯಾನ್ಸರ್ ಎಂಬುದು ಗೊತ್ತಿತ್ತು. ಆಗ ಪರಿಚಯವಾಗಿ ಒಬ್ಬರಿಗೊಬ್ಬರು ಮೊಬೈಲ್ ಸಂಖ್ಯೆ ಬದಲಾಯಿಸಿಕೊಂಡರು. ಆಗ ಆಕಸ್ಮಿಕವಾಗಿ ಆದ ಸ್ನೇಹ ನಂತರ ಪ್ರೀತಿಯಾಗಿತ್ತು. ಹೀಗಾಗಿ ಎರಡು ವಿಭಿನ್ನ ಹಿನ್ನೆಲೆಯವರು ಪರಿಚಿತರಾಗಿ ಈಗ ಮದುವೆ ಕೂಡ ಆಗಿದ್ದಾರೆ" ಎಂದು ರಾಜಾರಾಮ್ ಅವರು ತಿಳಿಸಿದ್ದಾರೆ. ಬೆಂಗಳೂರಿನ ಪಾರ್ಟಿ ಬಗ್ಗೆ ಭಾರೀ ಕುತೂಹಲ ಮೂಡಿದೆ.


Click it and Unblock the Notifications











