ಇಂದು KGF ಬೆಡಗಿ ಮೌನಿ ರಾಯ್ ಅದ್ಧೂರಿ ಮದುವೆ!
ಬಾಲಿವುಡ್ ಬೆಡಗಿ ಮೌನಿ ರಾಯ್ ಕನ್ನಡಿಗರಿಗೆ ಹೆಚ್ಚು ಹತ್ತಿರ ಆಗಿದ್ದು, ಕೆಜಿಎಫ್ ಸಿನಿಮಾದ ಮೂಲಕ. ಈ ಬೆಡಗಿ ಸದ್ಯ ಮದುವೆ ವಿಚಾರವಾಗಿ ಸುದ್ದಿಯಲ್ಲಿ ಇದ್ದಾರೆ. ಹೌದು ಮೌನಿ ರಾಯ್ ಮದುವೆ ಆಗಿ ವೈವಾಹಿಕ ಜೀವನಕ್ಕೆ ಕಾಲಿಡಲು ಅಣಿಯಾಗಿದ್ದಾರೆ. ಗೋವಾದಲ್ಲಿ ಅದಾಗಲೇ ಮದುವೆ ಸಂಭ್ರಮ ಕಳೆಗಟ್ಟಿದೆ.
ಈ ನಟಿಯ ಮದುವೆ ಬಗ್ಗೆ ಸಾಕಷ್ಟು ಸುದ್ದಿಗಳು ಹಬ್ಬಿದ್ದರೂ ಕೂಡ, ಆಕೆ ಮಾತ್ರ ಮದುವೆ ಆಗುವ ಬಗ್ಗೆ ಸ್ಪಷ್ಟನೆ ನೀಡಿರಲಿಲ್ಲ. ಇತ್ತೀಚೆಗೆ ಮಾಧ್ಯಮಗಳ ಕಣ್ಣಿಗೆ ಬಿದ್ದಾಗಲೂ ಕೂಡ, ಮದುವೆ ಬಗ್ಗೆ ಮಾತನಾಡಿರಲಿಲ್ಲ. ಬದಲಿಗೆ ಮದುವೆ ಶುಭಾಶಯ ತಿಳಿಸಿದವರಿಗೆ ಧನ್ಯವಾದ ಹೇಳಿ ಹೋಗಿದ್ದರು.
ಈಗ ಸದ್ದಿಲ್ಲದೆ ಮದುವೆ ಸಂಭ್ರಮ ಶುರುವಾಗಿ ಬಿಟ್ಟಿದೆ. ಗೋವಾದಲ್ಲಿ ಅತ್ಯಂತ ಅದ್ದೂರಿಯಾಗಿ ಮೌನಿ ರಾಯ್ ಮದುವೆ ನಡೆಯುತ್ತಿದೆ. ಈಗಾಗಲೇ ಅರಿಶಿಣ ಶಾಸ್ತ್ರದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇಂದು (ಜನವರಿ 27) ಮೌನಿ ರಾಯ್ ಮದುವೆ ಅದ್ದೂರಿಯಾಗಿ ನಡೆಯಲಿದೆ.
ಹಳದಿ, ಮೆಹೆಂದಿ ಶಾಸ್ತ್ರದಲ್ಲಿ ಮಿಂದೆದ್ದ ಜೋಡಿ!
ಮದುವೆ ಕಾರ್ಯಗಳು ಆರಂಭ ಆಗಿದ್ದು, ಈಗಾಗಲೇ ಅರಿಶಿನ ಮತ್ತು ಮೆಹೆಂದಿ ಶಾಸ್ತ್ರಗಳು ನೆರವೇರಿವೆ. ಹಳದಿ ಬಣ್ಣದ ಉಡುಪಿನಲ್ಲಿ ಮದುಮಗಳು ಮೌನಿ ರಾಯ್ ಮತ್ತು ವರ ಸೂರಜ್ ಮಿಂಚಿದ್ದಾರೆ. ಮೆಹೆಂದಿ, ಹಳದಿ ಶಾಸ್ತ್ರದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಮೌನಿ ಹಳದಿ, ಹಸಿರು, ಬಿಳಿ ಬಣ್ಣದ ಲೆಹೆಂಗಾ ತೊಟ್ಟರೆ, ಸೂರಜ್ ಅದೇ ಕಾಂಬಿನೇಷನ್‌ನ ಪೈಜಾಮಾ ತೊಟ್ಟು ಕಂಗೊಳಿಸಿದ್ದಾರೆ.
ಗೋವಾ ಬೀಚ್‌ನ ಐಷಾರಾಮಿ ಹೋಟೆಲ್‌ನಲ್ಲಿ ಮದುವೆ!
ಗೋವಾದ ವಾಗೋಟರ್ ಬೀಚ್ ಮೌನಿ ರಾಯ್ ಮತ್ತು ಸೂರಜ್ ವಿವಾಹ ಸಂಭ್ರಮದಿಂದ ಕಳೆಗಟ್ಟಿದೆ. ಬೀಚ್ ಬಳಿಯ ಐಷಾರಾಮಿ ಹೋಟೆಲ್ ಒಂದರಲ್ಲಿ ಮದುವೆ ಕಾರ್ಯಗಳು ನಡೆಯುತ್ತಿದೆ. ಇವರ ಮದುವೆಗಾಗಿ ಪಂಚತಾರಾ ಹೋಟೆಲ್ ಈಗಾಗಲೇ ಬುಕ್ ಆಗಿದ್ದು, ಬೀಚ್ ಬದಿಯಲ್ಲಿ ಮದುವೆ ಸಮಾರಂಭ ಜೋರಾಗಿ ನಡೆಯುತ್ತಿದೆ. ಈ ಮದುವೆಯಲ್ಲಿ ಕೇವಲ ಆಪ್ತರು ಮತ್ತು ಕುಟುಂಬಸ್ಥರು ಮಾತ್ರ ಭಾಗಿ ಆಗಿದ್ದಾರೆ. ಕೊರೊನಾ ಕಾರಣಕ್ಕೆ ಹೆಚ್ಚಿನ ಜನರಿಗೆ ಮದುವೆಗೆ ಆಹ್ವಾನ ನೀಡಿಲ್ಲ.

ಗೆಳೆಯ ಸೂರಜ್ ಜೊತೆಗೆ ಮೌನಿ ಮದುವೆ!
ಸೂರಜ್ ನಂಬಿಯಾರ್, ಮೌನಿ ರಾಯ್ ಅವರ ಬಹುಕಾಲದ ಗೆಳೆಯ. ಇಬ್ಬರು ಒಟ್ಟಿಗೆ ಡೇಟಿಂಗ್ ಎಂದು ಸುತ್ತಾಡುತ್ತಿದ್ದಾಗ ಹಲವು ಬಾರಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದರು. ಸೂರಜ್ ಸಿನಿಮಾ ಹಿನ್ನೆಲೆ ಉಳ್ಳವರಲ್ಲ, ಅವರು ಒಬ್ಬ ಉದ್ಯಮಿ ಎಂದು ತಿಳಿದು ಬಂದಿದೆ. ವಿವಾಹದ ಬಳಿಕ ಬಹುಶಃ ಮೌನಿ ತಮ್ಮ ಪತಿಯ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳಬಹುದು. ಯಾಕೆಂದರೆ ಸೂರಜ್ ಅವರ ಬಗ್ಗೆ ಸಾಕಷ್ಟು ಕುತೂಹಲಗಳು ಸೃಷ್ಟಿ ಆಗಿವೆ. ಮೌನಿಗೆ ಸೂರಜ್ ಸಿಕ್ಕಿದ್ದು ಹೇಗೆ ಎನ್ನುವ ಬಗ್ಗೆಯೂ ಅಭಿಮಾನಿ ಬಳಗದಲ್ಲಿ ಕುತೂಹಲ ಮೂಡಿದೆ.

ವಿದೇಶದಲ್ಲಿ ಮದುವೆ ಆಗಲು ಬಯಸಿದ್ದ ಜೋಡಿ!
ಮೌನಿ ರಾಯ್ ಹಾಗೂ ಸೂರಜ್ ನಂಬಿಯಾರ್ ವಿದೇಶದಲ್ಲಿ ವಿವಾಹವಾಗಲಿದ್ದಾರೆ ಎನ್ನಲಾಗಿತ್ತು. ಈ ಜೋಡಿ ವಿದೇಶದಲ್ಲಿ ಮದುವೆ ಆಗಲು ಯೋಜನೆ ರೂಪಿಸಿತ್ತು. ಆದರೆ ಈಗ ಯೋಚನೆ ಬದಲಾಗಿದ್ದು, ಈ ಜೋಡಿಯು ಗೋವಾದ ಕಡಲ ತೀರದಲ್ಲಿ ಅದ್ಧೂರಿಯಾಗಿ ವಿವಾಹವಾಗುತ್ತಿದೆ. ಬೀಚ್ ಬದಿಯ ಪಂಚತಾರಾ ಹೋಟೆಲ್ ಮಾತ್ರವೇ ಅಲ್ಲದೆ, ಬೀಚ್ ಏರಿಯಾದಲ್ಲಿಯೂ ಮದುವೆ ಸಮಾರಂಭ ಕಳೆಗಟ್ಟಿದೆ. ವರದಿಗಳ ಪ್ರಕಾರ ಇಂದು ಮೌನಿ ರಾಯ್ ಮದುವೆ ನಡೆಯಲಿದೆ.


Click it and Unblock the Notifications











