»   » ಅಕ್ಷಯ್ ಕುಮಾರ್ 'ಗೋಲ್ಡ್' ಚಿತ್ರದಲ್ಲಿ ಮೌನಿ ರಾಯ್

ಅಕ್ಷಯ್ ಕುಮಾರ್ 'ಗೋಲ್ಡ್' ಚಿತ್ರದಲ್ಲಿ ಮೌನಿ ರಾಯ್

Posted By:
Subscribe to Filmibeat Kannada

ಬಾಲಿವುಡ್ ನ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ವರ್ಷಕ್ಕೆ 3-4 ಚಿತ್ರಗಳಲ್ಲಿ ಅಭಿನಯಿಸುತ್ತಾರೆ. ಸದ್ಯ ಅವರ 'ಟಾಯ್ಲೆಟ್: ಎಕ್ ಪ್ರೇಮ್ ಕಥಾ' ಚಿತ್ರ ಮೇಕಿಂಗ್ ನಡೆಯುತ್ತಿದ್ದು, ಸಖತ್ ಸದ್ದು ಮಾಡುತ್ತಿದೆ. ಅದರೆ ಜೊತೆಗೆ ಈಗಾಗಲೇ ಅವರ ಅಭಿನಯದ 'ಪದ್ಮನ್', 'ಗೋಲ್ಡ್' ಸಿನಿಮಾಗಳ ಚಿತ್ರೀಕರಣವು ನಡೆಯುತ್ತಿದೆ.

ಅಕ್ಷಯ್ ಕುಮಾರ್ ಅಭಿನಯದ 'ಗೋಲ್ಡ್' ಸಿನಿಮಾದ ಪೋಸ್ಟರ್ ಸಹ ಈಗಾಗಲೇ ಬಿಡುಗಡೆ ಆಗಿದೆ. ಚಿತ್ರದ ಬಗೆಗಿನ ಇತ್ತೀಚಿನ ಸುದ್ದಿ ಅಂದ್ರೆ ಸಿನಿಮಾದಲ್ಲಿ ಅಕ್ಷಯ್ ಜೊತೆ ಖ್ಯಾತ ಟೆಲಿವಿಷನ್ ತಾರೆ ಮತ್ತು ಮಾಡೆಲ್ ಆಗಿರುವ ಮೌನಿ ರಾಯ್ ಈ ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದು, ಅವರ ಭಾಗದ ಚಿತ್ರೀಕರಣ ಈಗ ಶುರುವಾಗಿದೆ. ಮೌನಿ ರಾಯ್ ಕಿರುತೆರೆಯಿಂದ ಹೆಚ್ಚು ಖ್ಯಾತರಾಗಿರುವುದರಿಂದ ಅಭಿಮಾನಿಗಳು ಅವರನ್ನು ಅಕ್ಷಯ್ ಜೊತೆ ನೋಡಲು ಹೆಚ್ಚು ಕಾತುರರಾಗಿದ್ದಾರೆ.

Mouni Roy begins shooting for Akshay Kumar film Gold

ಅಕ್ಕಿ ಅಭಿನಯದ 'ಗೋಲ್ಡ್' ಚಿತ್ರವು 1948ರ ಲಂಡನ್ ಒಲಿಂಪಿಕ್ಸ್ ಆಧಾರಿತ ಪೀರಿಯಡ್ ಸ್ಪೋರ್ಟ್ಸ್ ಡ್ರಾಮಾ. ಸ್ವತಂತ್ರ್ಯ ಭಾರತ ಹೇಗೆ ಹಾಕಿಯಲ್ಲಿ ಮೊದಲ ಗೋಲ್ಡ್ ಮೆಡಲ್ ಗೆದ್ದುಕೊಂಡಿತು ಎಂಬುದು ಸಿನಿಮಾದ ಹೈಲೈಟ್. ಇಂತಹ ಅದ್ಭುತವಾದ ಕಥೆಯನ್ನು ಒಳಗೊಂಡ ಚಿತ್ರದ ಮೂಲಕ ಮೌನಿ ರಾಯ್ ಬಾಲಿವುಡ್ ಸಿನಿ ಅಂಗಳಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಆದರೆ ಈ ಚಿತ್ರದಲ್ಲಿ ಅವರ ಪಾತ್ರ ಏನು ಎಂಬುದು ಹೊರಬಿದ್ದಿಲ್ಲ. ಪ್ರಸ್ತುತ ಲಂಡನ್ ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಫರ್ಹಾನ್ ಅಖ್ತರ್ ರವರು 'ಗೋಲ್ಡ್' ಚಿತ್ರತಂಡಕ್ಕೆ ಶುಭಕೋರಿ ಮಾಡಿರುವ ಟ್ವೀಟ್ ಗೆ ಮೌನಿ ರಾಯ್ ರವರು 'ಧನ್ಯವಾದಗಳನ್ನು ಹೇಳಿ ಟ್ವೀಟ್ ಮಾಡಿದ್ದಾರೆ. ಮೌನಿ ರಾಯ್ ರವರು ತಾವು ಡ್ಯಾನ್ಸ್ ಮಾಡುತ್ತಿರುವ ಇತ್ತೀಚಿನ ಚಿತ್ರವೊಂದನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದು ಅವರ ಪಾತ್ರದ ಬಗ್ಗೆ ಕುತೂಹಲ ಕೆರಳಿಸಿದ್ದಾರೆ.

'ಗೋಲ್ಡ್' ಚಿತ್ರದಲ್ಲಿ ಅಮಿತ್ ಶಾಧ್ ಮತ್ತು ಕುನಾಲ್ ಕಪೂರ್ ಸಹ ಮುಖ್ಯ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರವನ್ನು ರೀಮಾ ಕಾಗ್ಟಿ ನಿರ್ದೇಶನ ಮಾಡುತ್ತಿದ್ದು, ರಿತೇಶ್ ಸಿಧ್ವಾನಿ ಮತ್ತು ಫರ್ಹಾನ್ ಅಖ್ತರ್ ರವರು ನಿರ್ಮಾಣ ಮಾಡುತ್ತಿದ್ದಾರೆ.

English summary
Television Actress and Model Mouni Roy begins shooting for Akshay Kumar film 'Gold'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada