For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್' ನಟಿಯ ಕಾರಿನ ಮೇಲೆ ಬಿದ್ದ ಮೆಟ್ರೋ ಕಾಮಗಾರಿ ಕಲ್ಲು

  |
  ಮೆಟ್ರೊ ಮೇಲಿಂದ ಬಿದ್ದ ಕಲ್ಲು..! ಶಾಕ್ ಆದ KGF ನಟಿ. | Mouni Roy

  ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಿತ್ರದಲ್ಲಿ ನಟಿಸಿದ್ದ ನಟಿ ಮೌನಿ ರಾಯ್ ಕಾರಿನ ಮೇಲೆ ಭಾರಿ ಗಾತ್ರದ ಕಲ್ಲು ಬಿದ್ದಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಇದರಿಂದ ತೀವ್ರ ಆತಂಕಗೊಂಡ ನಟಿ ಮೌನಿ ರಾಯ್, ಮುಂಬೈ ಮೆಟ್ರೋ ಕಾಮಗಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ಮೌನಿ ರಾಯ್ ನಟಿಸುತ್ತಿರುವ ಮುಂದಿನ ಸಿನಿಮಾ 'ಮೇಡ್ ಇನ್ ಚೀನಾ' ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕಾಗಿ ಹೋಗುತ್ತಿದ್ದ ಸಂದರ್ಭದಲ್ಲಿ, ಜುಹು ಸಿಗ್ನಲ್ ಬಳಿ ಕಾರಿನ ಮೇಲೆ ದೊಡ್ಡ ಕಲ್ಲು ಬಿದ್ದಿದೆ.

  ವಿಶ್ವ ದಾಖಲೆ ಮಾಡಿದ 'ಕೆಜಿಎಫ್' ಹಿಂದಿ ಹಾಡುವಿಶ್ವ ದಾಖಲೆ ಮಾಡಿದ 'ಕೆಜಿಎಫ್' ಹಿಂದಿ ಹಾಡು

  ಜುಹು ಸಿಗ್ನಲ್ ಬಳಿ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು, 11 ಹಂತದ ಮೇಲಿಂದ ಕಲ್ಲು ಕೆಳಗೆ ಬಿದ್ದಿದೆ. ಅದು ನೇರವಾಗಿ ಮೌನಿ ರಾಯ್ ಕಾರಿನ ಮೇಲೆ ಬಿದ್ದು, ಗಾಜನ್ನ ಹೊಡೆದು ಒಳಗೆ ನುಗ್ಗಿದೆ. ಆದರೆ ಯಾವುದೇ ಅಪಾಯ ಸಂಭವಿಸಿಲ್ಲ.

  ಕಾರು ಡ್ಯಾಮೇಜ್ ಆಗಿರುವ ವಿಡಿಯೋವನ್ನ ಟ್ವಿಟ್ಟರ್ ನಲ್ಲಿ ಶೇರ್ ಮಾಡಿರುವ ಮಾಡಿರುವ ಮೌನಿ ರಾಯ್ ''ಒಂದು ವೇಳೆ ಆ ಕಲ್ಲು ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿ ಮೇಲೆ ಬಿದ್ದಿದ್ದರೆ ಏನಾಗುತ್ತಿತ್ತು? ಇಂತಹ ಕಳಪೆ ಕಾಮಗಾರಿ ಮಾಡುತ್ತಿರುವ ಮುಂಬೈ ಮೆಟ್ರೋ ಅವರಿಗೆ ಏನು ಮಾಡಬೇಕು ನೀವೇ ಹೇಳಿ'' ಎಂದು ಪ್ರಶ್ನೆಸಿದ್ದಾರೆ.

  ಬರೋಬ್ಬರಿ 100 ಮಿಲಿಯನ್ ಹಿಟ್ಸ್ ಪಡೆದ 'ಕೆಜಿಎಫ್' ಹಾಡುಬರೋಬ್ಬರಿ 100 ಮಿಲಿಯನ್ ಹಿಟ್ಸ್ ಪಡೆದ 'ಕೆಜಿಎಫ್' ಹಾಡು

  ಮೌನಿ ರಾಯ್ ಅವರ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಅಭಿಮಾನಿಗಳು, ಅವರ ಕ್ಷೇಮದ ಬಗ್ಗೆ ವಿಚಾರಿಸುತ್ತಿದ್ದಾರೆ. ಜೊತೆಗೆ ಈ ಬಗ್ಗೆ ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಎಂದು ಸಲಹೆ ಕೊಟ್ಟಿದ್ದಾರೆ.

  ಅಂದ್ಹಾಗೆ, ಯಶ್ ಅಭಿನಯದ ಕೆಜಿಎಫ್ ಚಿತ್ರದ ಹಿಂದಿ ಅವತರಣಿಕೆಯಲ್ಲಿ 'ಗಲಿ ಗಲಿ' ಎಂಬ ಹಾಡಿಗೆ ಮೌನಿ ರಾಯ್ ಹೆಜ್ಜೆ ಹಾಕಿದ್ದರು. ಕನ್ನಡದಲ್ಲಿ ಮೂಡಿಬಂದಿದ್ದ ಜೋಕೆ ಹಾಡಿನ ಬದಲು ಹಿಂದಿಯಲ್ಲಿ 'ಗಲಿ ಗಲಿ' ಬದಲಾಯಿಸಿಕೊಂಡಿದ್ದರು.

  English summary
  Kgf actress Mouni Roy's Car Damaged By Falling Rock at mumbai juhu signal.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X