For Quick Alerts
  ALLOW NOTIFICATIONS  
  For Daily Alerts

  'KGF' ನಟಿಗೆ ಮದುವೆ ಫಿಕ್ಸ್ ಆಯ್ತಾ? ಅನುಮಾನ ಮೂಡಿಸಿದ ಡೈಮಂಡ್ ರಿಂಗ್

  |

  'ಕೆಜಿಎಫ್' ಸಿನಿಮಾದ 'ಗಲಿ ಗಲಿ ಮೇ' ಹಾಡಿಗೆ ಹೆಜ್ಜೆ ಹಾಕಿದ್ದ ನಟಿ ಮೌನಿ ರಾಯ್ ಮದುವೆ ಸುದ್ದಿ ವೈರಲ್ ಆಗಿದೆ. ದಿಢೀರನೆ ಮದುವೆ ಸುದ್ದಿ ವೈರಲ್ ಆಗಲು ಕಾರಣ ಮೌನಿ ರಾಯ್ ಧರಿಸಿರುವ ಡೈಮಂಡ್ ರಿಂಗ್.

  ಇತ್ತೀಚಿಗೆ ನಟಿ ಮೌನಿ ರಾಯ್ ಡೈಮಂಡ್ ರಿಂಗ್ ಧರಿಸಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ದುಬಾರಿ ಡೈಮಂಡ್ ರಿಂಗ್ ಹಾಕಿರುವ ಕೈಯನ್ನು ಮುಂದೆ ಮಾಡಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಈ ಫೋಟೋ ಹಂಚಿಕೊಂಡ ಬಳಿಕ ಮೌನಿ ರಾಯ್ ಗೆ ನಿಶ್ಚಿತಾರ್ಥ ಆಯ್ತಾ ಎನ್ನುವ ಅನುಮಾನ ಮೂಡಿಸಿದೆ.

  ಥೈಲ್ಯಾಂಡ್ ಬೀಚ್ ನಲ್ಲಿ ಹಾಟ್ ಅವತಾರತಾಳಿದ 'ಕೆಜಿಎಫ್' ಸುಂದರಿಥೈಲ್ಯಾಂಡ್ ಬೀಚ್ ನಲ್ಲಿ ಹಾಟ್ ಅವತಾರತಾಳಿದ 'ಕೆಜಿಎಫ್' ಸುಂದರಿ

  ಅಭಿಮಾನಿಗಳು ಮಾತ್ರವಲ್ಲದೆ ಸಿನಿಮಾ ಗಣ್ಯರು ಸಹ ಮೌನಿ ರಾಯ್ ಎಂಗೇಜ್ ಆದ್ರಾ? ಎಂದು ಅಚ್ಚರಿ ಪಡುತ್ತಿದ್ದಾರೆ. ಅಂದ್ಹಾಗೆ ಮೌನಿ ರಿಂಗ್ ಧರಿಸಿ ಪೋಸ್ ನೀಡಿದ್ದು ಜಾಹೀರಾತಿಗಾಗಿ. ಜ್ಯುವೆಲ್ಲರಿ ಜಾಹೀರಾತಿನಲ್ಲಿ ನಟಿ ಮೌನಿ ಕಾಣಿಸಿಕೊಂಡಿದ್ದಾರೆ. ಅದೇ ಫೋಟೋವನ್ನು ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ಸರಿಯಾಗಿ ಗಮನಿಸಿದರೆ ಜಾಹೀರಾತಿನ ಸತ್ಯ ಗೊತ್ತಾಗುತ್ತೆ. ಆದರೂ ಅಭಿಮಾನಿಗಳು ಮೌನಿ ಎಂಗೇಜ್ ಆಗಿದ್ದಾರಾ, ಪರೋಕ್ಷವಾಗಿ ಹೀಗೇ ಹೇಳುತ್ತಿದ್ದಾರಾ ಎನ್ನುವ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

  ಕುರುಕ್ಷೇತ್ರ ಸಿನಿಮಾ ಮಾಡ್ತೀನಿ ಅಂತ ಬಂದಾಗ ಮುನಿರತ್ನನಿಗೆ ಬೈದು ಕಳ್ಸಿದ್ದೆ | Darshan | Munirathna

  ಕಿರುತೆರೆ ಮೂಲಕ ಖ್ಯಾತಿಗಳಿಸಿರುವ ನಟಿ ಮೌನಿ ರಾಯ್ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಐಟಂ ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕ ಪಡ್ಡೆಗಳ ನಿದ್ದೆಗೆಡಿಸುತ್ತಿರುವ ಈ ಸುಂದರಿಗೆ ಈಗ 35ವರ್ಷ. ಮೌನಿ ಸದ್ಯ ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ಅಭಿನಯದ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  English summary
  KGF fame Actress Mouni Roy flaunts her large diamond ring on her ring finger, is she got engaged?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X