ಮದುವೆ ಬಗ್ಗೆ ಮೌನ ಮುರಿದ KGF ಬೆಡಗಿ ಮೌನಿ ರಾಯ್!
ಬಾಲಿವುಡ್‌ನಲ್ಲಿ ಕೆಲವು ಸಿನಿಮಾಗಳು ಮತ್ತು ಐಟಂ ಹಾಡುಗಳಲ್ಲಿ ಗುರುತಿಸಿಕೊಂಡ ನಟಿ ಮೌನಿ ರಾಯ್ ತಮ್ಮ ಮದುವೆ ವಿಚಾರಕ್ಕೆ ಹೆಚ್ಚು ಸುದ್ದಿ ಆಗುತ್ತಿದ್ದಾರೆ. ಮೌನಿ ಮದುವೆ ಬಗ್ಗೆ ಸಾಕಷ್ಟು ಕುತೂಹಲಕಾರಿ ವಿಚಾರಗಳು ಹರಿದಾಡಿವೆ. ಆದರೆ ಅವೆಲ್ಲಾ ಕೇವಲ ಗಾಸಿಪ್‌ಗಳು ಎಂದು ಹೇಳಲಾಗಿತ್ತು. ಆದರೆ ಈಗ ಎಲ್ಲದಕ್ಕೂ ಮೌನಿ ಉತ್ತರಿಸಿದ್ದಾಳೆ.
ಮೌನಿ ರಾಯ್ ಅವರು ಇತ್ತೀಚೆಗೆ ಮಾಧ್ಯಮದ ಕಣ್ಣಿಗೆ ಬಿದ್ದಿದ್ದಾರೆ. ಈ ವೇಳೆ ತಾನು ಮದುವೆ ಆಗುತ್ತಿರುವ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಮದುವೆ ಆಗುತ್ತಿರುವ ಕಾರಣ ಮಾಧ್ಯಮದವರು ಮೌನಿಗೆ ಶುಭಾಶಯಗಳನ್ನು ಕೋರಿದ್ದಾರೆ. ಅದಕ್ಕೆ ಸಂತಸದಿಂದಲೇ ಮೌನಿ ಉತ್ತರ ಕೊಟ್ಟಿದ್ದಾರೆ. ಎಲ್ಲರಿಗೂ ಧನ್ಯವಾದ ತಿಳಿಸಿ ತೆರಳಿದ್ದಾರೆ.
ಜನವರಿ 27ರಂದು ಮೌನಿ ಅವರು ಗೋವಾದಲ್ಲಿ ಮದುವೆ ಆಗುತ್ತಿದ್ದಾರೆ ಎನ್ನಲಾಗಿದೆ. ಗೋವಾದಲ್ಲಿ ಸಮಂತಾ ಮತ್ತು ನಾಗಚೈತನ್ಯ ಮದುವೆ ಆದ ಸ್ಥಳದಲ್ಲಿಯೇ ಮದುವೆ ಆಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಕೊವಿಡ್ ಕಾರಣ ಕೇವಲ ಕುಟುಂಬದವರು ಹಾಗೂ ಆಪ್ತರು ಮಾತ್ರ ಮದುವೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮುಂಬೈನಲ್ಲಿ ಆರತಕ್ಷತೆ ನಡೆಯಲಿದೆ. ಎನ್ನುವ ಸುದ್ದಿಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿವೆ.

ಅವರು ಹೊಸ ಜೀವನ ಆರಂಭಿಸುವುದಕ್ಕೂ ಮೊದಲೇ ಅವರಿಗೆ ಶುಭಾಶಯಗಳು ಬರುತ್ತಿವೆ. ಮೌನಿ ಮದುವೆ ಆಗುತ್ತಿರುವ ಹುಡುಗ
ಸೂರಜ್ ಅವರು ಉದ್ಯಮಿ ಆಗಿದ್ದು, ದುಬೈನಲ್ಲಿ ಸೆಟಲ್ ಆಗಿದ್ದಾರೆ. ಮೌನಿ ಅವರು ಈ ಹುಡುಗನ ಬಗ್ಗೆ ಮೌನ ವಹಿಸಿದ್ದಾರೆ. ಹೆಚ್ಚಾಗಿ ಏನನ್ನೂ ಮಾತನಾಡಿಲ್ಲ. ಇಬ್ಬರೂ ಅನೇಕ ವರ್ಷಗಳಿಂದ ಡೇಟ್ ಮಾಡುತ್ತಿದ್ದಾರೆ. ಇವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.
ಕೆಜಿಎಫ್ ಚಿತ್ರದ ಹಿಂದಿ ಅವತರಣಿಕೆಯಲ್ಲಿ ನಟಿ ಮೌನಿ ರಾಯ್ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಗಲಿ ಗಲಿ ಹಾಡಿಗೆ ಹೆಜ್ಜೆ ಹಾಕಿದ್ದರು. ಬಳಿಕ ಬಾಲಿವುಡ್ ನಲ್ಲೂ ಅವರಿಗೆ ಬೇಡಿಕೆ ಹೆಚ್ಚಿತು. ಜೊತೆಗೆ ಕೆಲವು ಸಿನಿಮಾಗಳಲ್ಲಿ ಮೌನಿ ರಾಯ್ ನಟಿಸಿದ್ದಾರೆ. ಇತ್ತೀಚೆಗೆ ಅವರ ಮದುವೆ ವಿಚಾರದ ಬಗ್ಗೆ ಸಾಕಷ್ಟು ವರದಿಗಳು ಹರಿದಾಡಿದ್ದವು. ಬಾಯ್ಫ್ರೆಂಡ್ ಸೂರಜ್ ನಂಬಿಯಾರ್ ಜತೆ ಮೌನಿ ರಾಯ್ ಮದುವೆ ಆಗಲಿದ್ದಾರೆ ಎನ್ನಲಾಗಿತ್ತು. ಆದರೆ, ಇಷ್ಟು ದಿನ ಈ ವಿಚಾರದಲ್ಲಿ ಅವರು ಮೌನ ವಹಿಸಿದ್ದರು. ಮೌನಿ ಈ ಬಗ್ಗೆ ಈಗ ಮೌನ ಮುರಿದಿದ್ದಾರೆ.


Click it and Unblock the Notifications











