ಕಂಠಪೂರ್ತಿ ಕುಡಿದು ಎಲ್ಲರೆದುರು ನಗೆಪಾಟಲಿಗೀಡಾದ 'ಕೆ.ಜಿ.ಎಫ್' ಚೆಲುವೆ...!
ಮೌನಿ ರಾಯ್ ಗೊತ್ತಲ್ಲವಾ.. ಕೆ.ಜಿ.ಎಫ್ ಚಿತ್ರದ ಹಿಂದಿ ವರ್ಷನ್‌ನಲ್ಲಿ ಹೆಜ್ಜೆ ಹಾಕಿದ್ದ ಮದನಾರಿ. ನೋಡಲು ಶಿಲಾಬಾಲಿಕೆಯಂತೆ ಇರುವ ಮೌನಿ ತಮ್ಮ ಕನಸಿನ ಈ ಪ್ರಯಾಣವನ್ನ ಆರಂಭ ಮಾಡಿದ್ದು ಕಿರುತೆರೆಯ ಮೂಲಕ. ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ ಧಾರಾವಾಹಿ ಇವರ ಮೊದಲ ಹೆಜ್ಜೆ.
ಆ ನಂತರ ಕಸ್ತೂರಿ.. ದೇವೊಂಕೇ ದೇವ್ ಮಹಾದೇವ್ ಸೇರಿ ಕೆಲ ಧಾರಾವಾಹಿ ಮಾಡಿದ್ದ ಮೌನಿ ರಾಯ್ ಅದೃಷ್ಟ ಏಕ್ತಾ ಕಪೂರ್ ಕಚೇರಿಯಲ್ಲಿತ್ತು. ಏಕ್ತಾ ನಿರ್ಮಾಣದ ನಾಗಿನ್ ಬೇಕಿದ್ದ ಹೆಸರನ್ನ ಇವರಿಗೆ ತಂದು ಕೊಡ್ತು.

ಅಲ್ಲಿಂದಾಚೆ.. ಮೌನಿ ಒಂದಾದ ಮೇಲೊಂದು ಅವಕಾಶ ಪಡೆದರು. ಐಟಂ ಹಾಡುಗಳಿಗೆ ಹೆಜ್ಜೆ ಹಾಕ್ತಾನೇ, ನಾಯಕಿಯಾಗುವ ''ಗೋಲ್ಡ್''ನ ಅವಕಾಶ ಪಡೆದರು. ಬ್ರಹ್ಮಾಸ್ತ್ರ ಚಿತ್ರದಲ್ಲಿ ಕೂಡ ಪ್ರಮುಖ ಪಾತ್ರವನ್ನ ನಿರ್ವಹಿಸಿದ್ದರು. ಎರಡು ವರ್ಷದ ಹಿಂದೆ ಸೂರಜ್ ನಂಬಿಯಾರ್ ಅವರನ್ನ ಮದುವೆಯೂ ಆದರು. ಸದ್ಯಕ್ಕೆ ಮೌನಿ ಸುಖಿ ಸಂಸಾರಿ. ಇಂಥಾ ಮೌನಿ ರಾಯ್ ನಿನ್ನೆ ಹೊಸ ವರ್ಷದ ಪ್ರಯುಕ್ತ ಕುಣಿದು ಕುಪ್ಪಳಿಸಿ ಆಚೆ ಬರುತ್ತಿದ್ದ ಸಮಯದಲ್ಲಿ ದೊಪ್ಪನೆ ಕೆಳಗೆ ಬಿದ್ದಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತೀವೃವಾದ ಚರ್ಚೆಗೆ ಕೂಡ ಈ ವಿಡಿಯೋ ಕಾರಣವಾಗಿದೆ.
ಅಸಲಿಗೆ ನಿನ್ನೆ ಹೊಸ ವರ್ಷವನ್ನು ಸ್ವಾಗತ ಮಾಡಲು ಮೌನಿ ರಾಯ್ ತಮ್ಮ ಪತಿ ಪತಿದೈವ ಸೂರಜ್ ನಂಬಿಯಾರ್ ಮತ್ತು ತಮ್ಮ ಗಳಸ್ಯ ಕಂಠಸ್ಯ ಸ್ನೇಹಿತೆ ದಿಶಾ ಪಠಾನಿ ಜೊತೆ ಮುಂಬೈನ ಪಬ್‌ವೊಂದಕ್ಕೆ ತೆರಳಿದ್ದರು. ಮಸ್ತ್ ಮಜಾ ಮಾಡಿ ಆ ನಂತರ ಅಲ್ಲಿಂದ ಹೊರ ಬಂದರು. ಇನ್ನು. ಬಾಲಿವುಡ್‌ನ ಸೆಲೆಬ್ರೇಟಿಗಳು ತಮ್ಮ ಖಾಸಗಿ ಬದುಕನ್ನು ಪಾಪರಾಜಿಗಳ ಬಳಿ ಮುಡಿಪಾಗಿಟ್ಟಿದ್ದಾರೆ. ಈ ಹಿನ್ನೆಲೆ ಮೌನಿ ರಾಯ್ ಮತ್ತು ದಿಶಾ ಪಠಾನಿ ಪಬ್‌ನಿಂದ ಹೊರ ಬರುವುದನ್ನೇ ಕಾಯುತ್ತಾ ಹೊರಗಡೆ ಪಾಪರಾಜಿಗಳು ಬಿಡಾರ ಹೂಡಿದ್ದರು. ಇದೇ ಸಮಯದಲ್ಲಿ ತಮ್ಮ ಗಂಡ ಸೂರಜ್ ನಂಬಿಯಾರ್ ಮತ್ತು ದಿಶಾ ಪಠಾನಿ ಜೊತೆ ಹೊರ ಬಂದ ಮೌನಿ ರಾಯ್ ನಡೆಯಲಾಗದೇ ಕೆಳಗೆ ಬಿದ್ದಿದ್ದಾರೆ. ಕೂಡಲೇ ಮೌನಿ ಸುತ್ತ ಇದ್ದ ಭದ್ರತಾ ಸಿಬ್ಬಂದಿ ನೆರವಿಗೆ ಬಂದಿದ್ದು ಆ ನಂತರ ಮೌನಿ ರಾಯ್ ಕೈಯನ್ನು ಹಿಡಿದು ಸೂರಜ್ ಕರೆದುಕೊಂಡು ಹೋಗಿದ್ದಾರೆ. ಕಾರನ್ನು ಹತ್ತಿಸಿದ್ದಾರೆ.

ಸದ್ಯ ಈ ವಿಡಿಯೋ ಹಲವಾರು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕೆಲವರು ನಿಲ್ಲಲು ಸಾಧ್ಯವಾಗದಷ್ಟು ಯಾಕೆ ಕುಡಿಯಬೇಕು ಎಂಬ ಪ್ರಶ್ನೆಯನ್ನು ಕೇಳಿದರೆ. ಇನ್ನು ಕೆಲವರು ಮೌನಿ ರಾಯ್ ಕಂಠಪೂರ್ತಿ ಕುಡಿದಿದ್ದಾರೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕುಡಿದಿದ್ದು ಜಾಸ್ತಿಯಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇದೆಲ್ಲವೂ ಸಹವಾಸ ದೋಷದಿಂದ ಆಗಿರುವುದು ಎಂದಿದ್ದಾರೆ. ಅಲ್ಲಲ್ಲಿ ಕೆಲವರು ಮೌನಿ ರಾಯ್ ಅವರ ಕುಶಲೋಪರಿಯನ್ನು ವಿಚಾರಿಸಿದರೆ ಇನ್ನು ಕೆಲವರು ತಾರೆಯರಿಗೂ ವ್ಯೆಯಕ್ತಿಕ ಬದುಕು ಇರುತ್ತೆ ಅವರ ಖಾಸಗಿ ಬದುಕಿಗೆ ಗೌರವ ಕೊಡಿ ಎಂದಿದ್ದಾರೆ.
ಇನ್ನುಳಿದಂತೆ ಸುಲ್ತಾನ್ ಆಫ್ ದೆಹಲಿ ವೆಬ್ ಸೀರಿಸ್‌ನಲ್ಲಿ ಕಾಣಿಸಿಕೊಂಡಿದ್ದ ಮೌನಿ ರಾಯ್ ಸದ್ಯಕ್ಕೆ ದಿ ವರ್ಜಿನ್ ಟ್ರೀ ಎಂಬ ಚಿತ್ರವನ್ನ ಮುಗಿಸಿದ್ದಾರೆ. ಬೇರೆ ಬೇರೆ ತರಹದ ಪಾತ್ರಗಳನ್ನ ಎದುರು ನೋಡುತ್ತಿದ್ದಾರೆ. ಇನ್ನೂ ಇದೆಲ್ಲದರ ನಡುವೆ ಕುಣಿಯಲು ಆಲ್ಬಂ ಹಾಡುಗಳು ಇದ್ದೇ ಇವೆ. ಒಟ್ನಲ್ಲಿ ಸೆಲೆಬ್ರೆಟಿಗಳು ಏನೋ ಮಾಡಲು ಹೋಗಿ ಮತ್ತೇನೋ ಅವಘಡಗಳಾಗಿ ಪಬ್ಲಿಕ್ಕಿನಲ್ಲಿ ಮಾನ ಕಳೆದುಕೊಂಡ ಸಾಕಷ್ಟು ಉದಾಹರಣೆಗಳಿವೆ. ಇಂತಹ ವಿಚಾರಕ್ಕೆ ಕೆಲವರು ನಾಚಿಕೊಂಡರೆ, ಮತ್ತೂ ಕೆಲವರು ಕೋಪಗೊಂಡು ಆ ಸ್ಥಳದಲ್ಲಿ ನಿಲ್ಲದೇ ನಾಟಕೀಯವಾಗಿ ಪರಾರಿಯಾಗಿರುತ್ತಾರೆ.ಮೌನಿ ರಾಯ್ ಇದಕ್ಕೆ ಸದ್ಯದ ಉದಾಹರಣೆ.


Click it and Unblock the Notifications











