ಹೆಣ್ಣು, ಹಣ ; ನಾಲ್ಕೇ ವರ್ಷಕ್ಕೆ ಮೌನಿ ರಾಯ್ ದಾಂಪತ್ಯ ಅಂತ್ಯವಾಗಲು ಕಾರಣವೇನು ? ಕೈ ಮುಗಿದು ಹೇಳಿದ್ದೇನು ಕೆಜಿಎಫ್ ಚೆಲುವೆ ?
ಮದುವೆಯಾದ ಹೊಸತರಲ್ಲಿ ಹಲವರು ಎರಡು ಹೆಸರು ಒಂದೇ ಉಸಿರು ಎನ್ನುವಂತೆ ಇರುತ್ತಾರೆ. ಆದರೆ.. ಕಾಲ ಕ್ರಮೇಣ ದಾಂಪತ್ಯದಲ್ಲಿನ ಈ ಪ್ರೀತಿ-ಪ್ರಣಯ ನಿಧಾನಕ್ಕೆ ನೇಪಥ್ಯಕ್ಕೆ ಸರಿಯಲು ಶುರು ಮಾಡುತ್ತೆ. ಅಲ್ಲಿಯವರೆಗೆ ಕಾಣದ ಭಿನ್ನಾಭಿಪ್ರಾಯಗಳು ಕಾಣುತ್ತವೆ. ಇನ್ನೂ ಯಾವುದೇ ಸಂಬಂಧವಾದರೂ ಸರಿ, ಅಲ್ಲಿ ಪರಸ್ಪರ ನಂಬಿಕೆ ಇರಬೇಕು.
ಅರೆಂಜ್ ಮ್ಯಾರೇಜ್ ಆಗಿರಲಿ.. ಲವ್ ಮ್ಯಾರೇಜ್ ಆಗಿರಲಿ.. ಸಂಬಂಧದಲ್ಲಿ ಪರಸ್ಪರ ಪ್ರೀತಿ-ವಿಶ್ವಾಸ ಇರಬೇಕು. ಆಗಲೇ ದಾಂಪತ್ಯ ಜೀವನ ಯಶಸ್ವಿಯಾಗಿ ಮುನ್ನಡೆಯಲು ಸಾಧ್ಯ. ಆದರೆ.. ಬದಲಾದ ಈ ಕಾಲದಲ್ಲಿ. ಬದುಕಲು ದೊರೆತ ಅಸಂಖ್ಯ ಅವಕಾಶಗಳು, ವ್ಯಕ್ತಿ ಸ್ವಾತಂತ್ರ್ಯ .. ಹೊಂದಾಣಿಕೆ ಕೊರತೆ .. ದೈಹಿಕ ಅತೃಪ್ತಿ .. ಪ್ರೀತಿಯ ಕೊರತೆ ..

ಹೀಗೆ ಮುಂತಾದ ಕಾರಣಗಳಿಂದ ಹಲವರು ಮದುವೆಯ ನಂತರ ಅನೈತಿಕ ಸಂಬಂಧಕ್ಕೆ ಹಾತೊರೆಯುತ್ತಿದ್ದಾರೆ. ವೈವಾಹಿಕ ಸಂಬಂಧದಲ್ಲಿ ಸಿಗದಿದ್ದನ್ನು ಹೊರಗಡೆ ಹುಡುಕುವ ಮನೋಭಾವ ಬೆಳೆಸಿಕೊಳ್ಳುತ್ತಾರೆ .
ಈ ಸಾಲಿನಲ್ಲಿ ಕೆಜಿಎಫ್‌ನ ಚೆಲುವೆ ಮೌನಿ ರಾಯ್ ಅವರ ಗಂಡ ಸೂರಜ್ ನಂಬಿಯಾರ್ ಕೂಡ ಇದ್ದಾರಾ..? ಗೊತ್ತಿಲ್ಲ. ಆದರೆ. ನಾಲ್ಕೇ ವರ್ಷಕ್ಕೆ ದಾಂಪತ್ಯ ಮುರಿದು ಬೀಳಲು ಅಕ್ರಮ ಸಂಬಂಧ ಮತ್ತು ಹಣದ ದಾಹವೇ ಕಾರಣ ಎನ್ನುವ ಮಾತು ಸದ್ಯ ಮುಂಬೈನಲ್ಲಿ ಕೇಳಿ ಬರುತ್ತಿದೆ.
ಹೌದು, ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ದಾಂಪತ್ಯದಲ್ಲಿ ಬಿರುಕು ಮೂಡಿರುವ ಅನುಮಾನ ಶುರುವಾದ ಬೆನ್ನಲ್ಲೇ, ಇನ್‌ಸ್ಟಾಗ್ರಾಮ್‌ನಲ್ಲಿ ಇಬ್ಬರು ಪರಸ್ಪರ ಅನ್‌ಫಾಲೋ ಮಾಡಿರುವ ವಿಚಾರವನ್ನು ಹಲವರು ಕಂಡು ಹಿಡಿದಿದ್ದರು.
ಈ ಅಂತೆ-ಕಂತೆಗಳಿಗೆ ಪೂರಕವಾಗಿ ಮೌನಿಯ ಗಂಡ ಸೂರಜ್ ನಂಬಿಯಾರ್ ತಮ್ಮ ಮದುವೆ ಫೋಟೊಗಳನ್ನೆಲ್ಲಾ ಡಿಲೀಟ್ ಮಾಡಿದ್ದರು. ಆ ನಂತರ ಮೌನಿ ರಾಯ್ ಅವರ ಗಳಸ್ಯ ಕಂಠಸ್ಯ ಸ್ನೇಹಿತೆ ದಿಶಾ ಪಠಾಣಿ ಕೂಡ ಸೂರಜ್ ನಂಬಿಯಾರ್ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದರು.

ಇದು ಸಾಲದು ಎಂಬಂತೆ ಕೊನೆಗೆ ಸೂರಜ್ ನಂಬಿಯಾರ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನೇ ಡಿ ಆಕ್ಟಿವೇಟ್ ಮಾಡಿದರು. ಇದೆಲ್ಲದರಿಂದ ಉರಿಯುವ ಬೆಂಕಿಗೆ ಇದರಿಂದ ತುಪ್ಪ ಸುರಿದಂತಾಗಿತ್ತು. ಮೌನಿ ಮತ್ತು ಸೂರಜ್ ವಿಚ್ಚೇದನದತ್ತ ಸಾಗುತ್ತಿರುವುದು ಖಚಿತ ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು.
ಹೀಗಿರುವಾಗ ಇದೀಗ ಇವರ ಸಂಸಾರಕ್ಕೆ ಕೊಳ್ಳಿ ಬೀಳಲು ಪ್ರಮುಖ ಕಾರಣ ಹಣ ಮತ್ತು ಹೆಣ್ಣಿನ ವಿಚಾರ ಎಂದು ''ಎಬಿಪಿ ನ್ಯೂಸ್'' ವರದಿ ಮಾಡಿದೆ. ಈ ಕುರಿತು ''ಸಾಸ್ ಬಹು ಔರ್ ಸಾಜಿಶ್'' ಕಾರ್ಯಕ್ರಮದಲ್ಲಿ ವರದಿಯನ್ನು ಪ್ರಸಾರ ಮಾಡಿರುವ ''ಎಬಿಪಿ ನ್ಯೂಸ್'' ಸೂರಜ್ ನಂಬಿಯಾರ್ ಗೆ ಬೇರೊಬ್ಬರ ಜೊತೆ ಅಕ್ರಮ ಸಂಬಂಧ ಇದೆ ಎಂದು ಹೇಳಿದೆ. ಮೌನಿಗೆ ಸೂರಜ್ ನಂಬಿಯಾರ್ ನಂಬಿಕೆ ದ್ರೋಹವನ್ನು ಮಾಡಿದ್ದಾರೆ ಎಂದು ಹೇಳಿದೆ.
ಇನ್ನು ಸೂರಜ್ ವೃತ್ತಿಯಲ್ಲಿ ಬ್ಯಾಂಕರ್ ಮತ್ತು ಉದ್ಯಮಿ. ಆದಾಗ್ಯೂ ಹೆಂಡತಿ ಕಷ್ಟ ಪಟ್ಟು ಬೆವರು ಸುರಿಸಿ ದುಡಿದ ಹಣವನ್ನು ಸೂರಜ್ ದುರುಪಯೋಗ ಮಾಡಿಕೊಳ್ಳುತ್ತಿದ್ದರು ಎಂದು ಕೂಡ ಎಬಿಪಿ ನ್ಯೂಸ್‌ನ ''ಸಾಸ್ ಬಹು ಔರ್ ಸಾಜಿಶ್'' ಕಾರ್ಯಕ್ರಮದಲ್ಲಿ ಉಲ್ಲೇಖ ಮಾಡಲಾಗಿದೆ. ಸೂರಜ್ ಅವರ ನಡವಳಿಕೆಯಿಂದ ಮೌನಿ ತೀವ್ರವಾಗಿ ನೊಂದಿದ್ದಾರೆ ಎಂದು ಕೂಡ ಹೇಳಲಾಗಿದೆ.
ಅಂದ್ಹಾಗೇ ಮೌನಿ ಮತ್ತು ಸೂರಜ್ ಕೇವಲ ಗಂಡ-ಹೆಂಡತಿಯಲ್ಲ. ಬದಲಿಗೆ ಇವರು ಇಬ್ಬರು ವ್ಯವಹಾರದಲ್ಲೂ ಕೂಡ ಪಾಲುದಾರರು. ಇಬ್ಬರೂ ಸೇರಿ ''ಬದ್ಮಾಶ್'' ಎಂಬ ಹೆಸರಿನ ರೆಸ್ಟೋರೆಂಟ್ ಸರಣಿಯನ್ನು ನಡೆಸುತ್ತಿದ್ದಾರೆ. ಈಗ ಕೇಳಿಬರುತ್ತಿರುವ ಹಣಕಾಸಿನ ಅಕ್ರಮ ಆರೋಪ ನಿಜವಾಗಿದ್ದರೆ, ಈ ವಿಚ್ಛೇದನ ಕೇವಲ ಭಾವನಾತ್ಮಕವಾಗಿ ಅಷ್ಟೇ ಅಲ್ಲದೆ, ಕಾನೂನಾತ್ಮಕವಾಗಿ ಮತ್ತು ಆರ್ಥಿಕವಾಗಿ ದೊಡ್ಡ ಸಮರಕ್ಕೆ ಮುಂಬರುವ ದಿನಗಳಲ್ಲಿ ಕಾರಣವಾದರೂ ಆಗಬಹುದು.
ಇನ್ನು ಇದೆಲ್ಲದರ ನಡುವೆ ತಮ್ಮ ವಿಚ್ಚೇದನದ ವದಂತಿಗೆ ಮೌನಿ ರಾಯ್ ಪ್ರತಿಕ್ರಿಯೆ ನೀಡಿದ್ದಾರೆ. ದಯಮಾಡಿ ಸುಳ್ಳು ಕಥೆಗಳನ್ನು ಹೆಣೆಯಬೇಡಿ, ನಮಗೆ ಸ್ವಲ್ಪ ಸಮಯ ಮತ್ತು ಗೌಪ್ಯತೆಯನ್ನು ನೀಡಿ ಎಂದು ಮನವಿ ಮಾಡಿದ್ದಾರೆ. ನೇರವಾಗಿ ವಿಚ್ಛೇದನದ ಸುದ್ದಿಯನ್ನು ಮೌನಿ ರಾಯ್ ನಿರಾಕರಿಸದಿದ್ದರೂ, ಸುಳ್ಳು ಸುದ್ದಿಗಳು ಎಂದು ಹೇಳುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನವನ್ನು ಮಾಡಿದಂತೆ ಇದೆ. ಆದರೆ ಸೂರಜ್ ಅವರ ಮೌನ ಮಾತ್ರ ಹಲವು ಅನುಮಾನಗಳಿಗೆ ಇದೇ ವೇಳೆ ದಾರಿ ಮಾಡಿಕೊಟ್ಟಿದೆ.



Click it and Unblock the Notifications