ಕೇವಲ ನಾಲ್ಕೇ ವರ್ಷಕ್ಕೆ ಮುರಿದು ಬಿತ್ತು 'ಕೆಜಿಎಫ್‌' ಚೆಲುವೆಯ ದಾಂಪತ್ಯ ? ಮೌನಿ ರಾಯ್‌ ಸಂಸಾರದಲ್ಲಿ ಅಲ್ಲೋಲ .. ಕಲ್ಲೋಲ ?

ದುಡ್ಡು ಎಲ್ಲಿ ಹೆಚ್ಚಿರುತ್ತೆ ಅಲ್ಲಿ ಪ್ರೀತಿ ಕಡಿಮೆ ಇರುತ್ತೆ ಎನ್ನುವ ಮಾತನ್ನು ಹಲವರು ಹೇಳುತ್ತಾರೆ. ಕೆಲವರ ಬದುಕಿನಲ್ಲಿ ದುಡ್ಡು..ಆಸ್ತಿ.. ಐಶ್ವರ್ಯ.. ಹೆಚ್ಚಾದಂತೆ ನೆಮ್ಮದಿ ನಿಧಾನವಾಗಿ ಮಾಯವಾಗುತ್ತೆ. ಚಿತ್ರರಂಗದಲ್ಲಿಯಂತೂ ಇದಕ್ಕೆ ಹತ್ತು ಹಲವು ಉದಾಹರಣೆಗಳು ಕೂಡ ಇವೆ. ಇಲ್ಲಿ ಶ್ರೀಮಂತರೆಂದು ಕರೆಸಿಕೊಳ್ಳುವ ಅನೇಕರ ಬದುಕಿನಲ್ಲಿ ಪ್ರೀತಿ ಮರಿಚೀಕೆಯಾಗಿರುತ್ತೆ.

ಯಾರು ಯಾವ ಉದ್ದೇಶಕ್ಕೆ ಲವ್ ಮಾಡ್ತಾರೆ.. ಆ ನಂತರ ಯಾಕೆ ಮದುವೆಯಾಗ್ತಾರೆ.. ಎನ್ನುವುದು ಅವರವರಿಗೆ ಗೊತ್ತಾದರೂ ಹಲವರ ದಾಂಪತ್ಯ ಇಲ್ಲಿ ಮುರಿದು ಬಿದ್ದಿವೆ. ಅದರಲ್ಲಿಯೂ ಕಳೆದ ಮೂರು ನಾಲ್ಕು ವರ್ಷಗಳಲ್ಲಿ ಚಿತ್ರರಂಗದಲ್ಲಿ ಮದುವೆ ಮತ್ತು ಪ್ರೀತಿಗೆ ಅರ್ಥವೇ ಇಲ್ಲದಂತಾಗಿದೆ.

KGF Sensation Mouni Roy amp amp Suraj Nambiar Heading for Divorce Shocking Social Media Snub Sparks Split

ಅನ್ಯೋನ್ಯತೆಯ ಕೊರತೆಯಿಂದ.. ಚಿಕ್ಕ ಚಿಕ್ಕ ಕಾರಣಗಳಿಂದ ಹಲವರು ಸಂಬಂಧ ಮುರಿದುಕೊಂಡು ಎದ್ದು ಬಂದಿದ್ದಾರೆ. ಈ ಸಾಲಿಗೆ ಈಗ ಮೌನಿ ರಾಯ್ ಕೂಡ ಸೇರಿಕೊಂಡಿದ್ದಾರಾ..? ಗೊತ್ತಿಲ್ಲ. ಆದರೆ ಸದ್ಯ ಮೌನಿ ರಾಯ್ ದಾಂಪತ್ಯ ಜೀವನದ ಸುತ್ತ ಮುತ್ತ ಹಲವು ಪ್ರಶ್ನೆಗಳು ಎದ್ದಿವೆ.

ಹೌದು, ಮೌನಿ ರಾಯ್.. ''ಕೆ.ಜಿ.ಎಫ್'' ಚಿತ್ರದ ಹಿಂದಿ ವರ್ಷನ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್ ಜೊತೆ ಹೆಜ್ಜೆ ಹಾಕಿದ್ದ ಮದನಾರಿ. ನೋಡಲು ಶಿಲಾಬಾಲಿಕೆಯಂತೆ ಇರುವ ಮೌನಿ ತಮ್ಮ ಕನಸಿನ ಈ ಪ್ರಯಾಣವನ್ನ ಆರಂಭ ಮಾಡಿದ್ದು ಕಿರುತೆರೆಯ ಮೂಲಕ. ''ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ'' ಧಾರಾವಾಹಿ ಇವರ ಮೊದಲ ಹೆಜ್ಜೆ.

ಆ ನಂತರ ''ಕಸ್ತೂರಿ''.. ''ದೇವೊಂಕೇ ದೇವ್ ಮಹಾದೇವ್'' ಸೇರಿ ಕೆಲ ಧಾರಾವಾಹಿ ಮಾಡಿದ್ದ ಮೌನಿ ರಾಯ್ ಅದೃಷ್ಟ ಏಕ್ತಾ ಕಪೂರ್ ಕಚೇರಿಯಲ್ಲಿತ್ತು. ಏಕ್ತಾ ನಿರ್ಮಾಣದ ''ನಾಗಿನ್'' ಬೇಕಿದ್ದ ಹೆಸರನ್ನ ಇವರಿಗೆ ತಂದು ಕೊಡ್ತು.

ಅಲ್ಲಿಂದಾಚೆ.. ಮೌನಿ ಒಂದಾದ ಮೇಲೊಂದು ಅವಕಾಶ ಪಡೆದರು. ಐಟಂ ಹಾಡುಗಳಿಗೆ ಹೆಜ್ಜೆ ಹಾಕ್ತಾನೇ, ನಾಯಕಿಯಾಗುವ ''ಗೋಲ್ಡ್‌''ನ ಅವಕಾಶ ಪಡೆದರು. ''ಬ್ರಹ್ಮಾಸ್ತ್ರ'' ಚಿತ್ರದಲ್ಲಿ ಕೂಡ ಪ್ರಮುಖ ಪಾತ್ರವನ್ನ ನಿರ್ವಹಿಸಿದ್ದರು.

KGF Sensation Mouni Roy amp amp Suraj Nambiar Heading for Divorce Shocking Social Media Snub Sparks Split

ಇಂಥಾ ಮೌನಿ ರಾಯ್ ನಾಲ್ಕು ವರ್ಷದ ಹಿಂದೆ ಅಂದರೆ ಜನವರಿ 27-2022ರಂದು ಗೋವಾದ ರೆಸಾರ್ಟ್‌ನಲ್ಲಿ ಸೂರಜ್ ನಂಬಿಯಾರ್ ಜೊತೆ ಅದ್ದೂರಿಯಾಗಿ ಮದುವೆ ಆಗಿದ್ದರು. ಬೆಂಗಾಲಿ ಮತ್ತು ಮಲಯಾಳಿ ಸಂಪ್ರದಾಯದಂತೆ ಇಬ್ಬರು ಹೊಸ ಬದುಕಿಗೆ ಮುನ್ನುಡಿ ಬರೆದಿದ್ದರು. ಆದರೆ ಈಗ ಇವರ ಸಂಸಾರ ಹಳಿ ತಪ್ಪಿರುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಇದಕ್ಕೆ ಪುರಾವೆಯೇ ಇವರ ಸೋಶಿಯಲ್ ಮೀಡಿಯಾ ಚಟುವಟಿಕೆ.

ಹೌದು, ಎಲ್ಲರಿಗೆ ಗೊತ್ತಿರುವಂತೆ ಸಿನಿಮಾ ಮಂದಿಗೆ ಮದ್ವೆ.. ಪ್ರೀತಿ.. ಬಟ್ಟೆ ಬದಲಿಸಿದಷ್ಟೇ ಸುಲಭ ಸಾಧ್ಯ. ಹೀಗಾಗಿಯೇ ಯಾವ ಕ್ಷಣದಲ್ಲಾದರೂ ಡಿವೋರ್ಸ್ ಸುದ್ದಿ ಹೊರ ಬರಬಹುದು ಎಂದು ಕಾಯುವ ಅನೇಕರು ಇವರ ಸಾಮಾಜಿಕ ಜಾಲತಾಣದ ಮೇಲೆ ನಿಗಾ ವಹಿಸಿರುತ್ತಾರೆ. ನಡಾವಳಿಯಲ್ಲಿ ಚೂರು ಆಚೀಚೆ ಆದರೂ ಸಾಕು ಇಡೀ ದಾಂಪತ್ಯದ ಕುಂಡಲಿಯನ್ನೇ ಹೆಕ್ಕಿ ತೆಗೆಯುತ್ತಾರೆ.

ಸದ್ಯ ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ವಿಚಾರದಲ್ಲಿ ಕೂಡ ಇದೇ ಆಗಿದ್ದು ಮೌನಿ ರಾಯ್ ಹಲವು ದಿನಗಳಿಂದ ತಮ್ಮ ಪತಿದೈವ ಸೂರಜ್ ಜೊತೆ ಯಾವುದೇ ಫೋಟೊ ಹಂಚಿಕೊಳ್ಳದಿರುವುದನ್ನು ಹಲವರು ಗಮನಿಸಿದ್ದಾರೆ. ಇಷ್ಟೇ ಅಲ್ಲ ಖಾಲಿ ಕುಂತ ಇನ್ನೂ ಕೆಲವರು ಇನ್‌ಸ್ಟಾಗ್ರಾಮ್‌ನಲ್ಲಿ ಇಬ್ಬರು ಪರಸ್ಪರ ಅನ್‌ಫಾಲೋ ಮಾಡಿರುವ ವಿಚಾರವನ್ನು ಕೂಡ ಕಂಡು ಹಿಡಿದಿದ್ದಾರೆ.

ಇದೆಲ್ಲದಕ್ಕೆ ಪೂರಕವಾಗಿ ಮೌನಿಯ ಗಂಡ ಸೂರಜ್ ನಂಬಿಯಾರ್ ತಮ್ಮ ಮದುವೆ ಫೋಟೊಗಳನ್ನೆಲ್ಲಾ ಡಿಲೀಟ್ ಮಾಡಿದ್ದಾರೆ. ವಿಚ್ಚೇದನದ ವದಂತಿ ಹಬ್ಬಲು ಇದಕ್ಕಿಂತ ಇನ್ನೇನು ಬೇಕು..? ಇದಕ್ಕೆ ಕೈಗನ್ನಡಿ ಎಂಬಂತೆ ಸದ್ಯ ಹಲವರು ಮೌನಿ ರಾಯ್ ಅವರ ದಾಂಪತ್ಯ ಜೀವನದ ಕುರಿತು ಚಿಂತೆ ಮಾಡುತ್ತಿದ್ಧಾರೆ.

ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಚರ್ಚೆಯನ್ನು ಕೂಡ ಮಾಡುತ್ತಿರುವ ಹಲವರು ಮೌನಿ ರಾಯ್ ಅವರಲ್ಲಿ ನೇರವಾಗಿಯೇ ಈ ಕುರಿತು ಪ್ರಶ್ನೆಯನ್ನು ಕೂಡ ಕೇಳುತ್ತಿದ್ದಾರೆ. ಆದರೆ, ಮೌನಿ ರಾಯ್ ಆಗಲಿ, ಸೂರಜ್ ನಂಬಿಯಾರ್ ಆಗಲಿ ಈ ಪ್ರಶ್ನೆಗಳಿಗೆ ಉತ್ತರ ಕೊಡುವ ಗೋಜಿಗೆ ಇನ್ನೂ ಹೋಗಿಲ್ಲ. ಈ ಹಿನ್ನೆಲೆ ಹಲವರು ಅಧಿಕೃತ ಹೇಳಿಕೆಗಾಗಿ ಕಾದು ಕುಂತಿದ್ದಾರೆ. ಮೌನಿ ರಾಯ್ ತಮ್ಮ ಈ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಎದ್ದಿರುವ ಪ್ರಶ್ನೆಗಳಿಗೆ ಉತ್ತರ ಕೊಡ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

English summary
SHOCKING: ‘KGF’ sensation Mouni Roy & Suraj Nambiar unfollow each other! Are they heading for divorce? Inside the digital move that stunned fans.
Read more about: mouni roy divorce rumours
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X