ಮೌನಿ ರಾಯ್ ವಿಚ್ಛೇದನ ; ಡಿವೋರ್ಸ್ ಘೋಷಿಸಿದ ಎರಡೇ ದಿನಕ್ಕೆ ಬಿಗ್ ಟ್ವಿಸ್ಟ್
ಬದಲಾದ ಈ ಕಾಲದಲ್ಲಿ ಪ್ರೀತಿ, ಮದುವೆ, ದಾಂಪತ್ಯ ಮತ್ತು ವಿಚ್ಚೇದನ ಅಂತಹ ವೈಯಕ್ತಿಕ ನಿರ್ಧಾರ, ಕೇವಲ ನಾಲ್ಕು ಗೋಡೆಯ ನಡುವೆ ಇತ್ಯರ್ಥವಾಗುತ್ತಿಲ್ಲ. ಆಪ್ತರ ಸಮ್ಮುಖದಲ್ಲಿ ಮುಗಿದು ಹೋಗುತ್ತಿಲ್ಲ. ಬದಲಿಗೆ ಆರು ಇಂಚಿನ ಮೊಬೈಲ್ ಮೂಲಕ ಹಲವರನ್ನು ತಲುಪುತ್ತಿವೆ. ಇಂದಿನ ದಿನಗಳಲ್ಲಿ ಲವರ್ಸ್ ಮತ್ತು ಮ್ಯಾರೀಡ್ ಕಪಲ್ಸ್ ಪಾಲಿಗೆ ಈ ಸೋಶಿಯಲ್ ಮೀಡಿಯಾನೇ ಅಧಿಕೃತವಾದ ಕೋರ್ಟ್ ರೂಮ್ ಆದಂತಾಗಿದೆ.
ಯಾರದ್ದಾದರೂ ನಡುವೆ ಸಂಬಂಧ ಚಿಗುರೊಡೆದರೆ ಅದರ ಸುಳಿವನ್ನು ಕೂಡ ಇನ್‌ಸ್ಟಾಗ್ರಾಮ್ ಕೊಡುತ್ತೆ. ಯಾರದ್ದಾದರೂ ಸಂಬಂಧ ಮುರಿದು ಬಿದ್ದರೂ ಕೂಡ ವಿಚಾರ ಇದೇ ಇನ್‌ಸ್ಟಾಗ್ರಾಮ್ ಮೂಲಕ ಜಗಜ್ಜಾಹೀರಾಗುತ್ತೆ. ಇನ್ನೂ ಚಿತ್ರರಂಗದಲ್ಲಿ ಲವ್ವು-ಬ್ರೇಕಪ್ಪು-ಮದುವೆ-ಡಿವೋರ್ಸು ತುಂಬಾನೇ ಕಾಮನ್ನು. ಹೀಗಾಗಿ ಹಲವರು ಇವರ ಇನ್‌ಸ್ಟಾಗ್ರಾಮ್ ಮೇಲೆ ಹದ್ದಿನ ಕಣ್ಣಿಡುತ್ತಾರೆ. ಉದಾಹರಣೆಗೆ ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ದಾಂಪತ್ಯ ಕಥೆಯನ್ನೇ ತೆಗೆದುಕೊಳ್ಳಿ.

ಹೌದು, ಎಲ್ಲರಿಗೆ ಗೊತ್ತಿರುವಂತೆ ಕೆಲ ದಿನಗಳ ಹಿಂದೆ ಮೌನಿ ರಾಯ್ ಮತ್ತು ಬೆಂಗಳೂರು ಮೂಲದ ದುಬೈ ಉದ್ಯಮಿ ಸೂರಜ್ ನಂಬಿಯಾರ್ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಮುನ್ಸೂಚನೆ ಹಲವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಸಿಕ್ಕಿತ್ತು. ಇವರ ದಾಂಪತ್ಯ ಜೀವನ ಚರ್ಚೆಗೆ ಕೂಡ ಗ್ರಾಸವಾಯ್ತು.
ಸೈಬರ್ ದಾಳಿ-ವೈಯಕ್ತಿಕ ನಿಂದನೆಗೆ ಹೆದರಿ ಸೂರಜ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನೇ ಡಿ-ಆಕ್ಟಿವೇಟ್ ಮಾಡಿದರು. ಮೌನಿ ರಾಯ್ ತಮ್ಮ ಮದುವೆಯ ಸುಂದರ ನೆನಪುಗಳನ್ನೆಲ್ಲಾ ಹೈಡ್ ಮಾಡಿದರು. ಇದೆಲ್ಲದರ ನಡುವೆ ಮೌನಿ ರಾಯ್ ಅವರ ಗಳಸ್ಯ ಕಂಠಸ್ಯ ಸ್ನೇಹಿತೆ ದಿಶಾ ಪಟಾನಿ ಕೂಡ ಸೂರಜ್ ನಂಬಿಯಾರ್ ಅವರನ್ನು ಅನ್ ಫಾಲೋ ಮಾಡಿದರು. ಇದೆಲ್ಲದರಿಂದ ಉರಿಯುವ ಬೆಂಕಿಗೆ ಇನ್ನೂ ತುಪ್ಪ ಸುರಿದಂತಾಗಿತ್ತು.
ಹಾಗಂತೆ-ಹೀಗಂತೆ ಎಂಬ ಮಾತು ಕೂಡ ಮುಂಬೈನೆಲ್ಲೆಡೆ ಕೇಳಿ ಬರುತ್ತಿತ್ತು. ತಮ್ಮ ವೈಯಕ್ತಿಕ ಬದುಕು ''ಬ್ರೇಕಿಂಗ್ ನ್ಯೂಸ್'' ಆಗಿರುವುದನ್ನು ಕಂಡು ದಯಮಾಡಿ ಸುಳ್ಳು ಕಥೆಗಳನ್ನು ಹೆಣೆಯಬೇಡಿ, ನಮಗೆ ಸ್ವಲ್ಪ ಸಮಯ ಮತ್ತು ಗೌಪ್ಯತೆಯನ್ನು ನೀಡಿ ಎಂದು ಮನವಿಯನ್ನು ಕೂಡ ಮೌನಿ ರಾಯ್ ಮಾಡಿದ್ದರು.
ಅಧಿಕೃತವಾಗಿ ತಮ್ಮ ದಾಂಪತ್ಯ ಮುರಿದು ಬಿದ್ದಿರುವುದು ಸತ್ಯ ಎಂದು ಮೌನಿ ಹೇಳಿದರು. ನಾವಿಬ್ಬರೂ ಪರಸ್ಪರ ಒಪ್ಪಿಗೆಯ ಮೇರೆಗೆ ದೂರವಾಗಲು ನಿರ್ಧಾರ ಮಾಡಿದ್ದೇವೆ ಎಂದು ಹೇಳಿದ್ದ ಮೌನಿ ರಾಯ್, ಈ ವಿಷಯವನ್ನು ಬಹಳ ಖಾಸಗಿಯಾಗಿ ಮತ್ತು ಶಾಂತಿಯುತವಾಗಿ ನಿಭಾಯಿಸಲು ನಮಗೆ ಸ್ವಲ್ಪ ಸಮಯ ಬೇಕಿದೆ ಎಂದು ಈ ಮೂಲಕ ತಿಳಿಸುತ್ತಿದ್ದೇವೆ ಎಂದಿದ್ದರು.

ಮೌನಿ ರಾಯ್ ಹೊರಡಿಸಿದ ಈ ಪ್ರಕಟಣೆಯನ್ನು ನೋಡಿದ ನಂತರ ಈ ಜೋಡಿಯನ್ನು ಇಷ್ಟಪಡುತ್ತಿದ್ದವರು ನಿರಾಸೆಗೊಂಡರು. ಇನ್ನು ಇವರಿಬ್ಬರ ಕಥೆ ಮುಗಿದ ಅಧ್ಯಾಯ ಎಂದುಕೊಂಡಿದ್ದರು. ಛೇ, ಶಾಶ್ವತವಾಗಿ ದೂರ ಆದರು ಎಂದೇ ಇವರ ಹಿಂಬಾಲಕರು ನೊಂದುಕೊಂಡಿದ್ದರು. ಆದರೆ ಇದು ಬಣ್ಣದ ಲೋಕ. ಇಲ್ಲಿ ಲವ್-ಬ್ರೇಕಪ್-ಮ್ಯಾರೇಜ್-ಡಿವೋರ್ಸ್ ಸ್ಟೋರಿಯಲ್ಲಿ ಟ್ವಿಸ್ಟ್ ಇರದಿದ್ದರೆ ಹೇಗೆ..?
ಇದಕ್ಕೆ ಕೈಗನ್ನಡಿ ಎಂಬಂತೆ ನಾವು ದೂರವಾಗುತ್ತಿದ್ದೇವೆ ಎಂದು ಈ ಹೇಳಿ ಇನ್ನೂ ವಾರವೂ ಆಗಿಲ್ಲ. ಅಷ್ಟರಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದೆ. ಸೆಲೆಬ್ರಿಟಿಗಳ ಡಿವೋರ್ಸ್ ಪ್ರಕರಣಗಳ ಇತಿಹಾಸದಲ್ಲೇ ಅತ್ಯಂತ ಅಪರೂಪ ಎನ್ನುವಂತೆ, ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ಮತ್ತೆ ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬರನ್ನೊಬ್ಬರು ಫಾಲೋ ಮಾಡಲು ಪ್ರಾರಂಭಿಸಿದ್ದಾರೆ. ಇಷ್ಟೇ ಅಲ್ಲ ತಮ್ಮ ಮದುವೆಯ ಫೋಟೊಗಳನ್ನು ಕೂಡ ಮೌನಿ ರಾಯ್ ರಿಸ್ಟೋರ್ ಮಾಡಿದ್ದಾರೆ.
ಈ ದಿಢೀರ್ ಬೆಳವಣಿಗೆಯಿಂದ ಡಿವೋರ್ಸ್ ಅನೌನ್ಸ್ ಮಾಡಿದ ಬೆನ್ನಲ್ಲೇ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಕನೆಕ್ಟ್ ಆಗಿರುವುದರ ಅರ್ಥವೇನು ಎಂದು ಹಲವರು ಈಗ ತಲೆ ಕೆಡಿಸಿಕೊಂಡಿದ್ಧಾರೆ. ಸಂಧಾನದ ಮುನ್ಸೂಚನೆಯಾ ? ಅಥವಾ ಸ್ನೇಹದ ಸಂಬಂಧ ಮುಂದುವರೆಸಲು ತೆಗೆದುಕೊಂಡ ನಿರ್ಧಾರವಾ..? ಎಂದು ಚರ್ಚೆ ಮಾಡುತ್ತಿದ್ದಾರೆ.
ಇನ್ನೂ ಎಲ್ಲರಿಗೆ ಗೊತ್ತಿರುವಂತೆ ದಾಂಪತ್ಯ ಜೀವನ ಮುಕ್ತಾಯವಾದ ನಂತರ ಹಲವರು ಕೆಸರೆರಚುತ್ತಾರೆ. ಹಾದಿ ಬೀದಿ ರಂಪ ಮಾಡುತ್ತಾರೆ. ಕೋರ್ಟ್ ಮೆಟ್ಟಿಲನ್ನೇರುತ್ತಾರೆ. ಆದರೆ ಇವರಿಬ್ಬರ ನಡೆ ಎಲ್ಲರಿಗಿಂತ ಭಿನ್ನವಾಗಿದೆ. ಹೀಗಾಗಿ ಈ ಇನ್‌ಸ್ಟಾಗ್ರಾಮ್ ಟ್ವಿಸ್ಟ್, ಪ್ಯಾಚ್-ಅಪ್‌ಗೆ ದಾರಿಯಾಗುತ್ತಾ ? ಅಥವಾ ಸ್ನೇಹಕ್ಕೆ ಮಾತ್ರ ಸೀಮಿತವಾಗುತ್ತಾ..? ಕಾಲವೇ ನಿರ್ಣಯಿಸಬೇಕಿದೆ.


Click it and Unblock the Notifications