For Quick Alerts
  ALLOW NOTIFICATIONS  
  For Daily Alerts

  ಮದುವೆ ತಯಾರಿಯಲ್ಲಿದ್ದಾರಾ 'KGF' ನಟಿ ಮೌನಿ? ಇಲ್ಲಿದೆ ಮಾಹಿತಿ

  By ಫಿಲ್ಮಿಬೀಟ್ ಡೆಸ್ಕ್
  |

  ಬಾಲಿವುಡ್ ನಟಿ, ಡಾನ್ಸರ್ ಮೌನಿ ರಾಯ್ ಮತ್ತೆ ಸುದ್ದಿಯಲ್ಲಿದ್ದಾರೆ. ಕೆಜಿಎಫ್ ಸಿನಿಮಾ ಮೂಲಕ ಕನ್ನಡಿಗರಿಗೂ ಚಿರಪರಿಚಿತರಾಗಿರುವ ನಟಿ ಮೌನಿ ರಾಯ್ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ನಟಿ ಮೌನಿ ರಾಯ್ ಕಳೆದ ಕೆಲವು ವರ್ಷಗಳಿಂದ ಸೂರಜ್ ನಂಬಿಯಾರ್ ಜೊತೆ ಡೇಟಿಂಗ್‌ನಲ್ಲಿದ್ದಾರೆ. ಸೂರಜ್ ಜೊತೆಯೇ ಮೌನಿ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

  ಅಂದಹಾಗೆ ಮೌನಿ ರಾಯ್ ಮದುವೆ ವಿಚಾರ ವೈರಲ್ ಆಗಲು ಕಾರಣವಾಗಿದ್ದು ಅವರ ಸೋದರ ಸಂಬಂಧಿಯ ಹೇಳಿಕೆ. ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮೌನಿ ಸೋದರ ಸಂಬಂಧಿ ಮದುವೆ ವಿಚಾರ ಬಹಿರಂಗ ಪಡಿಸಿದ್ದಾರೆ ಎಂದು ಆಂಗ್ಲ ವೆಬ್ ಪೋರ್ಟಲ್‌ಗಳು ವರದಿ ಮಾಡಿವೆ. ಮೌನಿ ರಾಯ್ ಅವರ ಸೋದರ ಸಂಬಂಧಿ ವಿದ್ಯುತ್ ರೊಯಿಸಾರ್ಕರ್, ಮುಂದಿನ ವರ್ಷ ಜನವರಿಯಲ್ಲಿ ಮದುವೆಯಾಗಲಿದ್ದಾರೆ. ಮದುವೆ ದುಬೈ ಅಥವಾ ಇಟಲಿಯಲ್ಲಿ ನಡೆಯಲಿದೆ ಎಂದು ಬಹಿರಂಗ ಪಡಿಸಿದ್ದಾರೆ ಎನ್ನುವ ಸುದ್ದಿ ಬಿತ್ತರವಾಗಿದೆ.

  ಈ ಬಗ್ಗೆ ಮೌನಿ ರಾಯ್ ಯಾವುದೇ ಪ್ರತಿಕ್ರಿಯೆ ನೀಡಿದೆ ಸೈಲೆಂಟ್ ಆಗಿದ್ದಾರೆ. ಆಂಗ್ಲ ವೆಬ್ ಪೋರ್ಟಲ್ ಪಿಂಕ್ ವಿಲ್ಲಾ ವರದಿ ಮಾಡಿದ್ದು, ನಟಿಯ ಹತ್ತಿರದ ಮೂಲವೊಂದು ನೀಡಿದ ಮಾಹಿತಿಯನ್ನು ಉಲ್ಲೇಖಿಸಿದ್ದಾರೆ. 2022ರಲ್ಲಿ ಮೌರಿ ರಾಯ್ ಮತ್ತು ಸೂರಜ್ ಮದುವೆಯಾವುದು ಸುಳ್ಳು ಎಂದು ಮೂಲಗಳು ಹೇಳಿರುವುದಾಗಿ ತಿಳಿಸಿದೆ.

  "ಮೌನಿ ಮದುವೆ ವಿಚಾರ ಮಾತುಕತೆಯಲ್ಲಿರುವುದು ನಿಜ. ಆದರೆ ಅದು ಜನವರಿಯಲ್ಲಿ ನಡೆಯುತ್ತಿಲ್ಲ. ಈ ಬಗ್ಗೆ ಸ್ವತಃ ಮೌನಿ ರಾಯ್ ಅವರೇ ಬಹಿರಂಗ ಪಡಿಸಲಿದ್ದಾರೆ" ಎಂದು ಮೂಲಗಳು ಆಂಗ್ಲ ವೆಬ್ ಪೋರ್ಟಲ್‌ಗೆ ಮಾಹಿತಿ ನೀಡಿದ್ದಾರೆ. ಅಂದಹಾಗೆ ಮೌನಿ ಮತ್ತು ಸೂರಜ್ ಇಬ್ಬರು ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಆದರೆ ಈ ಬಗ್ಗೆ ಮೌನಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

  2019ರಲ್ಲಿ ಸಂದರ್ಶನದಲ್ಲಿ ಮಾತನಾಡಿದ್ದ ಮೌನಿ, ಸೂರಜ್ ಜೊತೆಗಿನ ಡೇಟಿಂಗ್ ವದಂತಿಯನ್ನು ತಳ್ಳಿಹಾಕಿದ್ದರು. "ನಾನು ಒಂಟಿಯಾಗಿ ಇದ್ದೀನಿ. ನಾನು ಸರಿಯಾದ ವ್ಯಕ್ತಿಯನ್ನು ಭೇಟಿಯಾಗಬೇಕು. ನಾನು ಯಾರನ್ನಾದರೂ ಆರಸಿ ಡೇಟಿಂಗ್ ಮಡಲು ಸಾಧ್ಯವಿಲ್ಲ. ಈ ಸಮಯದಲ್ಲಿ ನನ್ನ ಜೀವನದಲ್ಲಿ ತೆರೆದುಕೊಂಡ ಕಿಟಕಿಗೆ (ಸಿನಿಮಾಗಳಿಗೆ) ನಾನು ಕೃತಜ್ಞನಾಗಿದ್ದೇನೆ" ಎಂದು ಹೇಳಿದ್ದರು.

  ಸೂರಜ್ ಜೊತೆ ಡೇಟಿಂಗ್ ನಲ್ಲಿರುವ ವಿಚಾರವನ್ನು ಮೌನಿ ಯಾವತ್ತು ಒಪ್ಪಿಕೊಂಡಲ್ಲ, ಆ ಬಗ್ಗೆ ಮಾತನಾಡುವುದನ್ನು ನಿರಾಕರಿಸುತ್ತಾರೆ. ಹಾಗಾಗಿ ಮೌನಿ ನಿಜವಾಗಿಯೂ ಸೂರಜ್ ಅವರನ್ನೇ ಮದುವೆಯಾಗುತ್ತಾರಾ ಅಥವಾ ಬೇರೆ ಇನ್ಯಾರಾದರೂ ಇದ್ದಾರಾ ಎನ್ನುವುದು ಸದ್ಯದಲ್ಲೇ ಬಹಿರಂಗವಾಗುವ ಸಾಧ್ಯತೆ ಇದೆ. ಒಂದು ವೇಳೆ ಜನವರಿಯಲ್ಲಿ ಮೌನಿ ರಾಯ್ ಹಸೆಮಣೆ ಏರಿದರೆ ಬಾಲಿವುಡ್ ನಲ್ಲಿ ಮತ್ತೊಂದು ಮದುವೆ ಸಂಭ್ರಮ ಮನೆಮಾಡಲಿದೆ. ಈಗಾಗಲೇ ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

  English summary
  KGF Actress Mouni Roy to marry boyfriend Suraj Nambiar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X