For Quick Alerts
  ALLOW NOTIFICATIONS  
  For Daily Alerts

  ಮದುವೆಯಾಗಲಿದ್ದಾರೆ ಕೆಜಿಎಫ್ ನಟಿ: ವರ ಯಾರು ಗೊತ್ತೆ?

  |

  ಸಣ್ಣ ಪಾತ್ರ ಮಾಡಿದವರಿಗೂ ದೊಡ್ಡ ಹೆಸರು ತಂದುಕೊಟ್ಟ ಸಿನಿಮಾ 'ಕೆಜಿಎಫ್'. ನಟಿಸಿದವರಿಗೆ ಮಾತ್ರವಲ್ಲ ತಂತ್ರಜ್ಞರಿಗೆ, ತೆರೆ ಹಿಂದೆ ಕೆಲಸ ಮಾಡಿದವರಿಗೂ ದೊಡ್ಡ ಹೆಸರನ್ನು ಗಳಿಸಿಕೊಟ್ಟಿದೆ ಕೆಜಿಎಫ್.

  ಕೆಜಿಎಫ್ ಸಿನಿಮಾದ ಹಿಂದಿ ಡಬ್‌ನಲ್ಲಿ 'ಗಲಿ-ಗಲಿ' ಹಾಡಿಗೆ ಸೊಂಟ ಬಳುಕಿಸಿದ್ದ ನಟಿ ಮೌನಿ ರಾಯ್ ಆ ನಂತರ ಕನ್ನಡ ಪ್ರೇಕ್ಷಕರಿಗೂ ಹತ್ತಿರವಾದರು. ಇದೀಗ ಈ ನಟಿ ಮದುವೆ ಆಗುತ್ತಿದ್ದಾರೆ.

  'ನಾಗಿನ್' ಧಾರಾವಾಹಿಯಿಂದಲೂ ಸಖತ್ ಖ್ಯಾತಿ ಗಳಿಸಿರುವ ಈ ನಟಿ ಸೂರಜ್ ನಂಬಿಯಾರ್ ಎಂಬುವರೊಂದಿಗೆ ಕೆಲವ ವರ್ಷಗಳಿಂದ ಪ್ರೀತಿಯಲ್ಲಿದ್ದರು. ಇದೀಗ ಈ ಇಬ್ಬರೂ ವಿವಾಹವಾಗಲಿದ್ದಾರೆ.

  ಮೌನಿ ರಾಯ್ ಪೋಷಕರು ಹಾಗೂ ಸೂರಜ್ ನಂಬೂದಿರಿ ಪೋಷಕರು ನಟಿ ಮಂದಿರಾ ಬೇಡಿ ಅವರ ನಿವಾಸದಲ್ಲಿ ಪರಸ್ಪರ ಒಟ್ಟಾಗಿ ಚರ್ಚೆ ನಡೆಸಿದ್ದಾರೆ. ಈ ಭೇಟಿಗೆ ಸಂಬಂಧಿಸಿದ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  ಈ ವರ್ಷಾರಂಭದಲ್ಲಿ ಮೌನಿ ರಾಯ್ ಅವರು ಸೂರಜ್ ನಂಬಿಯಾರ್ ಅವರ ಕುಟುಂಬದೊಂದಿಗೆ ದುಬೈ ನಲ್ಲಿ ಹೊಸ ವರ್ಷಾಚರಣೆ ಮಾಡಿದ್ದರು. ಆ ವಿಡಿಯೋ ಸಹ ವೈರಲ್ ಆಗಿತ್ತು. ಆಗಲೇ ಮೌನಿ ಹಾಗೂ ಸೂರಜ್ ವಿವಾಹವಾಗುತ್ತಾರೆ ಎನ್ನಲಾಗಿತ್ತು.

  ಇದೀಗ ಮಂದಿರಾ ಬೇಡಿ ಮನೆಯಲ್ಲಿ ಪರಸ್ಪರ ಭೇಟಿಯಾಗಿದ್ದ ಈ ಯುವ ಜೋಡಿಯ ಪೋಷಕರು ವಿವಾಹ ಕಾರ್ಯಕ್ರಮದ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.

  ಇನ್ನು ನಟಿ ಮೌನಿ ರಾಯ್ ಹಲವಾರು ಟಿವಿ ಧಾರಾವಾಹಿ, ರಿಯಾಲಿಟಿ ಶೋ ಹಾಗೂ ಬಿಗ್‌ಬಾಸ್ ನಲ್ಲಿಯೂ ಅತಿಥಿಯಾಗಿ ಭಾಗವಹಿಸಿದ್ದಾರೆ. ನಾಗಿನ್‌ ಗೂ ಮೊದಲು 'ದೇವೋಂಕಿ ದೇವ್ ಮಹಾದೇವ್' ಧಾರಾವಾಹಿಯಲ್ಲಿ ಸತಿ ಪಾತ್ರದಲ್ಲಿ ನಟಿಸಿದ್ದರು.

  ತೆಲುಗುನಲ್ಲಿ ರಶ್ಮಿಕಾ ಜಾಗಕ್ಕೆ ಬಂತು ಆಪತ್ತು | Filmibeat Kannada

  ಇದೀಗ ಅಮಿತಾಬ್, ರಣಬೀರ್ ಕಪೂರ್, ಆಲಿಯಾ ನಟನೆಯ 'ಬ್ರಹ್ಮಾಸ್ತ್ರ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಮೌನಿ ರಾಯ್.

  English summary
  Actress Mouni Roy and her boyfriend Suraj Nambiar to be in wedlock soon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X