ಮೌನಿ ರಾಯ್ ರಾಯಲ್ ವೆಡ್ಡಿಂಗ್: ಸೂರಜ್ ನಂಬಿಯಾರ್ ಜೊತೆ ಸಪ್ತಪದಿ ತುಳಿದ ಮೌನಿ!
ಬಾಲಿವುಡ್ ಬೆಡಗಿ ಮೌನಿ ರಾಯ್ ಕೆಜಿಎಫ್ ಸಿನಿಮಾದಲ್ಲಿ ಡಾನ್ಸ್ ಮಾಡಿ ಮತ್ತಷ್ಟು ಖ್ಯಾತಿ ಗಳಿಸಿದ್ದಾರೆ. ಈ ಬೆಡಗಿ ಸದ್ಯ ಮದುವೆ ವಿಚಾರವಾಗಿ ಸುದ್ದಿಯಲ್ಲಿ ಇದ್ದಾರೆ. ಮೌನಿ ರಾಯ್ ಮದುವೆ ಆಗಿ ವೈವಾಹಿಕ ಬಾಳಿಗೆ ಕಾಲಿಟ್ಟಿದ್ದಾರೆ. ತಮ್ಮ ಬಹುಕಾಲದ ಗೆಳೆಯ ಸೂರಜ್ ನಂಬಿಯಾರ್ ಜೊತೆಗೆ ಸಪ್ತಪದಿ ತುಳಿದ್ದಾರೆ ಮೌನಿ ರಾಯ್.
ಗೋವಾದ ವಾಗೋಟರ್ ಬೀಚ್ ಬಳಿ ಮೌನಿ ರಾಯ್ ಮತ್ತು ಸೂರಜ್ ವಿವಾಹ ಅತ್ಯಂತ ಸಂಭ್ರಮದಿಂದ ನಡೆದಿದೆ. ಬೀಚ್ ಬಳಿಯ ಐಷಾರಾಮಿ ಹೋಟೆಲ್ ಒಂದರಲ್ಲಿ ಮದುವೆ ಕಾರ್ಯಗಳು ನೆರವೇರಿವೆ. ಇವರ ಮದುವೆಗಾಗಿ ಪಂಚತಾರಾ ಹೋಟೆಲ್ ಬುಕ್ ಮಾಡಲಾಗಿತ್ತು. ಬೀಚ್ ಬದಿಯಲ್ಲಿ ಮದುವೆ ಸಮಾರಂಭ ಜೋರಾಗಿ ನಡೆದಿದೆ. ಈ ಮದುವೆಯಲ್ಲಿ ಕೇವಲ ಆಪ್ತರು ಮತ್ತು ಕುಟುಂಬಸ್ಥರು ಮಾತ್ರ ಭಾಗಿ ಆಗಿದ್ದಾರೆ. ಕೊರೊನಾ ಕಾರಣಕ್ಕೆ ಹೆಚ್ಚಿನ ಜನರಿಗೆ ಮದುವೆಗೆ ಆಹ್ವಾನ ನೀಡಿಲ್ಲ.
ಮದುಮಗಳಾಗಿ ಮೌನಿ ರಾಯ್ ಕಂಗೊಳಿಸಿದ್ದಾರೆ. ಬಿಳಿ ಮತ್ತು ಕೆಂಪು ಬಣ್ಣದ ಸೀರೆಯುಟ್ಟು, ಮೈ ತುಂಬಾ ಒಡವೆ ಹಾಕಿಕೊಂಡು ಮೌನಿ ರಾಯ್ ಮಿಂಚಿದ್ದಾರೆ. ಸೂರಜ್ ಅವರು ಸರಳವಾಗಿ ಕುರ್ತಾ ಧರಿಸಿ ಕಾಣಿಸಿಕೊಂಡಿದ್ದಾರೆ. ಮೌನಿ ರಾಯ್ ತಮ್ಮ ಗೆಳೆಯನೊಂದಿಗೆ ತಮ್ಮ ಇಚ್ಛೆಯಂತೆ ಮದುವೆ ಆಗಿದ್ದಾರೆ.




Click it and Unblock the Notifications










