twitter
    For Quick Alerts
    ALLOW NOTIFICATIONS  
    For Daily Alerts

    ಮೌನಿ ರಾಯ್ ರಾಯಲ್ ವೆಡ್ಡಿಂಗ್: ಸೂರಜ್ ನಂಬಿಯಾರ್ ಜೊತೆ ಸಪ್ತಪದಿ ತುಳಿದ ಮೌನಿ!

    |

    ಬಾಲಿವುಡ್‌ ಬೆಡಗಿ ಮೌನಿ ರಾಯ್ ಕೆಜಿಎಫ್ ಸಿನಿಮಾದಲ್ಲಿ ಡಾನ್ಸ್ ಮಾಡಿ ಮತ್ತಷ್ಟು ಖ್ಯಾತಿ ಗಳಿಸಿದ್ದಾರೆ. ಈ ಬೆಡಗಿ ಸದ್ಯ ಮದುವೆ ವಿಚಾರವಾಗಿ ಸುದ್ದಿಯಲ್ಲಿ ಇದ್ದಾರೆ. ಮೌನಿ ರಾಯ್‌ ಮದುವೆ ಆಗಿ ವೈವಾಹಿಕ ಬಾಳಿಗೆ ಕಾಲಿಟ್ಟಿದ್ದಾರೆ. ತಮ್ಮ ಬಹುಕಾಲದ ಗೆಳೆಯ ಸೂರಜ್ ನಂಬಿಯಾರ್ ಜೊತೆಗೆ ಸಪ್ತಪದಿ ತುಳಿದ್ದಾರೆ ಮೌನಿ ರಾಯ್.

    ಗೋವಾದ ವಾಗೋಟರ್ ಬೀಚ್‌ ಬಳಿ ಮೌನಿ ರಾಯ್ ಮತ್ತು ಸೂರಜ್ ವಿವಾಹ ಅತ್ಯಂತ ಸಂಭ್ರಮದಿಂದ ನಡೆದಿದೆ. ಬೀಚ್ ಬಳಿಯ ಐಷಾರಾಮಿ ಹೋಟೆಲ್ ಒಂದರಲ್ಲಿ ಮದುವೆ ಕಾರ್ಯಗಳು ನೆರವೇರಿವೆ. ಇವರ ಮದುವೆಗಾಗಿ ಪಂಚತಾರಾ ಹೋಟೆಲ್ ಬುಕ್ ಮಾಡಲಾಗಿತ್ತು. ಬೀಚ್ ಬದಿಯಲ್ಲಿ ಮದುವೆ ಸಮಾರಂಭ ಜೋರಾಗಿ ನಡೆದಿದೆ. ಈ ಮದುವೆಯಲ್ಲಿ ಕೇವಲ ಆಪ್ತರು ಮತ್ತು ಕುಟುಂಬಸ್ಥರು ಮಾತ್ರ ಭಾಗಿ ಆಗಿದ್ದಾರೆ. ಕೊರೊನಾ ಕಾರಣಕ್ಕೆ ಹೆಚ್ಚಿನ ಜನರಿಗೆ ಮದುವೆಗೆ ಆಹ್ವಾನ ನೀಡಿಲ್ಲ.

    ಮದುಮಗಳಾಗಿ ಮೌನಿ ರಾಯ್ ಕಂಗೊಳಿಸಿದ್ದಾರೆ. ಬಿಳಿ ಮತ್ತು ಕೆಂಪು ಬಣ್ಣದ ಸೀರೆಯುಟ್ಟು, ಮೈ ತುಂಬಾ ಒಡವೆ ಹಾಕಿಕೊಂಡು ಮೌನಿ ರಾಯ್ ಮಿಂಚಿದ್ದಾರೆ. ಸೂರಜ್ ಅವರು ಸರಳವಾಗಿ ಕುರ್ತಾ ಧರಿಸಿ ಕಾಣಿಸಿಕೊಂಡಿದ್ದಾರೆ. ಮೌನಿ ರಾಯ್ ತಮ್ಮ ಗೆಳೆಯನೊಂದಿಗೆ ತಮ್ಮ ಇಚ್ಛೆಯಂತೆ ಮದುವೆ ಆಗಿದ್ದಾರೆ.

    Mouni Roy Weds Suraj Nambiar With Grand Wedding Celebration
    ಮದುವೆಗೂ ಒಂದು ದಿನ ಮೊದಲೆ ಮದುವೆ ಕಾರ್ಯಗಳು ಆರಂಭ ಆಗಿದ್ದು, ಅರಿಶಿನ ಶಾಸ್ತ್ರ ಮತ್ತು ಮೆಹೆಂದಿ ಶಾಸ್ತ್ರಗಳು ಅದ್ದೂರಿಯಾಗಿ ನೆರವೇರಿವೆ. ಹಳದಿ ಬಣ್ಣದ ಉಡುಪಿನಲ್ಲಿ ಮದುಮಗಳು ನಟಿ ಮೌನಿ ರಾಯ್ ಮತ್ತು ವರ ಸೂರಜ್ ಮಿಂಚಿದ್ದಾರೆ. ಮೆಹೆಂದಿ, ಹಳದಿ ಶಾಸ್ತ್ರದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಮೌನಿ ಹಳದಿ, ಹಸಿರು, ಬಿಳಿ ಬಣ್ಣದ ಲೆಹೆಂಗ ತೊಟ್ಟರೆ, ಸೂರಜ್ ಅದೇ ಕಾಂಬಿನೇಷನ್‌ನ ಪೈಜಾಮಾ ತೊಟ್ಟು ಕಂಗೊಳಿಸಿದ್ದಾರೆ.

    Mouni Roy Weds Suraj Nambiar With Grand Wedding Celebration
    ಮೌನಿ ರಾಯ್ ಹಾಗೂ ಸೂರಜ್ ನಂಬಿಯಾರ್ ವಿದೇಶದಲ್ಲಿ ವಿವಾಹವಾಗಲಿದ್ದಾರೆ ಎನ್ನಲಾಗಿತ್ತು. ಈ ಜೋಡಿ ವಿದೇಶದಲ್ಲಿ ಮದುವೆ ಆಗಲು ಯೋಜನೆ ರೂಪಿಸಿತ್ತು. ಆದರೆ ಈಗ ಯೋಜನೆ ಬದಲಾಗಿದ್ದು, ಈ ಜೋಡಿಯು ಗೋವಾದ ಕಡಲ ತೀರದಲ್ಲಿ ಅದ್ಧೂರಿಯಾಗಿ ವಿವಾಹವಾಗಿದೆ.

    English summary
    Mouni Roy Weds Suraj Nambiar Celebration Takes Places In Goa beach
    Thursday, January 27, 2022, 17:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X