ಮತ್ತೊಮ್ಮೆ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ಕೆಜಿಎಫ್ ನಟಿ ...!

ಸೆಲೆಬ್ರೆಟಿಗಳಿಗೆ ತಮ್ಮ ಸೌಂದರ್ಯ ಕೊಂಚ ಡಲ್ ಹೊಡೀತಿದೆ ಅಂತ ಗೊತ್ತಾದ ತಕ್ಷಣವೇ ಸರ್ಜರಿಗಳ ಮೊರೆ ಹೋಗುತ್ತಾರೆ. ಲಕ್ಷಾಂತರ ರೂಪಾಯಿಗಳನ್ನು ನೀರಿನಂತೆ ಖರ್ಚು ಮಾಡಿ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ. ಈ ಸಾಲಿಗೆ ಈಗ ಬಾಲಿವುಡ್ ನಾಯಕಿ ಮೌನಿ ರಾಯ್ ತುಂಬಾ ಹಿಂದೆನೇ ಸೇರಿಕೊಂಡಿದ್ದಾರೆ ಎನ್ನುವ ಅನುಮಾನ ತುಂಬಾ ಹಿಂದೆಯಿಂದಲೂ ಅನೇಕರಲ್ಲಿದೆ. ಮೌನಿ ರಾಯ್ ಅವರದ್ದು ಸಹಜ ಸೌಂದರ್ಯ ಅಲ್ಲ ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗಿದೆ.

ಈಗ ಈ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಹೌದು, ಮೌನಿ ರಾಯ್ ಕೆ.ಜಿ.ಎಫ್ ಚಿತ್ರದ ಹಿಂದಿ ವರ್ಷನ್‌ನಲ್ಲಿ ಹೆಜ್ಜೆ ಹಾಕಿದ್ದ ಮದನಾರಿ. ನೋಡಲು ಶಿಲಾಬಾಲಿಕೆಯಂತೆ ಇರುವ ಮೌನಿ ತಮ್ಮ ಕನಸಿನ ಈ ಪ್ರಯಾಣವನ್ನ ಆರಂಭ ಮಾಡಿದ್ದು ಕಿರುತೆರೆಯ ಮೂಲಕ. ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ ಧಾರಾವಾಹಿ ಇವರ ಮೊದಲ ಹೆಜ್ಜೆ.

mouni-roys-latest-look-has-left-netizens-questioning-whether-she-has-had-another-surgery

ಆ ನಂತರ ಕಸ್ತೂರಿ.. .. ದೇವೊಂಕೇ ದೇವ್ ಮಹಾದೇವ್ ಸೇರಿ ಕೆಲ ಧಾರಾವಾಹಿ ಮಾಡಿದ್ದ ಮೌನಿ ರಾಯ್ ಅದೃಷ್ಟ ಏಕ್ತಾ ಕಪೂರ್ ಕಚೇರಿಯಲ್ಲಿತ್ತು. ಏಕ್ತಾ ನಿರ್ಮಾಣದ ನಾಗಿನ್ ಬೇಕಿದ್ದ ಹೆಸರನ್ನ ಇವರಿಗೆ ತಂದು ಕೊಡ್ತು.

ಅಲ್ಲಿಂದಾಚೆ.. ಮೌನಿ ಒಂದಾದ ಮೇಲೊಂದು ಅವಕಾಶ ಪಡೆದರು. ಐಟಂ ಹಾಡುಗಳಿಗೆ ಹೆಜ್ಜೆ ಹಾಕ್ತಾನೇ, ನಾಯಕಿಯಾಗುವ ''ಗೋಲ್ಡ್‌''ನ ಅವಕಾಶ ಪಡೆದರು. ಬ್ರಹ್ಮಾಸ್ತ್ರ ಚಿತ್ರದಲ್ಲಿ ಕೂಡ ಪ್ರಮುಖ ಪಾತ್ರವನ್ನ ನಿರ್ವಹಿಸಿದ್ದರು. ಎರಡು ವರ್ಷದ ಹಿಂದೆ ಸೂರಜ್ ನಂಬಿಯಾರ್ ಅವರನ್ನ ಮದುವೆಯೂ ಆದರು. ಸದ್ಯಕ್ಕೆ ಮೌನಿ ಸುಖಿ ಸಂಸಾರಿ.

ಇಂಥಾ ಮೌನಿ ರಾಯ್ ಇತ್ತೀಚೆಗೆ ದಿಶಾ ಪಠಾಣಿ ಮತ್ತು ಸೋನಂ ಭಾಜ್ವಾ ಜೊತೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಮೌನಿ ರಾಯ್ ಅವರನ್ನು ನೋಡಿದ ಅನೇಕರು ಮೌನಿ ಮತ್ತೊಮ್ಮೆ ತಮ್ಮ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಿಸಿಕೊಂಡಿದ್ದಾರೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಇವಳು ಮುದ್ದಾಗಿಯಂತು ಕಾಣುತ್ತಿಲ್ಲ ಬದಲಿಗೆ ಮೇಲಿಂದ ಮೇಲೆ ಪ್ಲಾಸ್ಟಿಕ್ ಸರ್ಜರಿಗಳನ್ನು ಮಾಡಿಸಿಕೊಂಡು ಸಂಪೂರ್ಣ ಮುಖ ಹಾಳು ಮಾಡಿಕೊಂಡಿದ್ದಾಳೆ, ಚಿಕ್ಕ ಮಕ್ಕಳು ಅಂಕುಡೊಂಕು ಚಿತ್ರ ಬಿಡಿಸಿದಂತೆ ವೈದ್ಯರು ತಮ್ಮ ಕೈಚಳಕವನ್ನು ತೋರಿಸಿದ್ದಾರೆ ಎಂದು ಒಬ್ಬರು ಹೇಳಿದ್ದರೆ ಮತ್ತೊಮ್ಮೆ ಮುಖದ ಆಕಾರವನ್ನು ಬದಲಿಸಿಕೊಂಡಿದ್ದಾರೆ ಎಂದು ಇನ್ನೊಬ್ಬರು ಹೇಳಿದ್ಧಾರೆ. ಸರ್ಜರಿ ಮಾಡಿಸಿಕೊಂಡು ಮಾಡಿಸಿಕೊಂಡು ಯಾರೆನ್ನುವುದನ್ನು ಕಂಡು ಹಿಡಿಯಲು ಸಾಧ್ಯವಾಗದಷ್ಟು ಬದಲಾಗಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನುಳಿದಂತೆ ಮೌನಿ ರಾಯ್ ಸದ್ಯ ಭೂತನಿ ಎಂಬ ಚಿತ್ರವನ್ನು ಮಾಡಿದ್ದಾರೆ. ಸಂಜಯ್ ದತ್, ಸನ್ನಿ ಸಿಂಗ್, ಪಲಕ್ ತಿವಾರಿ ಮತ್ತು ನಿಕ್ ಈ ಚಿತ್ರದಲ್ಲಿ ಮೌನಿ ರಾಯ್‌ಗೆ ಸಾಥ್ ನೀಡಿದ್ದಾರೆ. ಏಪ್ರಿಲ್ 18ರಂದು ಈ ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರ ಹೊರತು ಪಡಿಸಿದರೆ ಸಲಾಕಾರ್ ಎಂಬ ಚಿತ್ರದಲ್ಲಿ ಕೂಡ ಮೌನಿ ಆಕ್ಟ್ ಮಾಡುತ್ತಿದ್ದಾರೆ.

ಸುಲ್ತಾನ್ ಆಫ್ ದೆಹಲಿ ವೆಬ್ ಸೀರಿಸ್‌ನಲ್ಲಿ ಕಾಣಿಸಿಕೊಂಡಿದ್ದ ಮೌನಿ ರಾಯ್ ದಿ ವರ್ಜಿನ್ ಟ್ರೀ ಎಂಬ ಚಿತ್ರವನ್ನು ಕೂಡ ಮುಗಿಸಿದ್ದಾರೆ. ಬೇರೆ ಬೇರೆ ತರಹದ ಪಾತ್ರಗಳನ್ನ ಎದುರು ನೋಡುತ್ತಿದ್ದಾರೆ. ಇನ್ನೂ ಇದೆಲ್ಲದರ ನಡುವೆ ಕುಣಿಯಲು ಆಲ್ಬಂ ಹಾಡುಗಳು ಇದ್ದೇ ಇವೆ. ಒಟ್ನಲ್ಲಿ ಸದ್ಯ ಮೌನಿ ರಾಯ್ ಮುಖದ ಆಕಾರ ಮತ್ತೆ ಬದಲಾಗಿದೆ. ಪ್ಲಾಸ್ಟಿಕ್ ಸರ್ಜರಿಯನ್ನು ಮೌನಿ ರಾಯ್ ಮತ್ತೊಮ್ಮೆ ಮಾಡಿಸಿಕೊಂಡಿದ್ದಾರೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ನಿಜಕ್ಕೂ ಮೌನಿ ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಿದ್ದಾರಾ ? ಉತ್ತರ ಮೌನಿ ರೈಗೆ ಮಾತ್ರ ಗೊತ್ತು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X