For Quick Alerts
  ALLOW NOTIFICATIONS  
  For Daily Alerts

  ಕೋವಿಡ್ ವಿರುದ್ಧ ಹೋರಾಟಕ್ಕೆ ನೆರವಾಗಲು ಒಂದಾದ ನಟರು, ಕ್ರಿಕೆಟಿಗರು

  |

  ಭಾರತವು ಕೊರೊನಾ ವಿರುದ್ಧ ಹೋರಾಡಬೇಕಾದರೆ ಕೆಲವು ಬಾಲಿವುಡ್‌ ಸೆಲೆಬ್ರಿಟಿಗಳು ವಿದೇಶದಲ್ಲಿ ಮೋಜು ಮಾಡಲು ತೆರಳಿದ್ದು ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ ಈಗ ಕೆಲವಾದರೂ ಜವಾಬ್ದಾರಿಯುತ ಬಾಲಿವುಡ್ ನಟ, ನಿರ್ದೇಶಕರು ಒಟ್ಟಾಗಿ ಕೋವಿಡ್ ವಿರುದ್ಧದ ಹೋರಾಟಕ್ಕೆ ನೆರವಾಗಲು ಒಂದಾಗಿದ್ದಾರೆ. ಅವರ ಜೊತೆಗೆ ದಕ್ಷಿಣ ಭಾರತದ ಕೆಲವು ನಟರು ಹಾಗೂ ಕ್ರಿಕೆಟಿಗರು ಸಹ ಸೇರಿದ್ದಾರೆ.

  'ಐ ಬ್ರೀತ್ ಫಾರ್ ಇಂಡಿಯಾ' ಹೆಸರಿನಲ್ಲಿ ಎನ್‌ಜಿಓ ಒಂದು ಆನ್‌ಲೈನ್ ಕಾರ್ಯಕ್ರಮ ಆಯೋಜಿಸಿ ಚಂದಾ ಸಂಗ್ರಹಿಸಿ ಅದನ್ನು ಕೋವಿಡ್ ವಿರುದ್ಧ ಹೋರಾಟಕ್ಕೆ ಬಳಸುವ ಯೋಜನೆಯೊಂದಿಕೆ ಆನ್‌ಲೈನ್‌ ವೇದಿಕೆಯೊಂದನ್ನು ಕಲ್ಪಿಸಿದೆ.

  ಈ ಆನ್‌ಲೈನ್‌ ನೆರವು ಸಂಗ್ರಹ ಕಾರ್ಯಕ್ರಮದಲ್ಲಿ ಹಿರಿಯ ನಟ ಅಮಿತಾಬ್ ಬಚ್ಚನ್, ಅನಿಲ್ ಕಪೂರ್, ಅನುಪಮ್ ಖೇರ್, ಯುವನಟಿ ಕೃತಿ ಸೆನನ್, ಜೆನಿಲಿಯಾ ಡಿಸೋಜಾ, ಅಭಿಷೇಕ್ ಬಚ್ಚನ್ ದಕ್ಷಿಣ ಭಾರತದ ಸೆಲೆಬ್ರಿಟಿಗಳಾದ ಸಮಂತಾ, ರಾಣಾ ದಗ್ಗುಬಾಟಿ, ಬಾಲಿವುಡ್‌ನ ರಿತೇಶ್ ದೇಶ್‌ಮುಖ್, ನಿರ್ದೇಶಕ ಕರಣ್ ಜೋಹರ್ ಇನ್ನೂ ಕೆಲವರು ಭಾಗವಹಿಸಲಿದ್ದಾರೆ.

  ಕ್ರಿಕೆಟಿಗರಾದ ಶಿಖರ್ ಧವನ್, ರವಿಚಂದ್ರನ್ ಅಶ್ವಿನ್, ರಿಷಬ್ ಪಂತ್ ಅವರುಗಳು ಸಹ ಈ ವರ್ಚ್ಯುವಲ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ವರ್ಚ್ಯುವಲ್ ಕಾರ್ಯಕ್ರಮವನ್ನು ಮಾಜಿ ವಿಶ್ವಸುಂದರಿ ಲಾರಾ ದತ್ತ ಹಾಗೂ ಶ್ಯಾಮಲ್ ವಲ್ಲಭ್ಜಿ ನಿರೂಪಣೆ ಮಾಡಲಿದ್ದಾರೆ. ವರ್ಚ್ಯುವಲ್ ಕಾರ್ಯಕ್ರಮವು ಇದೇ ಭಾನುವಾರ ನಡೆಯಲಿದೆ.

  ಈ ಕಾರ್ಯಕ್ರಮದ ಮೂಲಕ ಕನಿಷ್ಟ 10 ಕೋಟಿ ಹಣವನ್ನು ಸಂಗ್ರಹಿಸುವ ಉದ್ದೇಶವನ್ನು ಎನ್‌ಜಿಓ ಹೊಂದಿದೆ. ಸಂಗ್ರಹಿಸಲ್ಪಟ್ಟ ಹಣವನ್ನು ಕೊರೊನಾ ವಿರುದ್ಧ ಹೋರಾಟಕ್ಕೆ ಬಳಸಲಾಗುವುದು.

  ಇದರ ಹೊರತಾಗಿ ನಟ ಸೋನು ಸೂದ್ ಕೋವಿಡ್‌ ಸಂಕಷ್ಟಕ್ಕೆ ನೆರವಾಗುವ ವಿಷಯದಲ್ಲಿ ಮುಂಚೂಣಿಯಲ್ಲಿದ್ದಾರೆ. ನಟ ಅಕ್ಷಯ್ ಕುಮಾರ್, ಅಜಯ್ ದೇವಗನ್, ಸುನಿಲ್ ಶೆಟ್ಟಿ, ಸಲ್ಮಾನ್ ಖಾನ್, ಜಾನ್ ಅಬ್ರಹಾಂ ಅವರುಗಳು ಸಹ ಕೋವಿಡ್ ಸಂಕಷ್ಟಕ್ಕೆ ತಮ್ಮದೇ ಆದ ರೀತಿಯಲ್ಲಿ ನೆರವಾಗುತ್ತಿದ್ದಾರೆ.

  ಕೊರೊನಾ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾದ ಮೇಘಾ ಶೆಟ್ಟಿ | Filmibeat Kannada

  ನಟಿಯರಾದ ತಾಪ್ಸಿ ಪನ್ನು, ಸ್ವರಾ ಭಾಸ್ಕರ್, ಆಲಿಯಾ ಭಟ್, ಭೂಮಿ ಪಡ್ನೇಕರ್, ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್ ಇನ್ನೂ ಕೆಲವರು ಟ್ವಿಟ್ಟರ್‌ ಮೂಲಕ ತಮ್ಮ ಶಕ್ತ್ಯಾನುಸಾರ ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸುತ್ತಿದ್ದಾರೆ.

  English summary
  Movie celebrities and some cricketers join hands to raise fund to help covid 19 affected people. Sunday will be a virtual fund raiser event.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X