twitter
    For Quick Alerts
    ALLOW NOTIFICATIONS  
    For Daily Alerts

    Brahmastra First Review : 'ಬ್ರಹ್ಮಾಸ್ತ್ರ' ಮೂಲಕ ಮತ್ತೊಂದು ಫ್ಲಾಪ್‌ನತ್ತ ಬಾಲಿವುಡ್: ವಿಮರ್ಶಕ ಟೀಕೆ

    |

    ಫ್ಲಾಪ್‌ಗಳಿಂದ ಬಸವಳಿದಿರುವ ಬಾಲಿವುಡ್‌ಗೆ ಚೈತನ್ಯ ತುಂಬಲು ಒಂದೊಳ್ಳೆ ಹಿಟ್ ಸಿನಿಮಾದ ಅವಶ್ಯಕತೆ ಇದೆ. ಇದೀಗ ರಣ್ಬೀರ್ ಕಪೂರ್-ಆಲಿಯಾ ಭಟ್ ನಟನೆಯ 'ಬ್ರಹ್ಮಾಸ್ತ್ರ' ಸಿನಿಮಾ ಬಿಡುಗಡೆ ಆಗುತ್ತಿದ್ದು, ಈ ಸಿನಿಮಾದ ಮೇಲೆ ಬಾಲಿವುಡ್ಡಿಗರು ಭಾರಿ ನಿರೀಕ್ಷೆ ಇಟ್ಟಿದ್ದಾರೆ.

    ಸಾಮಾನ್ಯ ಹಿಂದಿ ಸಿನಿಮಾಗಳ ಮಾದರಿಯಲ್ಲಲ್ಲದೆ ಫ್ಯಾಂಟಸಿ ಕತೆಯನ್ನು ಹೊಂದಿರುವ 'ಬ್ರಹ್ಮಾಸ್ತ್ರ' ಮೇಲೆ ಹಲವು ನಿರೀಕ್ಷೆಗಳಿವೆ. ಸಿನಿಮಾದ ನಿರ್ಮಾಣ ಸಂಸ್ಥೆಯಾಗಿರುವ ಧರ್ಮಾ ಪ್ರೊಡಕ್ಷನ್ ಸಹ ಸಿನಿಮಾವನ್ನು ಅದ್ಧೂರಿಯಾಗಿಯೇ ಪ್ರಚಾರ ಮಾಡುತ್ತಿದೆ.

    Brahmastra First Review: ಬ್ರಹ್ಮಾಸ್ತ್ರ ಬಾಲಿವುಡ್ ಮಂದಿಗೆ ಅಪರೂಪ, ಆದರೆ... !Brahmastra First Review: ಬ್ರಹ್ಮಾಸ್ತ್ರ ಬಾಲಿವುಡ್ ಮಂದಿಗೆ ಅಪರೂಪ, ಆದರೆ... !

    ಆದರೆ ಕೆಲವು ವಿಮರ್ಶಕರು ಸಿನಿಮಾವನ್ನು ಕಳಪೆ ಎಂದು ಘೋಷಿಸಿದ್ದಾರೆ. ವಿದೇಶಗಳ ಸೆನ್ಸಾರ್ ಬೋರ್ಡ್‌ಗಳಲ್ಲಿ ಸಿನಿಮಾದ ಪ್ರದರ್ಶನ ಆಗಿದ್ದು, ಭಾರತದ ಪ್ರಮುಖ ಸಿನಿಮಾಗಳಿಗೆ ಅರ್ಲಿ ರಿವ್ಯೂ (ಬಿಡುಗಡೆ ಪೂರ್ವ ವಿಮರ್ಶೆ) ನೀಡುವ ಉಮೈರ್ ಸಂಧು ಈಗಾಗಲೇ ಸಿನಿಮಾ ನೋಡಿದ್ದು, ಸಿನಿಮಾ ಫ್ಲಾಪ್ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

    Movie Critic Umair Sandhu Said Brahmastra Is A Very Average Movie

    ನಿನ್ನೆ (ಸೆಪ್ಟೆಂಬರ್ 07) ಟ್ವೀಟ್ ಮಾಡಿರುವ ಉಮೈರ್ ಸಂಧು, ''ಬ್ರಹ್ಮಾಸ್ತ್ರ: 'ಲೈಗರ್' ಸಿನಿಮಾದ ಬಳಿಕ ಮತ್ತೆ ನಮ್ಮನ್ನೆಲ್ಲ ಫೂಲ್ ಮಾಡಿದ್ದಕ್ಕೆ ಧರ್ಮಾ ಪ್ರೊಡಕ್ಷನ್‌ಗೆ ಧನ್ಯವಾದ'' ಎಂದಿದ್ದಾರೆ. ಹಾಗೂ ಸಿನಿಮಾದ 2.5 ಸ್ಟಾರ್‌ಗಳನ್ನಷ್ಟೆ ನೀಡಿದ್ದಾರೆ. ಆ ಮೂಲಕ 'ಲೈಗರ್' ರೀತಿಯಲ್ಲಿಯೇ ಈ ಸಿನಿಮಾ ಸಹ ಅಟ್ಟರ್ ಫ್ಲಾಪ್ ಆಗಲಿದೆ ಎಂದಿದ್ದಾರೆ.

    ಮತ್ತೊಂದು ಟ್ವೀಟ್‌ನಲ್ಲಿ ''ಹೊಳೆಯುವುದೆಲ್ಲ ಚಿನ್ನವಲ್ಲ'' 'ಬ್ರಹ್ಮಾಸ್ತ್ರ' ಸಿನಿಮಾದಲ್ಲಿ ದೊಡ್ಡ ಸ್ಟಾರ್‌ಗಳಿದ್ದಾರೆ, ದೊಡ್ಡ ಬಜೆಟ್, ದೊಡ್ಡ ವಿಫೆಕ್ಸ್, ದೊಡ್ಡ ಸೆಟ್‌ ಎಲ್ಲ ಇದೆ ಜೊತೆಗೆ ದೊಡ್ಡ ನಿರಾಸೆಯೂ ಆಗಲಿದೆ. ಸಿನಿಮಾ ಬಹಳ ಸಾಮಾನ್ಯ ರೀತಿಯಲ್ಲಿದೆ. ಸಿನಿಮಾದಲ್ಲಿ ಆತ್ಮ ಇಲ್ಲ. ಪ್ರಚಾರ ಚೆನ್ನಾಗಿ ಮಾಡಿದ್ದಾರೆ. ಇದರಿಂದ ಬಿಡುಗಡೆಯ ಮೊದಲ ವಾರ ಹಣ ವಾಪಸ್ ಬರಬಹುದು. ಸಿನಿಮಾವು ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸೋಲುತ್ತದೆ'' ಎಂದಿದ್ದಾರೆ.

    ''ಸಿನಿಮಾದಲ್ಲಿ ರಣ್ಬೀರ್ ಕಪೂರ್ ಬಹಳ ಗೊಂದಲ್ಲಿರುವಂತೆ ಕಾಣುತ್ತಾರೆ. ಆದರೆ ಆಲಿಯಾ ನಟನೆ ಸೂಪರ್ ಆಗಿದೆ. ಮೌನಿ ರಾಯ್ ಭಯಗೊಳಿಸುವಂತೆ ಕಾಣುತ್ತಾಳೆ, ಬಹಳ ಲೌಡ್ ಆದ ಅಭಿನಯ ಆಕೆಯದ್ದು, ಅಮಿತಾಬ್ ಬಚ್ಚನ್ ಅದ್ಭುತ, ಆದರೆ ಅವರ ಪಾತ್ರ ಹೆಚ್ಚು ಸಮಯ ಇರುವುದಿಲ್ಲ. ಶಾರುಖ್ ಖಾನ್ ಎಂಟ್ರಿ ಸೂಪರ್ ಆಗಿದೆ. ಅವರು ಲೆಜೆಂಡ್'' ಎಂದಿದ್ದಾರೆ ಉಮೈರ್ ಸಂಧು.

    'ಬ್ರಹ್ಮಾಸ್ತ್ರ' ಸಿನಿಮಾ ತೀರ ಆವರೇಜ್ ಆಗಿದೆ. ಸಿನಿಮಾದಲ್ಲಿ ಸಂಗೀತ ಹಾಗೂ ವಿಎಫ್‌ಎಕ್ಸ್ ಹಾಗೂ ಕೆಲವು ದೃಶ್ಯಗಳು ಚೆನ್ನಾಗಿವೆ ಬಿಟ್ಟರೆ ಸಿನಿಮಾದಲ್ಲಿ ಆತ್ಮವೇ ಕಾಣೆಯಾಗಿದೆ'' ಎಂದಿದ್ದಾರೆ. ಉಮೈರ್ ಸಂಧು, ದುಬೈನ ಸೆನ್ಸಾರ್‌ ಬೋರ್ಡ್‌ನ ಸದಸ್ಯರಾಗಿದ್ದು ಸಿನಿಮಾಗಳನ್ನು ಮುಂಚೆಯೇ ನೋಡಿ ವಿಮರ್ಶೆ ನೀಡುತ್ತಿರುತ್ತಾರೆ. 'ಕೆಜಿಎಫ್ 2', 'RRR', 'ಪುಷ್ಪ' ಸಿನಿಮಾಗಳು ಸೂಪರ್ ಹಿಟ್ ಆಗಲಿವೆ ಎಂದು ಮೊದಲೇ ವಿಮರ್ಶೆ ಹೇಳಿದ್ದರು. 'ರಾಧೆ-ಶ್ಯಾಮ್' ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಹಿಟ್ ಆಗುವುದಿಲ್ಲ ಎಂದೂ ಸಹ ಟ್ವೀಟ್ ಮಾಡಿದ್ದರು.

    English summary
    Movie critic Umair Sandhu Brahmastra is a very average movie. He said Dharma production fools movie lovers after Liger
    Friday, September 9, 2022, 9:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X