ಕೇವಲ ಒಂದೇ ವರ್ಷದಲ್ಲಿ ಧರ್ಮೇಂದ್ರ ಮಗಳನ್ನು ಮರೆತ ಭರತ್ ತಖ್ತಾನಿ, ಹೊಸ ಹುಡುಗಿಯ ಹಿಂದೆ ಬಿದ್ದ ಈಶಾ ಡಿಯೋಲ್ ಮಾಜಿ ಪತಿ
ಚಿತ್ರರಂಗದ ಧ್ರುವತಾರೆಯರ ಬದುಕಿನಲ್ಲಿ ಸರಸ..ವಿರಸ.. ಪ್ರೇಮ.. ವಿರಹ.. ವೇದನೆ.. ವಿಚ್ಛೇದನ.. ಇವೆಲ್ಲವೂ ಮಾಮೂಲು. ಇಂದು ಜೊತೆ ಜೊತೆಯಲ್ಲಿ ಓಡಾಡುವ ಅನೇಕರು ಇಲ್ಲಿ ಮರು ದಿನವೇ ಬ್ರೇಕಪ್ ಮಾಡಿಕೊಳ್ಳುತ್ತಾರೆ. ಆದರ್ಶ ದಂಪತಿಗಳಂತೆ ಬದುಕುತ್ತೇವೆ ಎಂದು ಹೇಳಿ, ಮದುವೆಯಾದ ಕೆಲವು ದಿನಗಳ ನಂತರ ಅಥವಾ ಕೆಲ ವರ್ಷಗಳ ಬಳಿಕ ಅದ್ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಸಂಬಂಧ ಕಡಿದುಕೊಂಡೂ ಬಿಡುತ್ತಾರೆ.
ದಾಂಪತ್ಯ ಜೀವನ ನಡೆಸುತ್ತಾ ಒಬ್ಬರನ್ನೊಬ್ಬರು ಹುಚ್ಚರಂತೆ ಪ್ರೀತಿಸುವ ಅನೇಕರು ಆ ನಂತರ ತಮ್ಮ ಸಂಬಂಧಕ್ಕೆ ಗುಡ್ ಬೈ ಹೇಳಿ ಹೊರ ಬರುತ್ತಾರೆ. ಹೀಗೆ ಹೊರ ಬಂದ ನಂತರ ಅಷ್ಟೇ ವೇಗವಾಗಿ ತಮ್ಮ ಹಳೆಯ ಸಂಗಾತಿಯನ್ನು ಮರೆತು ಮತ್ಯಾರಲ್ಲೋ ಪ್ರೀತಿಯನ್ನು ಹುಡುಕಲು ಶುರು ಮಾಡುತ್ತಾರೆ. ಇದಕ್ಕೆ
ಇಶಾ ಡಿಯೋಲ್ ಮತ್ತು ಭರತ್ ತಖ್ತಾನಿಯವರ ವ್ಯೆಯಕ್ತಿಕ ಬದುಕು ಸದ್ಯದ ಉದಾಹರಣೆ.

ಹೌದು ಧರ್ಮೇಂದ್ರ ಮತ್ತು ಹೇಮಾ ಮಾಲಿನಿಯ ಮಗಳು ಇಶಾ ಡಿಯೋಲ್ 2012ರಲ್ಲಿ ಉದ್ಯಮಿ ಭರತ್ ತಖ್ತಾನಿಯನ್ನು ಮದುವೆಯಾಗಿದ್ದರು. ಒಂದು ದಶಕ ಎಲ್ಲರಂತೆ ಖುಷಿ ಖುಷಿಯಾಗಿಯೇ ಬದುಕನ್ನು ದೂಡಿದರು.
ಆದರೆ.. ಆ ನಂತರ ಸಂಬಂಧದಲ್ಲಿ ಬಿರುಕು ಕಾಣಿಸಲು ಶುರುವಾಯ್ತು. ಹೀಗಾಗಿ 2024ರಲ್ಲಿ ಭರತ್ ತಖ್ತಾನಿ ಅವರಿಂದ ಇಶಾ ಡಿಯೋಲ್ ವಿಚ್ಛೇದನ ಪಡೆದರು. ತಮ್ಮ ಇಬ್ಬರು ಮಕ್ಕಳಾದ ರಾಧ್ಯಾ ಮತ್ತು ಮಿರಾಯಾ ಅವರನ್ನು ಕರೆದುಕೊಂಡು ಮರಳಿ ತವರು ಮನೆಗೆ ಬಂದರು.
ಸದ್ಯ ಇಶಾ ಡಿಯೋಲ್ ಮರಳಿ ಚಿತ್ರರಂಗದತ್ತ ಮುಖ ಮಾಡಿದ್ದಾರೆ. ತಮ್ಮ ಮಕ್ಕಳ ಲಾಲನೆ ಪಾಲನೆಯ ಕಡೆ ಗಮನವನ್ನು ಕೂಡ ಕೊಡುತ್ತಿದ್ದಾರೆ. ಇನ್ನೂ ಮಾಜಿಯ ಪತಿಯ ನೆನಪು ಇಶಾ ಅವರಿಗೆ ಆಗಾಗ ಕಾಡುತ್ತಾ..? ಇಲ್ವಾ..? ಗೊತ್ತಿಲ್ಲ. ಆದರೆ ಇಶಾ ಡಿಯೋಲ್ ಅವರನ್ನು ಮಾತ್ರ ಅವರ ಮಾಜಿ ಪತಿ ಭರತ್ ತಖ್ತಾನಿ ಸಂಪೂರ್ಣವಾಗಿ ಮರೆತಿದ್ದಾರೆ. ಹೊಸ ಹುಡುಗಿಯ ಜೊತೆ ಸುತ್ತಾಡಲು ಶುರು ಮಾಡಿದ್ದಾರೆ. ಇದಕ್ಕೆ ಪುರಾವೆ ಎನ್ನುವಂತೆ ಭರತ್ ತಖ್ತಾನಿಯ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವೈರಲ್ ಆದ ಈ ಫೋಟೊವನ್ನು ಖುದ್ದು ಭರತ್ ತಖ್ತಾನಿಯವರೇ ಹಂಚಿಕೊಂಡಿದ್ದು, ನನ್ನ ಬದುಕಿಗೆ ನನ್ನ ಕುಟುಂಬಕ್ಕೆ ಸ್ವಾಗತ ಎಂದು ಬರೆದುಕೊಂಡಿದ್ದಾರೆ. ಇನ್ನೂ ಭರತ್ ಅವರ ಹೊಸ ಹುಡುಗಿ ಕೂಡ ಫೋಟೊಗಳನ್ನು ಹಂಚಿಕೊಂಡಿದ್ದು ಹೊಸ ಪ್ರಯಾಣ ಇಲ್ಲಿಂದ ಆರಂಭ ಎಂದು ಬರೆದುಕೊಂಡಿದ್ದಾರೆ. ಈ ಹಿನ್ನೆಲೆ.. ಭರತ್ ಅವರ ಈ ಹೊಸ ಲವ್ ಸ್ಟೋರಿಯ ಕುರಿತು ಸದ್ಯ ಹಲವರು ಚರ್ಚೆ ಮಾಡುತ್ತಿದ್ದಾರೆ. ಕೇವಲ ಒಂದೇ ವರ್ಷದಲ್ಲಿ ಇಶಾ ಡಿಯೋಲ್ ಅವರನ್ನು ಭರತ್ ಮರೆತು ಮುಂದಕ್ಕೆ ಸಾಗುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇಷ್ಟ ಪಟ್ಟು ಮದುವೆಯಾಗಿ ಹನ್ನೆರಡು ವರ್ಷ ಜೊತೆಯಲ್ಲಿದ್ದವರನ್ನು ಕೇವಲ ಒಂದೇ ವರ್ಷದಲ್ಲಿ ಮರೆಯಲು ಸಾಧ್ಯವಾ..? ಎನ್ನುವ ಪ್ರಶ್ನೆ ಕೂಡ ಸದ್ಯ ಹಲವರನ್ನು ಕಾಡುತ್ತಿದೆ.

ಅಂದ್ಹಾಗೇ ಇಶಾ ಡಿಯೋಲ್ ಅವರ ಮಾಜಿ ಪತಿ ಭರತ್ ತಖ್ತಾನಿ ಅವರ ಹೊಸ ಗೆಳತಿಯ ಹೆಸರು ಮೇಘನಾ ಲಖಾನಿ. ಇವರದ್ದೇ ಸ್ಟಾರ್ಟ್‌ಅಪ್‌ಗಳಲ್ಲಿ ಒಂದಾದ ''ಒನ್ ಮಾಡರ್ನ್ ವರ್ಲ್ಡ್'' ಪ್ರಕಾರ ಇವರ ಜನ್ಮಸ್ಥಳ ಸ್ಪೇನ್. ಬಾಲ್ಯದಿಂದಲೂ ಪರಿಸರದ ಬಗ್ಗೆ ಅಪಾರವಾದ ಕಾಳಜಿ ಹೊಂದಿರುವ ಮೇಘನಾ ತಮ್ಮ ಈ ''ಒನ್ ಮಾಡರ್ನ್ ವರ್ಲ್ಡ್'' ಮೂಲಕ ಪರಿಸರ ಸ್ನೇಹಿ ವಾಟರ್ ಬಾಟಲ್‌ಗಳನ್ನು ಮಾರುತ್ತಾರೆ. ಬೇರೆ ವಸ್ತುಗಳ ಪ್ಯಾಕೇಂಜಿಂಗ್ ಕೂಡ ಮಾಡಿ ಕೊಡುತ್ತಾರೆ. ಇನ್ನೂ ಸಮಯ ಸಿಕ್ಕಾಗೆಲ್ಲಾ ನಿರೂಪಕಿಯಾಗಿ ಕೂಡ ಮೇಘನಾ ಕೆಲಸ ಮಾಡುತ್ತಾರೆ. ಇದಲ್ಲದೇ ಇನ್ನೂ ಎರಡು ಮೂರು ಸ್ಟಾರ್ಟ್‌ಅಪ್ ಬ್ಯುಸಿನೆಸ್‌ಗಳನ್ನು ಇವರು ಮಾಡುತ್ತಿದ್ದಾರೆ.


Click it and Unblock the Notifications











